
ಧಾರವಾಡ(ಏ.23): ನೇಹಾ ಹಿರೇಮಠ ಕೊಲೆಯಾದಾಗ ಇದೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅತ್ಯಂತ ಹಗುರಾಗಿ ಮಾತಾಡಿದ್ದರು. ನಾವು ಮೊದಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಒತ್ತಾಯ ಮಾಡಿದ್ದೇವೆ. ಇವತ್ತು ಇವರು ಸಿಐಡಿಗೆ ಪ್ರಕರಣ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಇವರಿಗೆ ಜನ ಪ್ರತಿಭಟನೆಗೆ ಇಳಿದ ಮೇಲೆ ಬುದ್ದಿ ಬಂದಿದೆ. ನೀವು ಹಿರೇಮಠ ಅವರ ಹೆಸರು ಕೆಡಿಸಲು ನೋಡಿದಿರಿ ಮಾನ, ಮರ್ಯಾದೆ ತರೋ ಕೆಲಸ ನೀವು ಮಾಡೋದಿಲ್ಲ. ಆರೋಪಿ ಫೋಟೋ ಲೀಕ್ ಮಾಡಿಸಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಹಿಂದೂ ಸಮಾಜ ಗಟ್ಟಿ ಇರುವ ಕಡೆಯೇ ಹೀಗೆ ಆಗಿದೆ ಇನ್ನು ಬೇರೆ ಕಡೆ ಏನು ಗತಿ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ ಅವರು, ಬರ ಪರಿಹಾರ ವಿಚಾರದಲ್ಲಿ ನಾನು ಹೇಳೋದು ಇಷ್ಟೇ, ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡುತ್ತಿದೆ. ನಾವು ಚುನಾವಣಾ ಆಯೋಗ ಅನುಮತಿ ಪಡೆದದ್ದು ಅವರಿಗೆ ತಿಳಿಸಿದ್ದಾರೆ. ಎಸ್‌ಡಿಆರ್‌ಎಫ್‌ನಲ್ಲಿ 900 ಕೋಟಿ ಕೊಡಲಾಗಿದೆ. ಮೊದಲು ಎಸ್‌ಡಿಆರ್‌ಎಫ್‌ದಲ್ಲಿ ಕೂಡಾ ಕೇಂದ್ರ ಕೊಟ್ಟ ಮೇಲೆಯೇ ದುಡ್ಡು ಬರುತಿತ್ತು. 900 ಕೋಟಿ ಅಡ್ವಾನ್ಸ್ ಆಗಿ ಕೊಡಲಾಗಿದೆ. ಆದರೆ ನೀವು ಯುಪಿಎ ಸರ್ಕಾರ ಸಂದರ್ಭದಲ್ಲಿ ಈ ಫಂಡ್ ಕೂಡಾ ಬಿಡುಗಡೆ ಮಾಡಿರಲಿಲ್ಲ. ಯಡಿಯೂರಪ್ಪ ಅವರು ಆಗ ಸಿಎಂ ಇದ್ದಾಗ 20 ಸಾವಿರ ವರೆಗೆ ಹಣ ಕೊಟ್ಟಿದ್ದಾರೆ. ನೀವು ಏಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಹಿರಿಯ ಶ್ರೀಗಳ ಆದೇಶದಂತೆ ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ
ಇವರ ದುರಾಡಳಿತದಿಂದ ಖಜಾನೆ ಲೂಟಿ ಮಾಡಿದ್ದಾರೆ. ಇವರೀಗ ಪಾಪರ್ ಆಗಿದ್ದಾರೆ. ಕೇಂದ್ರ ಎಲ್ಲ ರಾಜ್ಯಗಳಿಗೆ ಒಂದೇ ರೀತಿ ತಕ್ಕಡಿಯಲ್ಲಿ ತೂಗಿ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಏ.28 ಕ್ಕೆ ಪ್ರಧಾನಿ ಮೋದಿ ಹಾಗೂ ಏ.30 ಕ್ಕೆ ಅಮಿತ್ ಶಾ ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.