'ಕಾಲು ಕಾಣಬೇಕೆಂದರೆ ಚಡ್ಡಿ ಧರಿಸಿ ಓಡಾಡಿ' ಅಸಹ್ಯ ಹುಟ್ಟಿಸಿದ ಬಿಜೆಪಿ ನಾಯಕನ ಮಾತು

Published : Mar 24, 2021, 09:35 PM ISTUpdated : Mar 24, 2021, 09:37 PM IST
'ಕಾಲು ಕಾಣಬೇಕೆಂದರೆ ಚಡ್ಡಿ ಧರಿಸಿ ಓಡಾಡಿ' ಅಸಹ್ಯ ಹುಟ್ಟಿಸಿದ ಬಿಜೆಪಿ ನಾಯಕನ ಮಾತು

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ/ ಬಿಜೆಪಿ ನಾಯಕನಿಂದ ತೀವ್ರ ವೈಯಕ್ತಿಕ ಟೀಕೆ/ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ/ ಮಮತಾ ಸೀರೆ ಯಾಕೆ ಧರಿಸುತ್ತೀರಿ ಬರ್ಮುಡಾ ಧರಿಸಿ ಎಂದ ನಾಯಕ

ಕೋಲ್ಕತಾ (ಮಾ. 24) ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ  ಕಾವು ರಂಗೇರಿದೆ. ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ ಸಮರ ದಿನೇ  ದಿನೇ   ಜೋರಾಗುತ್ತಿದೆ. 

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿದ್ದ ಟೀಕೆ ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

ಪಶ್ಚಿಮ ಬಂಗಾಳ ಬಿಜೆಪಿ  ಮುಖ್ಯಸ್ಥ ದಿಲೀಪ್ ಘೋಷ್ ವಿವಾದ ಎಬ್ಬಿಸುವ  ಹೇಳಿಕೆ ನೀಡಿದ್ದಾರೆ.   ಸೋಶಿಯಲ್ ಮೀಡಿಯಾದಲ್ಲಿ  ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು ಟೀಕೆ ವ್ಯಕ್ತವಾಗಿದೆ.

ಪಂಚರಾಜ್ಯ ಚುನಾವಣಗೆ ಬಿಜೆಪಿ ಕೊಟ್ಟ ಪ್ರಣಾಳಿಕೆ

ಪುರುಲಿಯಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ದಿಲೀಪ್ ಘೋಷ್, 'ಮಮತಾ ಬ್ಯಾನರ್ಜಿ ತಮ್ಮ ಮುರಿದ ಕಾಲನ್ನು ಎಲ್ಲರಿಗೂ ತೋರಿಸಲು ಬಯಸುತ್ತಿದ್ದಾರೆ. ಹಾಗಾಗಿ ಅವರು ಸೀರೆ ಏಕೆ ಧರಿಸಬೇಕು?  ಬರ್ಮುಡಾ ಹಾಕಿಕೊಂಡರೆ ಎಲ್ಲರಿಗೂ ಅವರ ಕಾಲು ಸ್ಪಷ್ಟವಾಗಿ ಕಾಣಿಸುತ್ತದೆ' ಎಂದು ಮಾತನಾಡಿದ್ದು  ವಿವಾದ ಸೃಷ್ಟಿಸಿದೆ.

ಒಂದು ಕಾಲು ಕಾಣಿಸುವಂತೆ, ಮತ್ತೊಂದು ಕಾಣಿಸದಂತೆ ಮಮತಾ ಬ್ಯಾನರ್ಜಿ ಸೀರೆ ಧರಿಸಿತ್ತಾರೆ. ಈ ರೀತಿಯಲ್ಲಿ  ಸೀರೆ ಧರಿಸುವುದನ್ನು ನಾನೆಂದೂ ನೋಡಿಲ್ಲ "ನಿಮ್ಮ ಕಾಲು ಜನರು ನೋಡಬೇಕು ಎಂದು ನೀವು ಬಯಸಿದರೆ, ಸೀರೆ ಏಕೆ  ಧರಿಸುತ್ತೀರಿ.. ಬರ್ಮುಡಾ ಧರಿಸಿ ಎಂದು ತೀವ್ರ ವೈಯಕ್ತಿಕ ಟೀಕೆ ಮಾಡಿದ್ದಾರೆ. ಚುನಾವಣಾ ಮೆರವಣಿಗೆ ವೇಳೆ  ಕಾಲಿಗೆ ಗಾಯಮಾಡಿಕೊಂಡಿದ್ದ ಮಮತಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು .

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ