* ಯಾರೂ ಮಧ್ಯಸ್ಥಿಕೆ ವಹಿಸುವುದು ಬೇಡ
* ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ
* ಪ್ರಭಾಕರ ಕೋರೆ ನಮ್ಮ ನಾಯಕರು. ಅದನ್ನೆಲ್ಲ ನೀವೇ ಹುಟ್ಟುಹಾಕಿದ್ದು
ಬೆಳಗಾವಿ(ಜೂ.12): ಕಾಂಗ್ರೆಸ್‌ನ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿರುವ ಸುನೀಲ್ ಸಂಕ ಹಾಗೂ ನಾನು ಒಂದೇ ಕ್ಷೇತ್ರದವರು. ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಇದರಲ್ಲಿ ಯಾರೂ ಮಧ್ಯಸ್ಥಿಕೆ ವಹಿಸುವುದು ಬೇಡ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಣೆ ಪ್ರಮಾಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಆಹ್ವಾನ ನೀಡಿರುವ ಬಗ್ಗೆ ಸಂಕ ನಮ್ಮ ಅಥಣಿಯವರು. ಅವರು ನಾವು ಕೂಡಿ ಮಾತನಾಡುತ್ತೇವೆ. ಅದರ ಬಗ್ಗೆ ನೀವು ಏಕೆ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತೀರಿ. ಮಧ್ಯಸ್ಥಿಕೆ ವಹಿಸುವ ಅವಶ್ಯಕತೆ ಇಲ್ಲ. ನಾವು ಒಂದೇ ತಾಲೂಕಿನವರು ಎಂದು ಸಮಜಾಯಿಷಿ ನೀಡಿದರು.
ಬಿಜೆಪಿಯಲ್ಲಿನ ಭಿನ್ನಮತ ನಾನೇ ಶಮನಗೊಳಿಸುವೆ: ಲಕ್ಷ್ಮಣ ಸವದಿ
ಶಿಕ್ಷಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರಿಗೆ ಎಲ್ಲಿಯೂ ವಿರೋಧ ಇಲ್ಲ. ಇದನ್ನು ಕೆಲವರು ಹುಟ್ಟು ಹಾಕಿದ್ದಾರೆ. ಅವರಿಗೆ ವಿರೋಧ ಇಲ್ಲ ಎಂದ ಅವರು, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ನಮ್ಮೊಂದಿಗೆ ಇದ್ದಾರೆ. ಇದರಲ್ಲಿ ಅವರ ಅಸಮಾಧಾನ ಎಲ್ಲಿದೆ ಎಂದು ಪ್ರಶ್ನಿಸಿದರು.
ಸವದಿ, ಕತ್ತಿ, ಜಾರಕಿಹೊಳಿ ಸಾಹುಕಾರ ಮಧ್ಯೆ ಸರಿ ಇಲ್ಲಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಅದು ಬಹುತೇಕ ನಿಮ್ಮಂತ ಸ್ನೇಹಿತರು ಹುಟ್ಟು ಹಾಕಿದ ಗುಟುಕು ಅಂತಾ ನಾ ತಿಳಿದುಕೊಂಡಿದ್ದೇನೆ ಎಂದರು.
ಲಕ್ಷ್ಮಣ ಸವದಿಗೆ ಸಾಲು-ಸಾಲು ಆಫರ್, ಹೈಕಮಾಂಡ್ ಲೆಕ್ಕಾಚಾರವೇ ಬೇರೆ..!
ಪ್ರಭಾಕರ ಕೋರೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ಪ್ರಭಾಕರ ಕೋರೆ ನಮ್ಮ ನಾಯಕರು. ಅದನ್ನೆಲ್ಲ ನೀವೇ ಹುಟ್ಟುಹಾಕಿದ್ದು. ಇದನ್ನು ಸೃಷ್ಟಿಮಾಡಿ ಕಾಂಗ್ರೆಸ್‌ನವರಿಗೆ ಸ್ವಲ್ಪ ಪ್ರೋವೊಕ್ (ಉತ್ತೇಜನ) ಮಾಡುವ ಕೆಲಸ ಮಾಡುತ್ತಿದ್ದಿರಿ ಎಂದರು.
ಸವದಿ, ಕತ್ತಿ, ಜಾರಕಿಹೊಳಿ ಸಾಹುಕಾರ ಮಧ್ಯೆ ಸರಿ ಇಲ್ಲ ಎಂಬ ವಿಚಾರಕ್ಕೆ ಬಹುಶಃ ಯಾರೋ ನಿಮಗೆ ದುಡ್ಡು ಕೊಟ್ಟು ಹೇಳಿಸುತ್ತಿದ್ದಾರೋ ಕಂಡು ಹಿಡಿಯಬೇಕಿದೆ. ಬೆಳಗಾವಿ ಬಿಜೆಪಿಯಲ್ಲಿ ಯಾವ ಬಣನೂ ಇಲ್ಲ. ಬಾಣನೂ ಇಲ್ಲ. ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಲಕ್ಷ್ಮಣ ಸವದಿ ಪ್ರಯತ್ನಿಸಿದರು.