
ಉತ್ತರ ಕನ್ನಡ(ಮೇ.06): ಜೈ ಶ್ರೀರಾಮ್, ಭಟ್ಕಳ ಜನರಿಗೆ ನಮಸ್ಕಾರ ಅಂತ ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ಕನ್ನಡದಲ್ಲಿ ಭಾಷಣವನ್ನ ಆರಂಭಿಸಿದ್ದಾರೆ.
ಇಂದು(ಶನಿವಾರ) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಅಯೋಧ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಬಜರಂಗದಳ ನಿಷೇಧ ಮಾಡಲು ಹೊರಟಿದ್ದಾರೆ. ಬಜರಂಗದಳ ಹಾಗೂ ಯಾವುದೇ ಹಿಂದೂಗಳು ಇದನ್ನು ಒಪ್ಪಲ್ಲ, ಬಜರಂಗದಳ ನಿಷೇಧ ಮಾಡಿದರೇ, ಪಿಎಫ್ಐ, ಐಎಸ್‌ಐಗಳನ್ನು ಆಹ್ವಾನ ಮಾಡಿದಂತೆ. ಉತ್ತರಪ್ರದೇಶದಲ್ಲಿ ಉಗ್ರರ ಸೊಂಟ ಮುರಿದಿದ್ದೇವೆ. ಕರ್ನಾಟಕದಲ್ಲೂ ನಾವು ಪಿಎಫ್ಐ, ಐಎಸ್ಐಗಳ ಸೊಂಟ ಮುರಿಯುತ್ತೇವೆ ಅಂತ ಹೇಳಿದ್ದಾರೆ.
ಯುಪಿ ಸಿಎಂ ಯೋಗಿಗೆ 'ಪುತ್ತಿಲ' ಸ್ವಾಗತ: ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ!
ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರವನ್ನು ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಾಂಗ್ರೆಸ್ ಹನುಮಾನನ್ನು ಏಕೆ ವಿರೋಧ ಮಾಡುತ್ತಿದೆ. ಹನುಮಾನ್ ಇರುವಲ್ಲಿ ಭೂತ ಪ್ರೇತಗಳು ನಾಶವಾಗುತ್ತವೆ. ಹೀಗಾಗಿ ಭೂತ ಪ್ರೇತಗಳು ಹನುಮಾನ್‌ನನ್ನು ವಿರೋಧ ಮಾಡುತ್ತಿದೆ. ಬಜರಂಗದಳ ನಿಷೇಧ ಮಾಡೋ ಮೂಲಕ ಕಾಂಗ್ರೆಸ್‌ನವರು ಐಎಸ್‌ಐ, ಪಿಎಫ್‌ಐ ಅಡ್ಡಾ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಬಜರಂಗದಳ ಹಾಗೂ ಬಿಜೆಪಿ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಅಂತ ಕಾಂಗ್ರೆಸ್ ವಿರುದ್ಧ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.
ಉತ್ತರಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಸಾವಿರ ವರ್ಷಗಳಿಂದಿದೆ. ಶ್ರೀರಾಮ ವನವಾಸ ಮಾಡಿದಾಗ ಕರ್ನಾಟಕದಲ್ಲಿ ಹೆಚ್ಚು ಬೆಂಬಲ ಸಿಕ್ಕಿದ್ದು ಹನುಮಂತನಿಂದ, ಉತ್ತರ ಪ್ರದೇಶದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು. ಜನವರಿ 24ರಂದು ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ರಾಮಮಂದಿರದ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇವೆ. ನಿಮ್ಮ ಈ ಸೇವಕ ಅಯೋಧ್ಯೆಯಲ್ಲಿ ನಿಮ್ಮ ಸ್ವಾಗತಕ್ಕೆ ಸಿದ್ಧತೆ ಮಾಡುತ್ತಿದ್ದಾನೆ ಅಂತ ಹೇಳಿದ್ದಾರೆ.
ಉತ್ತರಪ್ರದೇಶ: ಸಿಎಂ ಯೋಗಿ ಆಡಳಿತದಲ್ಲಿ ಒಟ್ಟು 10900 ಎನ್‌ಕೌಂಟರ್!
ಜಿಲ್ಲೆಯ ಭಟ್ಕಳ ಅಭ್ಯರ್ಥಿ ಸುನೀಲ್ ನಾಯ್ಕ್ ಹಾಗೂ ಕುಮಟಾ ಅಭ್ಯರ್ಥಿ ದಿನಕರ ಶೆಟ್ಟಿ ಅವರನ್ನು ಗೆಲ್ಲಿಸಿ ಅಂತ ಜೈ ಶ್ರೀರಾಮ್ ಎಂದು ಹೇಳಿ ಯೋಗಿ ಆದಿತ್ಯನಾಥ್ ಮಾತು ಮುಗಿಸಿದ್ದಾರೆ.
ಯೋಗಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ನಾಯ್ಕ್, ದಿನಕರ ಶೆಟ್ಟಿ ಸೇರಿದಂತೆ ಮತ್ತಿತರ ನಾಯಕರು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.