ಕಾಂಗ್ರೆಸ್ ಅಂದ್ರೆ ಟೋಟಲ್ ಕರಪ್ಷನ್‌: 'ಕೈ' ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

By Girish GoudarFirst Published May 6, 2023, 8:29 PM IST
Highlights

ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ನಮಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ಸುಳ್ಳು ಹಿಡಿದುಕೊಂಡು ಕಾಂಗ್ರೆಸ್‌ನವರು ಹೋಗ್ತಾ ಇದಾರೆ. ಕರ್ನಾಟಕ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಕರ್ನಾಟಕದ ಪ್ರತಿಯೊಬ್ಬರು ತಿಳಿದುಕೊಂಡಿದ್ದಾರೆ. ಒಬಿಸಿ, ಲಿಂಗಾಯತ ಎಲ್ಲರೂ ಕೋಪದಲ್ಲಿದ್ದಾರೆ. ಜನರ ಸಿಟ್ಟು ಈಗ ಸಂಕಲ್ಪ ಆಗಿದೆ. ಕರ್ನಾಟಕದ ಗಲ್ಲಿ ಗಲ್ಲಿ, ಮನೆ ಮನೆಗಳಿಂದ ನಾಲ್ಕೂ ದಿಕ್ಕುಗಳಿಂದ ಒಂದೇ ದನಿ ಬರುತ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಿದೆ: ಪ್ರಧಾನಿ ಮೋದಿ 

ಹಾವೇರಿ(ಮೇ.06): ಸರ್ವಜ್ಞ ಮತ್ತು ಕನಕದಾಸರ ನಾಡು ಹಾವೇರಿ ಜನತೆಗೆ ನನ್ನ ನಮಸ್ಕಾರ ಅಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಭಾಷಣವನ್ನ ಆರಂಭಿಸಿದ್ದಾರೆ. ಹೌದು, ಇಂದು(ಶನಿವಾರ) ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಭಜರಂಗ ಬಲಿ ಕಿ ಜೈ ಅಂತ ಮೋದಿ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಸಮಾವೇಶದಲ್ಲಿ ನೆರೆದ ಜನ ಕೂಡ ಜೈ ಅಂತ ಹುಮ್ಮಸ್ಸಿನಿಂದ ಕೂಗಿದ್ದಾರೆ. 

ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ನಮಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ಸುಳ್ಳು ಹಿಡಿದುಕೊಂಡು ಕಾಂಗ್ರೆಸ್‌ನವರು ಹೋಗ್ತಾ ಇದಾರೆ. ಕರ್ನಾಟಕ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಕರ್ನಾಟಕದ ಪ್ರತಿಯೊಬ್ಬರು ತಿಳಿದುಕೊಂಡಿದ್ದಾರೆ. ಒಬಿಸಿ, ಲಿಂಗಾಯತ ಎಲ್ಲರೂ ಕೋಪದಲ್ಲಿದ್ದಾರೆ. ಜನರ ಸಿಟ್ಟು ಈಗ ಸಂಕಲ್ಪ ಆಗಿದೆ. ಕರ್ನಾಟಕದ ಗಲ್ಲಿ ಗಲ್ಲಿ, ಮನೆ ಮನೆಗಳಿಂದ ನಾಲ್ಕೂ ದಿಕ್ಕುಗಳಿಂದ ಒಂದೇ ದನಿ ಬರುತ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. 

ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ, ಬಣಕಾರ ನಡುವೆ ಜಿದ್ದಾಜಿದ್ದಿ: ಅಭ್ಯರ್ಥಿಗಳು ಅವರೇ, ಪಕ್ಷ ಮಾತ್ರ ಬೇರೆ!

ಸಹೋದರ ಸಹೋದರಿಯರೇ ಸ್ವಾತಂತ್ರ್ಯದ ಬಳಿಕ ಹಲವು ದಶಕಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಇತ್ತು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ಮೂರುವರೆ ವರ್ಷಗಳಲ್ಲಿ ಕಾಂಗ್ರೆಸ್‌ನ ಅಭಾವ, ಡಬಲ್ ಇಂಜಿನ್ ಸರ್ಕಾರದ ಪ್ರಭಾವ ಹಾವೇರಿ ಜನ ನೋಡ್ತಾ ಇದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಹಾವೇರಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜ್ ಸಿಕ್ಕಿದೆ. ಹೊಸ ಮಿಲ್ಕ್ ಡೈರಿ, ರಸ್ತೆ, ರೈಲು ಎಲ್ಲಾ ಅಭಿವೃದ್ಧಿ ಆಗಿದೆ. 6 ಪಥದ ಚಿತ್ರದುರ್ಗ, ದಾವಣಗೆರೆ, ಹಾವೇರಿ ಹೈವೇ ಯಾರ ಕೊಡುಗೆಯಾಗಿದೆ ಅಂತ ಕೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಮೋದಿ ಕೆಂಡ ಕಾರಿದ್ದಾರೆ. 

ವಿಕಾಸದ ಈ ಎಲ್ಲಾ ಕಾರ್ಯಗಳನ್ನು ಕಾಂಗ್ರೆಸ್ ಮಾಡಬಹುದಿತ್ತು. ಅವರಿಗೆ ಅವಕಾಶ ಸಿಕ್ಕಿತ್ತು ಆದರೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ. ಕಾಂಗ್ರೆಸ್ ಅಂದರೆ ಟೋಟಲ್ ಕರಪ್ಷನ್, ಕಾಂಗ್ರೆಸ್‌ನವರದ್ದು 85% ಕಮಿಷನ್, ಕಾಂಗ್ರೆಸ್‌ನವರು ಎಲ್ಲಾ ಹಣ ತಾವೇ ಲೂಟಿ ಮಾಡ್ತಾರೆ. ಸಹೋದರ ಸಹೋದರಿಯರೇ ಯೂರಿಯಾ ಕೊರತೆ ಉಂಟಾಗಿತ್ತು. ಕಾಂಗ್ರೆಸ್ ರೈತರ ಹಣ ಕೂಡಾ ಲೂಟಿ ಮಾಡ್ತು ಅಂತ ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

click me!