ಅಧಿಕಾರ ಹಂಚಿಕೆ: ಏನೋ ಮಾತಾಡಿದ್ದೇವೆ, ಅದನ್ನು ಬಹಿರಂಗವಾಗಿ ಹೇಳಲಾಗುತ್ತಾ?, ಡಿಕೆಶಿ

By Kannadaprabha News  |  First Published Dec 6, 2024, 4:26 AM IST

ಈ ವಿಚಾರವಾಗಿ ಮುಖ್ಯಮಂತ್ರಿಗಳು ಬುಧವಾರ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಹಸ್ತಾಂತರ ಚರ್ಚೆ ಇಲ್ಲ ಎಂಬ ಸಿದ್ದರಾಮಯ್ಯ ಅವರ ಮಾತನ್ನು ನಾನು ಒಪ್ಪುತ್ತೇನೆ. ಹೀಗಾಗಿ ನಾನು ಚರ್ಚೆ ಮಾಡುವುದಿಲ್ಲ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 
 


ಬೆಂಗಳೂರು(ಡಿ.06): 'ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ವಾಹಿನಿ ಯೊಂದಕ್ಕೆ ಹೇಳಿದ್ದೇನೆ. ಆದರೆ ಏನು ಮಾತನಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ?' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಈ ಮೂಲಕ ಅಧಿಕಾರ ಹಂಚಿಕೆ ಕುರಿತ ಚರ್ಚೆಯನ್ನು ಜೀವಂತವಾಗಿ ಉಳಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಅವರಿಬ್ಬರೇ ಒಪ್ಪಂದ ಮಾಡಿ ಕೊಳ್ಳುವುದಾದರೆ ನಾವೇಕೆ ಇರಬೇಕು? ಅವರೇ ರಾಜಕಾರಣ ಮಾಡಿಕೊಳ್ಳಲಿ' ಎಂಬ ಡಾ.ಜಿ.ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. 

Tap to resize

Latest Videos

News Hour: ದಳಕೋಟೆಯಲ್ಲಿ ಕಾಂಗ್ರೆಸ್​ ಘರ್ಜನೆ ನಡುವೆ ಮಧ್ಯೆ ‘ಒಪ್ಪಂದ’ದ ಫೈಟ್

ಅಧಿಕಾರ ಹಂಚಿಕೆ ಸಂಬಂಧ ನಾನು ಯಾರೊಂದಿಗೂ ಮಾತನಾಡಿಲ್ಲ. ನಿಮ್ಮೊಂದಿಗೆ ಆಗಲಿ, ಪರಮೇಶ್ವರ್ ಅವರೊಂದಿಗೆ ಆಗಲಿ ಮಾತನಾಡಿಲ್ಲ. ವಾಹಿನಿಯೊಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ಅಧಿಕಾರ ಹಂಚಿಕೆ ಬಗ್ಗೆ ನಾವು ಕುಳಿತು ಏನೋ ಮಾತನಾಡಿದ್ದೇವೆ ಎಂದು ಹೇಳಿದ್ದೇನೆ. ಆದರೆ ಅದನ್ನು ಬಹಿರಂಗವಾಗಿ ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಈ ವಿಚಾರವಾಗಿ ಮುಖ್ಯಮಂತ್ರಿಗಳು ಬುಧವಾರ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಹಸ್ತಾಂತರ ಚರ್ಚೆ ಇಲ್ಲ ಎಂಬ ಸಿದ್ದರಾಮಯ್ಯ ಅವರ ಮಾತನ್ನು ನಾನು ಒಪ್ಪುತ್ತೇನೆ. ಹೀಗಾಗಿ ನಾನು ಚರ್ಚೆ ಮಾಡುವುದಿಲ್ಲ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ' ಎಂದು ಹೇಳಿದರು.

ಪರಮೇಶ್ವರ್ ಜತೆ ಭಿನ್ನಾಭಿಪ್ರಾಯ ಇದೆಯೇ ಎಂಬ ಪ್ರಶ್ನೆಗೆ, ನನಗೆ ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ. ಜತೆಗೂಡಿ ಯಶಸ್ಸು ಕಾಣುತ್ತೇವೆ' ಎಂದು ಹೇಳಿದರು.

ಸಾಯೋವರೆಗೂ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇನೆ: ಜನಕಲ್ಯಾಣ ಸಮಾವೇಶದಲ್ಲಿ ಡಿಕೆಶಿ ಶಪಥ!

ಹಾಸನ: ಕಾಂಗ್ರೆಸ್ ಪಕ್ಷ ರಾಜ್ಯ-ದೇಶದಲ್ಲಿ ಅಧಿಕಾರ ನಡೆಸಿದಾಗ ಅನೇಕ ಶಾಶ್ವತ ಯೋಜನೆ ಜಾರಿಗೆ ತಂದು ಗ್ಯಾರಂಟಿಗಳನ್ನು ಉಳಿಸಿದೆ. ಆದರೆ ನಿಮ್ಮ ಗ್ಯಾರಂಟಿ ಏನು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. 

ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಕನಕಪುರ ಬಂಡೆ ಸಿದ್ದರಾಮಯ್ಯ ಜೊತೆ ನಿಲ್ಲಲಿದೆ ಎಂದು ಮೈಸೂರಲ್ಲಿ ಹೇಳಿದ್ದೆ. ಇಲ್ಲೂ ಹೇಳುವೆ, ಸಾಯೋವರೆಗೂ ಅವರ ಜೊತೆ ಇರುವೆ ಎಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕಂತೆ ಎಂದ ಅವರು, ಜಿಲ್ಲೆಯಲ್ಲಾಗಿರುವ ಅನ್ಯಾಯದ ವಿರುದ್ಧ ೨೫ ವರ್ಷದ ನಂತರ ಇಲ್ಲಿ ಶ್ರೇಯಸ್ ಪಟೇಲ್ ಗೆಲ್ಲಿಸಿದ್ದೀರಿ. ಮುಂದೆಯೂ ಎಂಪಿ ಜೊತೆಗೆ ಏಳೂ ಸ್ಥಾನಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು, ಗೆಲ್ಲಲಿದೆ ಎಂದು ಭವಿಷ್ಯ ನುಡಿದರು. ನಮ್ಮ ಐದು ಗ್ಯಾರಂಟಿ ಪರ್ಮನೆಂಟು, ಹಾಗೆಯೇ ೨೦೨೮ ರಲ್ಲೂ ನಾವೇ ಅಧಿಕಾರಕ್ಕೆ ಬರೋದು ಗ್ಯಾರಂಟಿ. ಯಾರೂ ಬದಲಿಸಲು ಆಗಲ್ಲ ಎಂದರು. ಬರೀ ಸುಳ್ಳು ಹೇಳುವ ಬಿಜೆಪಿ-ಜೆಡಿಎಸ್‌ಗೆ ಉಪ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ರಾಮನಗರದಲ್ಲಿ ೪ ಕ್ಕೆ ೪ ಕಾಂಗ್ರೆಸ್ ಗೆದ್ದಿದೆ. ಮಂಡ್ಯದಲ್ಲಿ ೬, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗಿನಲ್ಲೂ ಗೆದ್ದಿದ್ದೇವೆ. ಮುಂದೆ ಹಾಸನದಲ್ಲಿ ಗೆಲ್ಲುತ್ತೇವೆ. ಅದಕ್ಕೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.

ಅಧಿಕಾರ ಹಂಚಿಕೆ ಸೂತ್ರ: ಡಿಕೆಶಿ ಹೇಳಿಕೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ಕೇಂದ್ರದಲ್ಲಿ ನಮ್ಮ ಸರ್ಕಾರ ಅನೇಕ ಗ್ಯಾರಂಟಿ ತಂದಿದೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಯಾರೂ ಸಾಧ್ಯವಿಲ್ಲ.ಜೊತೆಗೆ ಐದು ಗ್ಯಾರಂಟಿ ತಂದಿದ್ದೇವೆ. ನಿಮ್ಮ ಕೊಡುಗೆ ಏನು ಎಂದು ಕುಮಾರಸ್ವಾಮಿ, ದೇವೇಗೌಡರನ್ನು ಪ್ರಶ್ನಿಸಿದರು. ಚುನಾವಣೆ ವೇಳೆ ಕಣ್ಣೀರು ಹಾಕುತ್ತೀರಿ, ಆದರೆ ನಿಮ್ಮ ಸಾಕ್ಷಿ ಗುಡ್ಡೆ ಏನು ರಾಜ್ಯದಲ್ಲಿ ಎಂಬುದಕ್ಕೆ ಉತ್ತರ ಕೊಡಿ ಎಂದರು. 

ಹಾಗೆಯೇ ಅಶೋಕ್,ವಿಜಯೇಂದ್ರ ತಂತ್ರ-ತಂತ್ರ ಕುತಂತ್ರ ನಡೆಯಲಿಲ್ಲ.ಕಾಂಗ್ರೆಸ್‌ಗೆ ಜನಶಸ್ತಿ ಇತ್ತೀಚೆಗೆ ೩ ಕಡೆ ಉತ್ತರ ಕೊಟ್ಟಿದೆ. ಮುಂದೆಯೂ ರಾಜ್ಯದ ಜನ ನಿಮ್ಮ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

click me!