ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಎಲ್ಲಾ ಭಿನ್ನಾಭಿಪ್ರಾಯವೂ ಶಮನವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೋಲಾರ (ಜ.24) : ‘ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಎಲ್ಲಾ ಭಿನ್ನಾಭಿಪ್ರಾಯವೂ ಶಮನವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೋಲಾರದ ಟಮಕಾದಲ್ಲಿ ಸೋಮವಾರ ‘ಪ್ರಜಾಧ್ವನಿ’(Prajadhwani yatre) ಬಸ್‌ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಒಗ್ಗಟ್ಟಿನ ಮಂತ್ರ ಜಪಿಸಿದರು. ನಾವೀಗ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹನ್ನೊಂದು ಕ್ಷೇತ್ರದಲ್ಲಿಯೂ ಗೆಲ್ಲುವ ವಿಶ್ವಾಸ ಇದೆ. ಇಲ್ಲಿ ಕೂಡ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗ ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದೇವೆ. ಈ ಬಾರಿ ವಿಧಾನಸೌಧದಲ್ಲಿ ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ರಣತಂತ್ರ: ದಲಿತ ಮತದಾರರ ಕರಪತ್ರ ಅಭಿಯಾನ
ಜನ ಸಂತೋಷವಾಗಿಲ್ಲ:
ಇದೇ ವೇಳೆ, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದ ಡಿಕೆಶಿ, ‘ಕೇಂದ್ರದಲ್ಲಿ ಬಲಿಷ್ಠ ಸರ್ಕಾರ, ಇಲ್ಲಿ ಆಪರೇಷನ್ ಲೋಟಸ್ ಸರ್ಕಾರ’ ಎಂಬ ಡಬ್ಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆಯೇ ಎಂಬುದನ್ನು ವಿಮರ್ಶೆ ಮಾಡಲು ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಜನ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆಡಳಿತ ಪಕ್ಷದ ವೈಫಲ್ಯಗಳನ್ನು ಗಮನಕ್ಕೆ ತಂದಿದ್ದಾರೆ. 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ, ಎಲ್ಲಿಯೂ ಜನ ಸಂತೋಷವಾಗಿಲ್ಲ ಎಂದರು.
ಜನರ ಬದುಕನ್ನು ಹಸನು ಮಾಡುತ್ತೀವಿ ಎಂದು ಈ ಹಿಂದೆ ಜೆಡಿಎಸ್ ಭರವಸೆ ನೀಡಿತ್ತು. 5 ವರ್ಷ ನೀವೇ ಸಿಎಂ ಆಗಿ ಎಂದು ಅವರಿಗೆ ಬೆಂಬಲ ನೀಡಿದ್ವಿ. 19ತಿಂಗಳು ಅಧಿಕಾರ ನಡೆಸಿದರೂ ಅವರಿಂದ ಅಭಿವೃದ್ಧಿ ಸಾಧ್ಯವಾಗಲಿಲ್ಲ ಎಂದರು.