ಹೊಸ ರಥ ಯಾತ್ರೆಗೆ ನಾವೂ ಸಿದ್ಧತೆ ನಡೆಸಿದ್ದೇವೆ: ಸಿಎಂ ಬೊಮ್ಮಾಯಿ

By Kannadaprabha News  |  First Published Jan 9, 2023, 3:37 AM IST

ಕಾಂಗ್ರೆಸ್‌ನವರ ವೋಟ್‌ ಬ್ಯಾಂಕ್‌ ರಾಜಕಾರಣ ನಡೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಅದು ಸ್ಪಷ್ಟವಾಗಲಿದೆ. ಯಾರ ಆಡಳಿತದಲ್ಲಿ ಎಸ್ಸಿ ಎಸ್ಟಿಗಳಿಗೆ ಏನೆಲ್ಲಾ ಕೊಟ್ಟಿದ್ದಾರೆ, ಅವರ ಬದುಕು ಎಷ್ಟು ಉತ್ತಮಗೊಂಡಿತ್ತು. ಅವರ ಹಕ್ಕುಗಳನ್ನು ಯಾರು ರಕ್ಷಣೆ ಮಾಡಿದ್ದಾರೆ ಎಂಬುದು ಆ ಜನಾಂಗಕ್ಕೂ ಗೊತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 


ಹಾವೇರಿ(ಜ.09):  ಚುನಾವಣಾ ಅಖಾಡಕ್ಕೆ ನಾವು ಧುಮುಕಿ ಬಹಳ ದಿನವಾಗಿದೆ. ಪಕ್ಷ ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಬೂತ್‌ ವಿಜಯ ಅಭಿಯಾನ ಶುರುವಾಗಿದೆ. ಹೊಸ ರಥ ಯಾತ್ರೆಗೆ ನಾವೂ ಸಿದ್ಧತೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜ.21ರಿಂದ ಜ.29 ರವರೆಗೆ ಮನೆ, ಮನೆಗೆ ಮಾಹಿತಿ ನೀಡುವ ಅಭಿಯಾನ ಶುರುವಾಗಲಿದೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಎಸ್ಸಿ, ಎಸ್ಟಿಸಮಾವೇಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರ ವೋಟ್‌ ಬ್ಯಾಂಕ್‌ ರಾಜಕಾರಣ ನಡೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಅದು ಸ್ಪಷ್ಟವಾಗಲಿದೆ. ಯಾರ ಆಡಳಿತದಲ್ಲಿ ಎಸ್ಸಿ ಎಸ್ಟಿಗಳಿಗೆ ಏನೆಲ್ಲಾ ಕೊಟ್ಟಿದ್ದಾರೆ, ಅವರ ಬದುಕು ಎಷ್ಟು ಉತ್ತಮಗೊಂಡಿತ್ತು. ಅವರ ಹಕ್ಕುಗಳನ್ನು ಯಾರು ರಕ್ಷಣೆ ಮಾಡಿದ್ದಾರೆ ಎಂಬುದು ಆ ಜನಾಂಗಕ್ಕೂ ಗೊತ್ತು. ಈಗ ಎಸ್ಸಿ, ಎಸ್ಟಿಜನಾಂಗ ಜಾಗೃತವಾಗಿದೆ. ಜಾಗತೀಕರಣದ ಬಳಿಕ ಅವರ ಸ್ಥಾನ ಏರಿದೆ. ಅವರ ಆಶೋತ್ತರಗಳು ಹೆಚ್ಚಿವೆ. ಅದಕ್ಕೆ ತಕ್ಕಂತೆ ನಮ್ಮ ಸರ್ಕಾರ ಸ್ಪಂದಿಸಿದೆ. ಅದಕ್ಕಾಗಿ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

Tap to resize

Latest Videos

undefined

ಸಿದ್ದು ಇಂದು ಕೋಲಾರಕ್ಕೆ: ಸ್ಪರ್ಧಾ ಕ್ಷೇತ್ರ ಘೋಷಣೆ

ಚಿಕಿತ್ಸೆ ವೆಚ್ಚ ನೋಡಿಕೊಳ್ತೇವೆ: 

ಬೆಳಗಾವಿ ಜಿಲ್ಲೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷರ ಮೇಲಿನ ಗುಂಡಿನ ದಾಳಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಅವರ ಸಂಪೂರ್ಣ ಚಿಕಿತ್ಸೆಯನ್ನು ನೋಡಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು. ತಕ್ಷಣ ಕಾರ್ಯಾಚರಣೆ ಮಾಡಿ, ಆರೋಪಿಗಳು ಯಾರೇ ಇದ್ದರೂ ಬಂಧಿಸುವಂತೆ ಸೂಚಿಸಲಾಗಿದೆ. ಎಲ್ಲೂ ಹಿಂಸೆಗೆ ಅವಕಾಶ ಕೊಡಬಾರದು ಎಂದು ಪ್ರತಿಕ್ರಿಯಿಸಿದರು.

click me!