
ಕೋಲಾರ (ಫೆ.04): ನಮ್ಮಲ್ಲಿ ಯಾವುದೇ ಭಿನ್ನಮತ, ಗುಂಪುಗಾರಿಕೆ ಇಲ್ಲ. ಕೋಲಾರದಲ್ಲಿಯೂ ಯಾವುದೇ ಭಿನ್ನಮತ ಇಲ್ಲ. ಕೆ.ಎಚ್ ಮುನಿಯಪ್ಪಗೆ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದ ಎಂ.ಜಿ ಮಾರುಕಟ್ಟೆಯ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಯಾತ್ರೆಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪರಮೇಶ್ವರ್ ರಾಜೀನಾಮೆ ವದಂತಿ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್ ಅವರು ಶಿಸ್ತಿನ ಸಿಪಾಯಿ, ಅವರು ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ ಎಂದರು.
ಅಲ್ಲದೆ, ಸಿದ್ದರಾಮಯ್ಯನವರು ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿಯವರು ಕುಚೇಷ್ಟೆಮಾಡಿಕೊಂಡು ಬೋಗಸ್ ಮಾಡ್ತಿದ್ದಾರೆ. ದಿನಕ್ಕೆ ಒಂದು ವಿಡಿಯೋ ಹಾಕೋದು, ಪತ್ರ ಹಾಕೋದು ಮಾಡಿ ಬಿಜೆಪಿಯವರು ಮಿಸ್‌ಗೈಡ್ ಮಾಡ್ತಿದ್ದಾರೆ. ಅದು ಸಿದ್ದರಾಮಯ್ಯನವರ ಸಹಿ ಅಲ್ಲ, ಈ ಬಗ್ಗೆ ಸಿದ್ದರಾಮಯ್ಯನವರೇ ದೂರು ದಾಖಲು ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ವಿಫಲವಾಗಿದೆ. ಜನ್‌ಧನ್ ಖಾತೆ ಓಪನ್ ಆಯ್ತೆ ವಿನ: 15 ಲಕ್ಷ ರುಪಾಯಿ ಬರಲೇ ಇಲ್ಲ. ಕರ್ನಾಟಕದಲ್ಲಿ ಆಪರೇಷನ್ ಮೂಲಕ ಬಂದ ಸರ್ಕಾರವಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ, ಉಪ್ಪಿಗೂ ಜಿಎಸ್‌ಟಿ ಹಾಕಿದ್ದಾರೆ.
ವಾಹನ ವಿಮೆ ನವೀಕರಣಕ್ಕೆ ಪೊಲೀಸ್ ಎನ್‌ಒಸಿ ಕಡ್ಡಾಯ?: ಸರ್ಕಾರಕ್ಕೆ ಸಂಚಾರ ಪೊಲೀಸರಿಂದ ಮನವಿ ಸಲ್ಲಿಕೆ
ಜಾತ್ಯತೀತ ಸರ್ಕಾರಕ್ಕಾಗಿ ಈ ಹಿಂದೆ ಜೆಡಿಎಸ್‌ಗೆ ಬಲ ನೀಡಿದ್ದೆವು. ಆದರೆ, ಅವರಿಂದ ಸರ್ಕಾರ ಉಳಿಸಲು ಸಾಧ್ಯವಾಗಲಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದ ಪಕ್ಷ ನಿಮ್ಮೊಂದಿಗೆ ಇದೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರು ಹರಿಸಿದ್ದಾರೆ. ಎಲ್ಲ ವರ್ಗದವರಿಗೆ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅನ್ನದಾಸೋಹ ಕಾರ್ಯಕ್ರಮ ಮಾಡಿದ್ದೆವು. ಅದನ್ನು ಬಿಜೆಪಿಯವರು ಕಡಿಮೆ ಮಾಡಿದರು ಎಂದು ಆರೋಪಿಸಿದರು. ಅಧಿಕಾರಕೆ ಬಂದರೆ ಬಡವರಿಗೆ ತಿಂಗಳಿಗೆ ಹತ್ತು ಕೆಜಿ ಅಕ್ಕಿ ನೀಡುತ್ತೇವೆ. ಇನ್ನೂರು ಯುನಿಟ್ ಉಚಿತ ಕರೆಂಟ್ ನೀಡುತ್ತೇವೆ ಎಂದು ಭರವಸೆ ನೀಡಿದರು.
ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಶೀಘ್ರ ಕೇಂದ್ರಕ್ಕೆ: ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸಿದ್ದು, ಸಂಭವನೀಯರ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಆದಷ್ಟುಬೇಗ ಅಂತಿಮ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಹಾಲಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ.
ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ 2ರ ಬದಲಿಗೆ 5 ಮೊಟ್ಟೆ ನೀಡಿ: ಆಡಳಿತ ಸುಧಾರಣಾ ಆಯೋಗದಿಂದ ವರದಿ ಸಲ್ಲಿಕೆ
ಬಿಜೆಪಿ ಸರ್ಕಾರ ಅನುದಾನ ಸರಿಯಾಗಿ ನೀಡದಿದ್ದರೂ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ ಎಂದರು. ತನ್ಮೂಲಕ ಬಹುತೇಕ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತ ಎಂದು ಪರೋಕ್ಷ ಸಂದೇಶ ನೀಡಿದರು. ಇನ್ನು ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಅರ್ಜಿ ಹಾಕಿದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಅಧಿಕಾರ ಬರುವಾಗ ಎಲ್ಲರೂ ಕೆಲಸ ಮಾಡಬೇಕು. ಅಧಿಕಾರ ಬಂದ ಮೇಲೆ ಸ್ಥಾನಮಾನಗಳನ್ನು ನೀಡುವುದು ಇದ್ದೇ ಇದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.