ಈಶ್ವರಪ್ಪ ಮಗನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣವಲ್ಲ: ಬಿ.ಎಸ್.ಯಡಿಯೂರಪ್ಪ

By Govindaraj SFirst Published Mar 17, 2024, 9:47 AM IST
Highlights

ಎಲ್ಲವೂ ಸರಿ ಹೋಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ. ಅವರು ಪಕ್ಷವನ್ನು ಕಟ್ಟಿದವರು, ಬೆಳಸಿದವರು. ಮನಸ್ಸಿಗೆ ನೋವಾಗಿರಬಹುದು. ಈಗಾಗಲೇ ಮುಖಂಡರು ಅವರ ಜೊತೆ ಮಾತಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫರ್ಧೆ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು. 
 

ಶಿವಮೊಗ್ಗ (ಮಾ.17): ಎಲ್ಲವೂ ಸರಿ ಹೋಗುತ್ತೆ ಎಂದು ನಾನು ಅಂದುಕೊಂಡಿದ್ದೇನೆ. ಅವರು ಪಕ್ಷವನ್ನು ಕಟ್ಟಿದವರು, ಬೆಳಸಿದವರು. ಮನಸ್ಸಿಗೆ ನೋವಾಗಿರಬಹುದು. ಈಗಾಗಲೇ ಮುಖಂಡರು ಅವರ ಜೊತೆ ಮಾತಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫರ್ಧೆ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು. ಎಲ್ಲವೂ ಸರಿಹೋಗಲಿದೆ. ಮೋದಿ ಬಂದಾಗ ನಮ್ ಜೊತೆ ಇರ್ತಾರೆ. ನಾಲ್ಕು ಮಾತು ಆಡ್ತಾರೆ ಅನ್ನೊ ವಿಶ್ವಾಸ ಇದೆ.  ಆ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನ ನಮ್ ಹಿರಿಯರು ಮಾಡ್ತಿದ್ದಾರೆ. ಈಶ್ವರಪ್ಪ ಸಿಟ್ಟಲ್ಲಿ, ನೋವಿನಿಂದ ಹಾಗೇ ಮಾತನಾಡಿದ್ದಾರೆ ಎಂದರು.

ಅವರ ಮಗನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣವಲ್ಲ. ಅದಕ್ಕೆ ಚುನಾವಣೆ ಸಮಿತಿ ನಿರ್ಧಾರ ಮಾಡಿರುವುದು. ಅದರಂತೆ ಆಗಿದೆ. ಬೇರೆ ಯಾರು ಕಾರಣರಲ್ಲ.‌ ಟಿಕೆಟ್ ತಪ್ಪಲು ಯಾರೋ ಒಬ್ಬರು ಕಾರಣ. ಅಂದುಕೊಂಡಿದ್ದರೇ, ಅದು ಸರಿಯಲ್ಲ. ಹೀಗಾಗಿ ಅವರ ಮನವೊಲಿಸುತ್ತೇವೆ. ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ಟಿಕೆಟ್ ಕೊಡೋದು ನಾನು ಅಲ್ಲ ರೀ. ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚೆಯಾಗುತ್ತೆ. ಅಲ್ಲಿನ ತೀರ್ಮಾನ ಆಗುತ್ತೋ ಅದೇ ಅಂತಿಮ. ನಾವು ಸಲಹೆ ಕೊಡಬಹುದು ಅಷ್ಟೇ... ಬೋರ್ಡ್ ತೀರ್ಮಾನ ಮಾಡುತ್ತೇ. ಅವರು ತಪ್ಪುಗ್ರಹಿಕೆ ಮಾಡಿಕೊಂಡಿದ್ದಾರೆ ಸರಿ ಹೋಗುತ್ತೆ ಎಂದು ಯಡಿಯೂರಪ್ಪ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ 49ನೇ ಹುಟ್ಟುಹಬ್ಬ: ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳು!

ಈಶ್ವರಪ್ಪ ನಿವಾಸಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ: ಮಗನಿಗೆ ಹಾವೇರಿ ಗದಗ ಟಿಕೇಟ್ ಮಿಸ್ ಆಗಿದ್ದಕ್ಕೆ ಪಕ್ಷದ ವಿರುದ್ದ ತೊಡೆ ತಟ್ಟಿರುವ ಈಶ್ವರಪ್ಪರನ್ನು ಸಮಾಧಾನ ಮಾಡಲು ಆರಗ ಜ್ಞಾನೇಂದ್ರ ಅವರನ್ನು ಸಂಧಾನಕಾರರಾಗಿ ಬಿಜೆಪಿ ಹೈಕಮಾಂಡ್ ಕಳುಹಿಸಿದೆ. ಆರಗ ಜ್ಞಾನೇಂದ್ರ ಜೊತೆ ಕೇಂದ್ರದ ಇಬ್ಬರು ನಾಯಕರು ಭೇಟಿ ನೀಡಿದ್ದಾರೆ. ನಾಳೆ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಈಶ್ವರಪ್ಪ ಬಂಡಾಯ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ.

click me!