ಕಾಂಗ್ರೆಸ್‌ನಿಂದ ಮೃದು ಹಿಂದುತ್ವ ಜಪ: ನಾವೂ ಹಿಂದುಗಳೇ ಎಂದ ಸಿದ್ದು

Published : Mar 29, 2022, 03:00 AM IST
ಕಾಂಗ್ರೆಸ್‌ನಿಂದ ಮೃದು ಹಿಂದುತ್ವ ಜಪ: ನಾವೂ ಹಿಂದುಗಳೇ ಎಂದ ಸಿದ್ದು

ಸಾರಾಂಶ

ಧಾರ್ಮಿಕ ವಿಚಾರಗಳ ಕುರಿತ ಇತ್ತೀಚಿನ ಚರ್ಚೆಗಳು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಮೃದು ಹಿಂದುತ್ವದ ಹಾದಿಯತ್ತ ಮತ್ತೆ ಸಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಗವದ್ಗೀತೆ ಪಠಿಸಿದರೆ, ನಾವೂ ಕೂಡ ಹಿಂದುಗಳೇ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮಾ.29): ಧಾರ್ಮಿಕ ವಿಚಾರಗಳ ಕುರಿತ ಇತ್ತೀಚಿನ ಚರ್ಚೆಗಳು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಮೃದು ಹಿಂದುತ್ವದ ಹಾದಿಯತ್ತ ಮತ್ತೆ ಸಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಭಗವದ್ಗೀತೆ ಪಠಿಸಿದರೆ, ನಾವೂ ಕೂಡ ಹಿಂದುಗಳೇ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್‌ (MB Patil) ಅವರು ಪದಗ್ರಹಣ ಮಾಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌ ಬಿಜೆಪಿಯವರು ಧರ್ಮ-ಧರ್ಮಗಳನ್ನು ವಿಭಜಿಸಿ ಕೋಮು ದ್ವೇಷ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. 

ನಾವೆಲ್ಲರೂ ಹಿಂದೂಗಳಲ್ಲವೇ? ಎಂದು ಪ್ರಶ್ನಿಸಿದರು. ನಾವೂ ಹಿಂದೂಗಳೇ. ಆದರೆ ಬೇರೆ ಧರ್ಮವನ್ನು ದ್ವೇಷಿಸುವ ಕೋಮುವಾದಿಗಳಲ್ಲ. ಈ ರಾಷ್ಟ್ರಧ್ವಜ ನಮ್ಮ ಧರ್ಮ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಪಾಲಿಗೆ ಭಗವದ್ಗೀತೆ, ಕುರಾನ್‌, ಬೈಬಲ್ ಎಲ್ಲವೂ ನಮ್ಮ ಸಂವಿಧಾನ. ನಾವು ಎಲ್ಲಾ ಧರ್ಮಗಳಿಗೂ ಗೌರವ ನೀಡುತ್ತೇವೆ ಎಂದರು. ಈಗ ಭಗವದ್ಗೀತೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಎಂಬ ವಿಚಾರ ಎತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಇನ್ನು ಹುಟ್ಟೇ ಇರಲಿಲ್ಲ. 

ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ತುಟಿ ಪಿಟಿಕ್ ಎನ್ನದ ಕಾಂಗ್ರೆಸ್

ಅವರು ಆಗಲೇ ಕೇವಲ 2 ರು.ಗೆ ಭಗವದ್ಗೀತೆ ಪುಸ್ತಕ ಹಂಚಿದ್ದರು. ರಾಜೀವ್‌ ಗಾಂಧಿ ಅವರು ದೇಶದ ಪ್ರಧಾನಿ ಆಗಿದ್ದಾಗ ದೂರದರ್ಶನದಲ್ಲಿ ಪ್ರತಿ ಭಾನುವಾರ ರಾಮಾಯಣ, ಮಹಾಭಾರತ, ಹನುಮಂತನ ಕಥೆಗಳನ್ನು ಸಾರುವ ಧಾರಾವಾಹಿಗಳನ್ನು ಪ್ರಸಾರ ಮಾಡಿದ್ದರು. ನಮ್ಮ ದೇಶದ ಸಂಸ್ಕೃತಿ ತೋರಿಸಿದ್ದರು. ಇದೆಲ್ಲವನ್ನು ನೀವು ತೋರಿಸಿದ್ದಿರೋ, ರಾಜೀವ್‌ ಗಾಂಧಿ ಅವರು ತೋರಿಸಿದ್ದರೋ? ನೀವು ಕಾಂಗ್ರೆಸ್‌ಗೆ ಹಿಂದೂ ಸಂಸ್ಕೃತಿ ಬಗ್ಗೆ ಪಾಠ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

ಶ್ಲೋಕ ಪಠಿಸಿದ ಡಿಕೇಶಿ: ನಾನಿಲ್ಲಿ ಪಠ್ಯ ಪುಸ್ತಕ ತಂದಿದ್ದೇನೆ. ಇವುಗಳಲ್ಲಿ ರಾಮಾಯಣ, ಭಗವದ್ಗೀತೆ ಅಂಶಗಳು ಇವೆಯಲ್ಲಾ ಇವುಗಳನ್ನು ನಾನು ಶಾಲೆಯಲ್ಲಿದ್ದಾಗಲೇ ಕಲಿತಿದ್ದೇನೆ. ನಾನು ಶಾಲೆಯಲ್ಲಿದ್ದಾಗಲೇ ಶ್ಲೋಕ ಕಲಿತಿದ್ದೆ ಎಂದರಲ್ಲದೆ, ಶ್ಲೋಕವನ್ನು ಹೇಳಿ ತೋರಿಸಿದರು.

ಕಣ್ಣೀರು, ರಕ್ತಕ್ಕೆ ಯಾವ ಜಾತಿ, ಧರ್ಮವಿದೆ?: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾವೂ ಹಿಂದೂಗಳೇ. ನಾವು ಎಲ್ಲ ಧರ್ಮದವರನ್ನು ಪ್ರೀತಿಸುತ್ತೇವೆ. ಇದು ಕಾಂಗ್ರೆಸ್‌ ಪಕ್ಷದ ಸಿದ್ಧಾಂತ. ಮನುವಾದಿಗಳೇ ನೀವು ಎಲ್ಲಿಯವರೆಗೆ ಜಾತಿ ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತೀರೋ ಅಲ್ಲಿಯವರೆಗೂ ನಿಮ್ಮನ್ನು ಜನ ಕ್ಷಮಿಸುವುದಿಲ್ಲ. ಜನರ ಕಣ್ಣೀರು, ರಕ್ತಕ್ಕೆ ಯಾವ ಜಾತಿ, ಧರ್ಮ ಇದೆ? ಬಿಜೆಪಿಯವರು ಎಷ್ಟೇ ಕೋಮುವಾದಿಗಳಾಗಿದ್ದರು, ರಾಜ್ಯದ ಜನರನ್ನು ಎಚ್ಚರಿಸಿ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಹಾಕೋಣ ಎಂದು ಕರೆ ನೀಡಿದರು.

ಇವತ್ತಿನ ಈ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ: ಎಚ್‌.ಡಿ.ಕುಮಾರಸ್ವಾಮಿ

2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್‌: ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಂತರ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ (Election) ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡಲ್ಲ. ವರುಣ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲ್ಲೂ ಒತ್ತಡವಿದೆ. ರಾಜಕೀಯ ಪುನರ್‌ಜನ್ಮ ಕೊಟ್ಟಚಾಮುಂಡೇಶ್ವರಿ ಕ್ಷೇತ್ರದ ಜನರೆ ನನ್ನನ್ನು ಸೋಲಿಸಿದರು. ಆದರೂ ನಾನು ಅವರನ್ನು ದ್ವೇಷಿಸಲಿಲ್ಲ. ಆಗ ಮತ್ತೆ ಅವರೇ ನನ್ನನ್ನು ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌