Vidhan Parishat Election: ದೇಶಾದ್ಯಂತ ಕಾಂಗ್ರೆಸ್‌ ಪರ ಅಲೆ ಪ್ರಾರಂಭ: ಸಲೀಂ ಅಹ್ಮದ್‌

By Kannadaprabha News  |  First Published Nov 26, 2021, 11:57 AM IST

*  ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ಜನರ ಮುಂದಿಟ್ಟು ಮತ ಕೇಳುತ್ತೇವೆ
*  14ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು
*  ಕೃಷಿ ಕಾಯಿದೆ ಜಾರಿಗೆ ತಂದಾಗ ಬಲವಾಗಿ ವಿರೋಧಿಸಿದ್ದ ಕಾಂಗ್ರೆಸ್‌ 
 


ಗದಗ(ನ.26): ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ(BJP) ಸರ್ಕಾರಗಳ ಭ್ರಷ್ಟಾಚಾರ ಹಾಗೂ ರೈತ ವಿರೋಧಿ ನೀತಿಗಳನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಆ ಮೂಲಕ ಪರಿಷತ್‌ನಲ್ಲಿ 14ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವಿಧಾನ ಪರಿಷತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾಕೆ ನೀವು ಕಾಂಗ್ರೆಸ್‌ಗೆ(Congress)ಮತ ಹಾಕಬೇಕು, ಯಾವ ಕಾರಣಕ್ಕಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಕುರಿತು ನಮ್ಮ ಕಾರ್ಯಕರ್ತರು ಪ್ರತಿಯೊಬ್ಬರಿಗೂ ಸವಿವರವಾಗಿ ತಿಳಿಸುತ್ತಾರೆ ಎಂದರು.

Tap to resize

Latest Videos

undefined

Karnataka Council Election : ಅಭ್ಯರ್ಥಿ ಪರ ಪ್ರಚಾರಕ್ಕೆ ಎಚ್‌.ಡಿ.ದೇವೇಗೌಡ ಆಗಮನ

ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರ ತನ್ನ 7 ವರ್ಷದ ಅಧಿಕಾರವಧಿಯಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ ಒಂದೇ ಒಂದು ಹೊಸ ಉದ್ಯೋಗ ಸೃಷ್ಟಿಸಿಲ್ಲ. ಬದಲಾಗಿ ಕೋಟ್ಯಂತರ ಯುವಕರು ಉದ್ಯೋಗ(Job) ಕಳೆದುಕೊಂಡಿದ್ದಾರೆ. ಇದೇ ಇವರು ಮಾಡಿದ ಸಾಧನೆಯಾಗಿದೆ. ನಿಮ್ಮ ಖಾತೆಗೆ ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಇಷ್ಟು ವರ್ಷ ಕಳೆದರೂ ಒಂದೇ ಒಂದು ರುಪಾಯಿ ಕಪ್ಪು ಹಣ ಮರಳಿ ತರಲು ಇವರಿಂದ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

ಕೃಷಿ(Agriculture) ವಲಯಕ್ಕೆ ಮಾರಕವಾಗುವ ಕೃಷಿ ಕಾಯಿದೆಗಳನ್ನು(Farm Laws) ಜಾರಿಗೆ ತಂದಾಗ ಕಾಂಗ್ರೆಸ್‌ ಬಲವಾಗಿ ವಿರೋಧಿಸಿತ್ತು. ರೈತರು(Farmers) ಕೂಡಾ ಒಂದು ವರ್ಷದ ಹೋರಾಟ ಮಾಡಿದರೂ ತಮ್ಮ ದರ್ಪದಿಂದಲೇ ವರ್ತಿಸಿದ್ದ ಪ್ರಧಾನಿ ಮೋದಿ, ಕೊನೆಗೆ ಹೋರಾಟಕ್ಕೆ ಮಣಿದು ದೇಶದ ಜನರ ಕ್ಷಮೆ ಕೋರಿ ಕಾನೂನು ಹಿಂದಕ್ಕೆ ಪಡೆಯುದಾಗಿ ಹೇಳಿದ್ದಾರೆ. ಈಗ ಅವರಿಗೆ ಜ್ಞಾನೋದಯವಾಗಿದೆ ಎಂದು ಲೇವಡಿ ಮಾಡಿದರು.

ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಪ್ರಾರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ(Assembly Election) ನಡೆದರೂ ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಧಾರವಾಡ(Dharwad) ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಖಂಡಿತವಾಗಿಯೂ ಗೆಲುವು ಸಾಧಿಸುತ್ತೇವೆ. ಇದಕ್ಕೆ ಎಲ್ಲ ಸ್ಥಳೀಯ ನಾಯಕರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.

ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ

ಕಾಂಗ್ರೆಸ್‌ನಿಂದ ಯಾವುದೇ ಮೀಸಲಾತಿ ರಾಜಕಾರಣ(Politics) ಮಾಡುತ್ತಿಲ್ಲ. ಏನಿದ್ದರೂ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ, ಪಕ್ಷಕ್ಕೆ ಮೊದಲ ಪ್ರಾಶಸ್ತ್ಯದ ಮತ ಬೀಳುವಂತೆ ಮಾಡುವುದು ಎಲ್ಲರ ಹೊಣೆ. ಈ 25 ಸ್ಥಾನಗಳ ಪೈಕಿ 15ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಲಿದೆ ಎಂದರು.

Council Election : 'ಕಾಂಗ್ರೆಸ್ - ಜೆಡಿಎಸ್‌ನವರಿಂದಲೂ BJPಗೆ ಮತ ಸಿಗಲಿವೆ'

ಪರಿಷತ್‌ ಚುನಾವಣೆಯಲ್ಲಿ ಜನಪ್ರತಿನಿಧಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹೆಚ್ಚಿನ ಮತಗಳ ಅಂತರಗಳ ಗೆಲವು ಸಾಧಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಿಂದೆ 14 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿಸಿತ್ತು. ಈ ಸಲ ಅದಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಡಿ.ಆರ್‌. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಶ್ರೀಶೈಲಪ್ಪ ಬಿದರೂರ, ಜಿ.ಎಸ್‌. ಗಡ್ಡದೇವರಮಠ, ಐ.ಎಸ್‌.ಪಾಟೀಲ, ನಾಗರಾಜ ಛಬ್ಬಿ, ವಾಸಣ್ಣ ಕುರುಡಗಿ, ಟಿ. ಈಶ್ವರ, ಯುವ ಮುಖಂಡ ಸಚಿನ್‌ ಪಾಟೀಲ, ಅಲ್ಪ ಸಂಖ್ಯಾತರ ಮುಖಂಡರು ಸ್ಥಳೀಯ ಯುವ ಕಾರ್ಯಕರ್ತರು ಹಾಜರಿದ್ದರು.
 

click me!