
ಮೈಸೂರು, (ಮಾ.01): ಮಂಡ್ಯದಲ್ಲಿ ಜೆಡಿಎಸ್ ಹಾಗೂ ಅಂಬರೀಶ್ ಅಭಿಮಾನಿಗಳ ವಾಕ್ಸಮರ ಮುಂದುವರಿದಿದೆ. ನಿನ್ನೆ (ಗುರುವಾರ) ಮಂಡ್ಯಕ್ಕೆ ಅಂಬಿ ಸಾಧನೆ ಏನು ಎಂದಿರುವ ಸಿಎಂ ಕುಮಾರಸ್ವಾಮಿ ಈಗ ಯೂಟರ್ನ್ ಹೊಡೆದಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಮಾತನಾಡಿದ ಸಿಎಂ, ಅಂಬರೀಶ್ ಗೆ ರಾಜಕೀಯದ ಅವಕಾಶ ಕಲ್ಪಿಸಿಕೊಟ್ಟಿದ್ದೆ ಕುಮಾರಸ್ವಾಮಿಯವರ ಸಹವಾಸದಿಂದಾಗಿ ಎಂದರು.
ಮಂಡ್ಯ ಸೀಟು ಸಮರ ತಾರಕಕ್ಕೆ; ಜೆಡಿಎಸ್‌ಗೆ ಅಂಬೀ ಫ್ಯಾನ್ಸ್ ಸವಾಲ್!
ಅಂಬರೀಶ್ ಅವರು ಕೆಲಸ ಮಾಡಿಲ್ಲ ಅಂತಾ ನಾನು ಹೇಳಿಲ್ಲ. ಅಮೃತ ಮಹೋತ್ಸವ ಆಚರಣೆ ಮಾಡಿದ್ದು ಬಿಟ್ರೆ, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಆಗಿಲ್ಲಎಂದಿದ್ದೇನೆ ಎಂದು ಸಮಜಾಯಿಸಿ ನೀಡಿದರು.
ಅದು ಅಂಬರೀಶ್ ಬಗ್ಗೆ ಮಾತನಾಡಿದ್ದಲ್ಲ, ಸರ್ಕಾರ ಏನೂ ಕೆಲಸ ಮಾಡಿಲ್ಲ ಎಂದಿದ್ದೇನೆ, ಈ ಬಗ್ಗೆ ಕೆಲವರು ಏನೇನೋ ಚರ್ಚೆ ಮಾಡಿದ್ರೇ ನಾನೇನು ಮಾಡಲಿ. ಅಂಬರೀಶ್ ಬದುಕಿರವರೆಗೂ ನನ್ನ ಜೊತೆ ಆತ್ಮೀಯವಾಗಿದ್ದರು. ನಾನ್ಯಾಕೆ ಅವರ ಬಗ್ಗೆ ಟೀಕೆ ಮಾಡಲಿ ಎಂದು ಸ್ಪಷ್ಟನೆ ನೀಡಿದರು.
ಕೈ ಟಿಕೆಟ್ ಇಲ್ಲ, ದೋಸ್ತಿಗೆ ನಡುಕ ತಂದ ಸುಮಲತಾ ಮೊದಲ ಹೆಜ್ಜೆ
ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ.
ಇದ್ರಿಂದ ಮಂಡ್ಯದಲ್ಲಿ ನಿನ್ನೆ (ಗುರುವಾರ) ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಮಾತ್ರ ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಏನು ಎಂದು ಪ್ರಶ್ನಿಸಿ ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಅಂಬಿ ಅಭಿಮಾನಿಗಳು, ಅಂಬರೀಷ್ ಜೊತೆ ಸಿಎಂ ಕುಮಾರಸ್ವಾಮಿ ಕೈ ಕಟ್ಟಿ ನಿಂತು ಕೊಂಡಿರೋ ಪೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಂಬರೀಶ್ ರಾಜಕೀಯದಲ್ಲಿ ರಾರಾಜಿಸುತ್ತಿರುವಾಗ ನೀವು ಬಚ್ಚಾ ಇದ್ದೀರಿ, ಕೈ ಕಟ್ಟಿ ನಿಂತಿದ್ದೀರಿ ಅಂತ ಸಿಎಂ ಕಾಲೆಳೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.