ವಿಧಾನಸಭಾ ಕಲಾಪದ ವೇಳೆ ಮಾತನಾಡುವುದಕ್ಕೂ ಅವಕಾಶ ನೀಡದೇ ಗಲಾಟೆ ಮಾಡುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು "ನಿಮ್ಮಂಥವರನ್ನು ಆಯ್ಕೆ ಮಾಡುವುದೇ ಅಗೌರವ" ಎಂದು ಹೇಳಿಕೆ ನೀಡಿದರು.
ಬೆಂಗಳೂರು (ಫೆ.16): ರಾಜ್ಯದಲ್ಲಿ ವಿಧಾನಸಭಾ ಕಲಾಪದ ವೇಳೆ ಮಾತನಾಡುವುದಕ್ಕೂ ಅವಕಾಶ ನೀಡದೇ ಗಲಾಟೆ ಮಾಡುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು "ನಿಮ್ಮಂಥವರನ್ನು ಆಯ್ಕೆ ಮಾಡುವುದೇ ಅಗೌರವ" ಎಂದು ಹೇಳಿಕೆ ನೀಡಿದರು. ಈ ಮಾತನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು.
ಸಚಿವ ಡಾ. ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ವೇಳೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಲು ಮುಂದಾದರು. ಈ ವೇಳೆ ಈಶ್ವರ ಖಂಡ್ರೆ ಅವರು ಮಾತನಾಡಲೂ ಬಿಡದೇ ತುಸು ಹೆಚ್ಚಾಗಿ ಗಲಾಟೆಯನ್ನು ಮಾಡಿದ್ದರಿಂದ ಸ್ಪೀಕರ್ ಕಾಗೇರಿ ಅವರು ಅಸಮಾಧಾನ ಹೊರಹಾಕಿದರು. ಈ ವೇಳೆ ಸುಮ್ಮನೆ ಕುಳಿತುಕೊಳ್ಳಿ ನೀವು, ನಿಮ್ಮಂತವನ್ನು ಜನರು ಸದನಕ್ಕೆ ಆಯ್ಕೆ ಮಾಡುವುದೇ ಅಗೌರವ ಎಂದು ಚಾಟಿ ಬೀಸಿದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ: ಅಶ್ವತ್ಥ್‌ಗೆ ಸಿದ್ದರಾಮಯ್ಯ ತಿರುಗೇಟು
ನೀವು ಕಾಂಗ್ರೆಸ್ ಸದಸ್ಯರನ್ನು ಅಗೌರವದಿಂದ ಮಾತಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಸ್ಪೀಕರ್ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ. ಸದನದ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಕಾಂಗ್ರೆಸ್ ಸದಸ್ಯರು. ವೈಯಕ್ತಿಕವಾಗಿ ಟಾರ್ಗೆಟ್ ಮಾಡೋದು ಸರಿಯಲ್ಲ ಎಂದ ಈಶ್ವರ ಖಂಡ್ರೆ. ಸ್ಪೀಕರ್ ಮತ್ತು ಕಾಂಗ್ರೆಸ್ ಸದಸ್ಯರಮಧ್ಯೆ ಮಾತಿನ ಚಕಮಕಿ. ಸದನ 15 ನಿಮಿಷಗಳ ಕಾಲಮುಂದೂಡಿಕೆ ಮಾಡಲಾಯಿತು.
ಮುಂಚಿನಿಂದಲೂ ಈಶ್ವರ್‌ಖಂಡ್ರೆ- ಸ್ಪೀಕರ್ ನಡುವೆ ಜಟಾಪಟಿ:
ಮೊದಲಿನಿಂದಲೂ ವಿಧಾನಸಭೆ ಕಲಾಪದ ವೇಲೆ ಈಶ್ವರ ಖಂಡ್ರೆ ಮತ್ತು ಸ್ಪೀಕರ್ ಮಧ್ಯೆ ಜಟಾಪಟಿ ಇದೆ. ಖಂಡ್ರೆಗೆ ಮಾತಾಡಲು ಯಾವಾಗಲೂ ಅವಕಾಶ ಕೊಡುವಲ್ಲಿ ಸ್ಪೀಕರ್ ಗೆ ನಿರಾಸಕ್ತಿ ಇದೆ. ಅಧಿವೇಶನದಲ್ಲಿ ಯಾವಾಗಲೂ ಈಶ್ವರ ಖಂಡ್ರೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೆ. ಖಂಡ್ರೆ ಮಾತಾಡಿದಾಗ ಯಾವಾಗಲೂ ಸ್ಪೀಕರ್ ಸಿಟ್ಟಾಗುತ್ತಾರೆ. ಇವತ್ತು ಸಹ ಇದೇ ಪುನರಾವರ್ತನೆ ಆಗಿದೆ. ಇಂದು ಅತಿರೇಕಕ್ಕೆ ಹೋಗಿ ನಿಮ್ಮನ್ನು ಆಯ್ಕೆ ಮಾಡುವುದೇ ಅಗೌರವ ಎಂದು ಹೇಳಿಕೆ ನೀಡಿದ್ದಾರೆ.
ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ: ಇನ್ನುಕಲಾಪದ ವೇಳೆ ಈಶ್ವರ್ ಖಂಡ್ರೆ ಬಗ್ಗೆ ಮಾತನಾಡಿದ ಮತ್ತು ಹೊರಗೆ ಹಾಕುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಅವರ ಬಗ್ಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಕುರಿತಂತೆ ಅಧಿವೇಶನವನ್ನು ಕೆಲ ಕಾಲ ಮುಂದೂಡಲಾಗಿತತು. ಈ ವೇಳೆ ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆಯನ್ನೂ ಮಾಡಲಾಯಿತು. ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಯು.ಟಿ. ಖಾದರ್ ಮತ್ತಿತರರು ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದರು.
ಸಿದ್ದುರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು: ಸಚಿವ ಅಶ್ವತ್ಥ ನಾರಾಯಣ
ಕಲುಷಿತ ನೀರು ಸೇವಿಸಿದವರು ತೆಲಂಗಾಣ ಆಸ್ಪತ್ರೆಗೆ ದಾಖಲು: ಮಧ್ಯಪ್ರವೇಶ ಮಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ಸಾವನ್ನಪ್ಪಿದ್ದಾರೆ. ಅಸ್ವಸ್ಥರಾದವರನ್ನು ಪಕ್ಕದ ರಾಜ್ಯ ತೆಲಂಗಾಣದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೊನ್ನೆ ಸಿ.ಟಿ. ರವಿ ಹೇಳ್ತಾ ಇದ್ದರು. ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜ್ ಮಾಡಿದ್ದೇವೆ ಎಂದು ಹೇಳಿದ್ದರು. ಎಲ್ಲವೂ ಆಗಿದ್ದರೆ ಕಲುಷಿತ ನೀರು ಸೇವೆನ ಮಾಡಿ ಅಸ್ವಸ್ಥಗೊಂಡವರನ್ನು ಯಾಕೆ ತೆಲಂಗಾಣದ ಆಸ್ಪತ್ರೆಗೆ ಸೇರಿಸಲಾಗಿದೆ. ಇದು ನೋಡಿ ನಮ್ಮ ಆಸ್ಪತ್ರೆ ಪರಿಸ್ಥಿತಿ ಎಂದ ಕುಮಾರಸ್ವಾಮಿ ಟೀಕೆ ಮಾಡಿದರು.