ಕಲಬುರಗಿ, ಕರ್ನಾಟಕ ಅಂದಾಕ್ಷಣ ಕಡೆಗಣ್ಣಿಂದ ನೋಡಿರೋ ಬಿಜೆಪಿ ಮಂದಿ ಈಗ ಮತಕ್ಕಾಗಿ ನಿತ್ಯ ಬೆಂಗಳೂರು, ಕಲಬುರಗಿ ಸುತ್ತುತ್ತಿದ್ದಾರೆ. ಇವರ ಮಾತಿಗೆ ಮರಳಾಗಬೇಡಿ. ಇದು ಬರೀ ಪೈಪೋಟಿಗಾಗಿ ನಡೆಯುತ್ತಿರೋ ಚುನಾವಣೆಯಲ್ಲ, ಕರ್ನಾಟಕದ ಭವಿಷ್ಯ ನಿರ್ಧರಿಸೋ ಚುನಾವಣೆಯಾಗಿದೆ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ/ಬಳ್ಳಾರಿ(ಮೇ.09): ನಾನು ಈ ಮಣ್ಣಿನ ಮಗ. ನನ್ನ ಗೌರವ ಕಳೆಯುವುದು, ಹೆಚ್ಚಿಸುವುದು ನಿಮ್ಮ ಕೈಯಲ್ಲಿದೆ. ಖರ್ಗೆ ಕುಟುಂಬ ಸಾಫ್ ಮಾಡ್ತಾರಂತೆ. ನನ್ನ ಮುಗಿಸಿದರೆ, ಪ್ರಶ್ನೆ ಕೇಳುವ ಮತ್ತೊಬ್ಬ ಹುಟ್ಟುತ್ತಾನೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸೋಮವಾರದಂದು ಕಲಬುರಗಿ, ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಲಬುರಗಿ, ಕರ್ನಾಟಕ ಅಂದಾಕ್ಷಣ ಕಡೆಗಣ್ಣಿಂದ ನೋಡಿರೋ ಬಿಜೆಪಿ ಮಂದಿ ಈಗ ಮತಕ್ಕಾಗಿ ನಿತ್ಯ ಬೆಂಗಳೂರು, ಕಲಬುರಗಿ ಸುತ್ತುತ್ತಿದ್ದಾರೆ. ಇವರ ಮಾತಿಗೆ ಮರಳಾಗಬೇಡಿ. ಇದು ಬರೀ ಪೈಪೋಟಿಗಾಗಿ ನಡೆಯುತ್ತಿರೋ ಚುನಾವಣೆಯಲ್ಲ, ಕರ್ನಾಟಕದ ಭವಿಷ್ಯ ನಿರ್ಧರಿಸೋ ಚುನಾವಣೆ. ನನ್ನ ಪಕ್ಷದ ಹೆಚ್ಚಿನ ಶಾಸಕರು ನನ್ನೂರಿನಿಂದ ಆಯ್ಕೆಯಾದಲ್ಲಿ ಭೇಷ್ ಅಂತಾರೆ, ಇಲ್ದೆ ಹೋದ್ರೆ, ಎಐಸಿಸಿ ಅಧ್ಯಕ್ಷರಾದರೂ ಎಂಎಲ್‌ಎಗಳನ್ನು ಗೆಲ್ಲಿಸಲಾಗಲಿಲ್ಲ ಎಂದು ನಿಂದಿಸ್ತಾರೆ. ನನ್ನ ನಿಂದನೆಗೆ ಗುರಿ ಪಡಿಸೋದು, ಗೌರವ ಹೆಚ್ಚಿಸೋದು ಎರಡೂ ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್‌ಗೆ ಕಣ್ಮುಚ್ಚಿ ಮತ ಹಾಕ್ರಿ ಎಂದರು.
ಖರ್ಗೆಗೆ 80 ವರ್ಷವಾಗಿದೆ, ಯಾವಾಗ ಬೇಕಾದ್ರೂ ಮೇಲೆ ಹೋಗಬಹುದು: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಮಳೆಯಲ್ಲಿಯೇ ಖರ್ಗೆ ಭಾಷಣ:
ಬಳ್ಳಾರಿ ನಗರದ ಕಣೇಕಲ್ ಬಸ್ ನಿಲ್ದಾಣದಲ್ಲಿ ಜರುಗಿದ ಕಾಂಗ್ರೆಸ್ ಪ್ರಚಾರ ಸಭೆ ವೇಳೆ ತುಂತುರು ಮಳೆ ಶುರುವಾಯಿತು. ಮಳೆಯ ನಡುವೆ ಭಾಷಣ ಮುಂದುವರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಖರ್ಗೆ ಕುಟುಂಬ ಸಾಫ್ ಮಾಡ್ತಾರಂತೆ
ಬಿಜೆಪಿ ಚಿತ್ತಾಪುರ ಹುರಿಯಾಳು ನಮ್ಮ ಕುಟುಂಬ ಮುಗಿಸಿ ಬಿಡುತ್ತಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ಬಿಜೆಪಿ ಮುಖಂಡರು ಈತನ ಹಿಂದಿಲ್ಲದೆ ಇಂತಹ ಮಾತು ಆಡಲು ಹೇಗೆ ಸಾಧ್ಯ? ಭಾರತೀಯರ ಸರಾಸರಿ ಆಯುಷ್ಯ 70ರಿಂದ 71 ವರ್ಷ. ತಮಗೀಗ 81 ವರ್ಷ, ಈಗಾಗಲೇ ಬೋನಸ್‌ನಲ್ಲಿರುವೆ. ನನ್ನ ಮುಗಿಸುವವರು ಮುಗಿಸಲಿ, ಹಾಗಂತ ಅವರು ನಿಶ್ಚಿಂತೆಯಿಂದ ಇಲಾಗದು. ನನ್ನಂತೆಯೇ ಇನ್ನೊಬ್ಬರು ಹುಟ್ಟಿಇವರಿಗೆ ಪ್ರಶ್ನೆ ಕೇಳುತ್ತಾರೆಂದು ಖರ್ಗೆ ಹೇಳಿದರು.