ಕಾಂಗ್ರೆಸ್‌ನಿಂದ ಮತಬ್ಯಾಂಕ್ ರಾಜಕಾರಣ: ಮಾಜಿ ಸಚಿವ ಸಿ.ಟಿ.ರವಿ

Kannadaprabha News   | Kannada Prabha
Published : Jun 08, 2025, 10:46 PM IST
CT Ravi

ಸಾರಾಂಶ

ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್‌ ಜಿಹಾದ್‌ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು.

ಮಂಗಳೂರು (ಜೂ.08): ಸಮಾಜದಲ್ಲಿ ಅಶಾಂತಿಗೆ ಗೋಹತ್ಯೆ, ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಲವ್‌ ಜಿಹಾದ್‌ ಮಾತ್ರವಲ್ಲ ಮತೀಯವಾದ ಬಿತ್ತುವ ಪರಕೀಯ ಮತಗ್ರಂಥಗಳೂ ಕಾರಣವಾಗಿವೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಚರ್ಚೆ ನಡೆಯಬೇಕು. ಇಂತಹ ಪರಕೀಯ ಮತಗ್ರಂಥಗಳ ವಿರುದ್ಧ ಸರ್ಕಾರ ಯಾವಾಗ ಕ್ರಮ ಕೈಗೊಳ್ಳತ್ತದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಮಾಡುವವರ ಮೇಲೆ ಸರ್ಕಾರದ ಸೂಚನೆ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಆದರೆ ಕೋಮುವಾದ ಬಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ತಾಕತ್ತಿದ್ದರೆ‌ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ. ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ, ಅವುಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು. ಮತಗ್ರಂಥಗಳಲ್ಲಿ ಕಾಫಿರರನ್ನು ಕೊಲ್ಲಿ ಎನ್ನುತ್ತಾರೆ. ಅದರ ಮೇಲೆ ಕ್ರಮ ಕೈಗೊಂಡರೆ ಜಗತ್ತಿನಲ್ಲೇ ಶಾಂತಿ‌ ನೆಲೆಸುತ್ತದೆ. ಅದು ಬಿಟ್ಟು ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣ ಮಾಡಬಾರದು. ಮತೀಯ ಭಾವ ಬಿತ್ತುವ ಮತ ಗ್ರಂಥಗಳನ್ನು ನಿಷೇಧಿಸುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದರು.

ಸಂಘರ್ಷದ ಮೂಲ ಪತ್ತೆ ಮಾಡಿ: ಸೋಮವಾರ ಮಂಗಳೂರಿಗೆ ಬಿಜೆಪಿ ನಿಯೋಗ ಆಗಮಿಸಲಿದೆ. ದ. ಕ. ಜಿಲ್ಲೆಗೆ ಭೇಟಿ ನೀಡಿ ಸುಹಾಸ್ ಶೆಟ್ಟಿ ಹತ್ಯೆ, ರೆಹಮಾನ್ ಹತ್ಯೆ ಹಾಗೂ ಸರಣಿ ಘಟನೆಗಳ ಅಧ್ಯಯನ ನಡೆಸಲಿದೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಲೇ ಬೇಕು, ಇತ್ತೀಚೆಗೆ ಕಾಂಗ್ರೆಸ್‌ನ ಹರಿಪ್ರಸಾದ್ ಹಾಗೂ ನಾಸಿರ್‌ ನೇತೃತ್ವದ ನಿಯೋಗ ಕೂಡ ಶಾಂತಿ ಪ್ರಸ್ತಾಪನೆ ಮಾಡಿದ್ದಾರೆ. ನಾಸಿರ್ ಹುಸೇನ್ ವರದಿ ಎಷ್ಟು ಪ್ರಾಮಾಣಿಕ ವರದಿಯಾಗಿರುತ್ತದೆ ಎನ್ನುವ ಸಂಶಯ ಇದೆ.

ನಾಸಿರ್‌ ರಾಜ್ಯಸಭೆಗೆ ಆಯ್ಕೆಯಾದಾಗ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದರು ಎಂದರು. ಗೋ ಹತ್ಯೆ ಮಾಡುವವರು ಮತ್ತು ತಡೆಯುವವರನ್ನು ಒಂದೇ ತಕ್ಕಡಿಯಲ್ಲಿ ಇರಿಸಿ ನೋಡಲಾಗುತ್ತದೆ. ಪೊಲೀಸ್ ಇಲಾಖೆ ಇಂತಹ ಕೆಲಸ ಮಾಡಬಾರದು, ಗೋ ಹತ್ಯೆ ಮಟ್ಟ ಹಾಕಿ, ಲವ್ ಜಿಹಾದ್ ಸಂಘಟಿತ ಕೃತ್ಯವನ್ನು ಸಂಪೂರ್ಣ ತಡೆಯಬೇಕು. ಅವರಿಗೆ ಸಂಘಟಿತ ಬೆಂಬಲ ಸಿಗುತ್ತಿದೆ. ಮತಾಂತರ ವ್ಯವಸ್ಥೆ ಮಟ್ಟ ಹಾಕಬೇಕು. ಹೀಗಾದಲ್ಲಿ ಜಗಳ ಮತ್ತು ಸಂಘರ್ಷ ನಿಂತು ಹೋಗಲಿದೆ ಎಂದರು.

ಇವರಿಗೆ ಹಣದ ಮೂಲ ಯಾವುದು?: ಮತೀಯ ಕಾರಣಕ್ಕಾಗಿ ಕೆಲವರು ಇವರಿಗೆ ಹಣ ಪೂರೈಸುತ್ತಾರೆ. ಗಾಂಜಾ,‌ ಮರಳು ದಂಧೆ, ಬೆಟ್ಡಿಂಗ್ ದಂಧೆ, ಅನೈತಿಕ ಕಾರ್ಯಕ್ಕೆ ಹಣಕಾಸು ಸಹಾಯ ಮಾಡುತ್ತದೆ. ಎಸ್ಪಿ ಮತ್ತು ಕಮಿಷನರ್ ನಿಮ್ಮ ಇಲಾಖೆಯ ಕೆಲವರು ಇಂತಹವರ ಜೊತೆ ಕೈಜೋಡಿಸುತ್ತಿರುವುದನ್ನು ತಪ್ಪಿಸಿ, ಸಜ್ಜನರು ಮತ್ತು ದುರ್ಜನರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುತ್ತಿದ್ದೀರಿ. ಹೀಗೆ ಮಾಡಿದರೆ ಇದು ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಾರಕವಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗರಣ ಮಾಡುತ್ತಿದೆ. ಒಂದು ಹಗರಣ ಇನ್ನೊಂದು ಹಗರಣವನ್ನು ಬದಿಗೆ ಸರಿಸುತ್ತಿದೆ. ಸಂವೇದನೆ, ನೈತಿಕತೆ ಹೊತ್ತಿಕೊಳ್ಳಬೇಕಾದವರು ಹೊತ್ತಿಕೊಳ್ಳೋದಿಲ್ಲ. ಈಗ ಹಗರಣವನ್ನೇ ಜೀರ್ಣಿಸುವಷ್ಟು ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದು ಸಿ.ಟಿ. ರವಿ ಲೇವಡಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್