ಸಿದ್ದರಾಮಯ್ಯ ಎದುರಲ್ಲೇ ಡಿಕೆಶಿಯನ್ನು ಸಿಎಂ ಮಾಡುವಂತೆ ಆಗ್ರಹಿಸಿದ ಒಕ್ಕಲಿಗ ಸ್ವಾಮೀಜಿ

By Sathish Kumar KH  |  First Published Jun 27, 2024, 1:38 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಸಿಎಂ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಒಕ್ಕಲಿಗ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ.


ಬೆಂಗಳೂರು (ಜೂ.27): ರಾಜ್ಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಡಿ.ಕೆ. ಶಿವಕುಮಾರ್ ಮಾತ್ರ ಸಿಎಂ ಆಗಿಲ್ಲ. ಹೀಗಾಗಿ, ಸಿದ್ದರಾಂಯ್ಯ ಅವರು ತಮ್ಮ ಸಿಂಎಂ ಸ್ಥಾನವನ್ನು ಬಿಟ್ಟುಕೊಟ್ಟು ಡಿ.ಕೆ. ಶಿವಕುಮಾರ್ ಅವರ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೆಂಗೇರಿ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

'ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದರು. ಮುಂದುವರೆದು, ಯಾವುದೇ ಕಾರಣಕ್ಕೂ ಬೆಂಗಳೂರು ಭಾಗ ಮಾಡೋಕೆ ಹೋಗಬೇಡಿ. ಬೆಂಗಳೂರು ಒಂದಾಗಿಯೇ ಇರಲಿ. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಬಿಟ್ಟಕೊಡಲಿ ಎಂದು ನೇರವಾಗಿ ಹೇಳಿದರು.

Latest Videos

undefined

ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿರುವುದು ಮನೆ ಮುರುಕ ನಿರ್ಧಾರ: ಎಂಎಲ್‌ಸಿ ರವಿಕುಮಾರ್

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಸರ್ಕಾರ ಅಧಿಕಾರಕ್ಕೆ ತರಲು ನಿಮ್ಮೊಂದಿಗೆ ಶ್ರಮಿಸಿದ ಡಿ.ಕೆ. ಶಿವಕುಮಾರ್ ಮಾತ್ರ ಈವರೆಗೆ ಸಿಎಂ ಆಗಿಲ್ಲ. ಸಿದ್ದರಾಮಯ್ಯ ದಯವಿಟ್ಟು ಡಿಕೆಶಿಗೆ ಅಧಿಕಾರ ಬಿಟ್ಟು ಕೊಡಬೇಕು. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಮಾತ್ರ ಇದು ಆಗುತ್ತದೆ. ವೇದಿಕೆಯಲ್ಲಿಯೇ ಸಿಎಂ ಸಿದ್ದರಾಮಯ್ಯಗೆ ನಾನು ಮತ್ತೊಮ್ಮೆ ನಮಸ್ಕಾರ ಮಾಡ್ತೀನಿ. ನೀವು ಡಿ.ಕೆ. ಶಿವಕುಮಾರ್ ಅವರನ್ನು ದಯವಿಟ್ಟು ಮುಖ್ಯಮಂತ್ರಿ ಮಾಡಿ ಎಂದು ಮನವಿಯನ್ನೂ ಮಾಡಿಕೊಂಡರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಾಲನಂದನಾಥ ಸ್ವಾಮೀಜಿ ಮಾತನಾಡಿ, ನಾಡಿನ ಮೂಲೆಮೂಲೆಯಲ್ಲಿ ಕೆಂಪೇಗೌಡರ ದಿನಾಚರಣೆ ಮಾಡಲಾಗ್ತಿದೆ. ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಕೆಂಪೇಗೌಡರು 500 ವರ್ಷದ ಇತಿಹಾಸವನ್ನ ಹೊಂದಿದ್ದಾರೆ. ತಾಂತ್ರಿಕ ವೈಜ್ಞಾನಿಕ ಯುಗದಲ್ಲಿರುವ ನಾವು ಆದರ್ಶ ವ್ಯಕ್ತಿಗಳು ದೂರವಾಗುವ ಕಾಲದಲ್ಲಿದ್ದೇವೆ. ಹೀಗಾಗಿ, ಕೆಂಪೇಗೌಡರಂತಹ ಆದರ್ಶಗಳನ್ನು ಜಯಂತಿ ಮೂಲಕ‌ ತಿಳಿಸಬೇಕು. ಕೆಂಪೇಗೌಡರ ಅವರ ಆಡಳಿತದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳನ್ನ ಬರುವ ಸರ್ಕಾರಗಳು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಕೆಂಪೇಗೌಡರ ಬಗ್ಗೆ ತಿಳಿಯಲು ರಸಪ್ರಶ್ನೆಗಳು, ಚರ್ಚಾಸ್ಪರ್ಧೆ ಮಾಡಲು ಸರ್ಕಾರ ಮುಂದಾಗಿದೆ. ಕೆಂಪೇಗೌಡರ  ಹಲವು ಯೋಜನೆಗಳ ಬಗ್ಗೆ ಸಿಎಂಗೆ ಒಲವಿದೆ ಎಂದು ಹೇಳಿದರು.

ಚನ್ನಪಟ್ಟಣ ಉಪ ಚುನಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಸ್ಪರ್ಧೆ?

 ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗರು ಅಂತಾ ಸಿಎಂ ಮಾಡಿ ಎಂದು ಹೇಳ್ತಾ ಇಲ್ಲ. ಅವರು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದಾರೆ. ಎಲ್ಲರೂ ಅಧಿಕಾರ ಅನುಭವಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೂಡಾ ರಾಜ್ಯದಲ್ಲಿ ಓಡಾಡಿ ಕೆಲಸ ಮಾಡಿದ್ದಾರೆ. ಅವರಿಗೂ ಅಧಿಕಾರ ಸಿಗಲಿ. ಅವರ ನಂತರ ಕಾಂಗ್ರೆಸ್‌ ಪಕ್ಷದ ಇತರೆ ನಾಯಕರಿಗೂ ಅಧಿಕಾರ ಸಿಗಲಿ.
- ಚಂದ್ರಶೇಖರ ಸ್ವಾಮಿ, ಆದಿಚುಂಚನಗಿರಿ ಶಾಖಾಮಠ, ಕೆಂಗೇರಿ

click me!