ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿರುವುದು ಮನೆ ಮುರುಕ ನಿರ್ಧಾರ: ಎಂಎಲ್‌ಸಿ ರವಿಕುಮಾರ್

By Sathish Kumar KH  |  First Published Jun 27, 2024, 1:05 PM IST

ಹಾಲಿನ ದರವನ್ನು ಹೆಚ್ಚಳ ಮಾಡಿರುವುದು ಮನೆ ಮುರುಕ ನಿರ್ಧಾರ.ಹುಚ್ ಮುಂಡೆ ಮದುವೆಲಿ ಉಂಡೋನೆ ಜಾಣ ಎನ್ನುವಂತಹ ಸರ್ಕಾರವಾಗಿದೆ ಎಂದು ಎಂಎಲ್‌ಸಿ ರವಿಕುಮಾರ್ ಆರೋಪಿಸಿದ್ದಾರೆ.


ಬೆಂಗಳೂರು (ಜೂ.27): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡಿದೆ. ಅದರಲ್ಲಿಯೂ 50 ಮಿ.ಲೀ ಹಾಲನ್ನು ಕೊಟ್ಟಂತೆ ಮಾಡಿ ಪ್ರತಿ ಹಾಲಿನ ಪ್ಯಾಕೆಟ್ ಮೇಲೆ 2.10 ರೂ. ಹೆಚ್ಚಳ ಮಾಡಿರುವುದು ಮನೆ ಮುರುಕ ನಿರ್ಧಾರವಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಸುಗಳನ್ನು ಕಟ್ಟಿ ಅಲ್ಲಿಯೇ ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ಕೊಡುವ ಮೂಲಕ ಹಾಲಿನ ದರ ತಗ್ಗಿಸಲು ಪ್ರತಿಭಟನೆ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚು ಮಾಡಿರುವುದು ಮನೆ‌ ಮುರುಕ ನಿರ್ಧಾರ. ಕೇವಲ 50 ಮಿಲಿ ಲಟರ್ ಹೆಚ್ಚು ಹಾಲು ಬೇಕು ಎಂದು ಯಾರು ಕೇಳಿದ್ದರು? ಜನರು ಕೇಳಿದ್ದನ್ನು ಮೊದಲು ಕೊಡಿ. ರಾಜ್ಯ ಸರ್ಕಾರಕ್ಕೆ ಜ್ವರ ಬಂದರೆ, ರಾಜ್ಯದ ಜನತೆಗೆ ಬರೆ ಹಾಕ್ತಿದೆ. ಇದು ಬರೆ ಹಾಕುವ ಸರ್ಕಾರ. ಜನರ ವಿರೋಧಿ ಸರ್ಕಾರ. ನೀವು ಹಾಲಿನ ಬೆಲೆ ಹೆಚ್ಚಳ‌ ಮಾಡಿದ್ದಕ್ಕೆ ಕಾಫಿ, ಟೀ ಬೆಲೆಗಳು ಕೂಡ ಹೆಚ್ಚಳ ಆಗತ್ತದೆ. ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದರು.

Latest Videos

undefined

ಚನ್ನಪಟ್ಟಣ ಉಪ ಚುನಾವಣೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಸ್ಪರ್ಧೆ?

ಮತ್ತೊಂದೆಡೆ ಡಿಸೇಲ್, ಪೆಟ್ರೋಲ್ ದರವನ್ನೂ ಹೆಚ್ಚಳ ಮಾಡಿದ್ದಾರೆ. ಇದರಿಂದ ಸರಕು ಸಾಗಣೆ ಬೆಲೆ ಹೆಚ್ಚಳವಾಗಿದೆ. ಸರ್ಕಾರ ರಾಜ್ಯದ ಜನ ಜೀವನದ ಮೇಲೆ ಚೆಲ್ಲಾಟ ಆಡುತ್ತಿದೆ. ನೀವು ಬೆಲೆ ನಿಯಂತ್ರಣ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದು ನೀವು ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಬೆಲೆಗಳನ್ನು ಇಳಿಕೆ ಮಾಡಿ. ಇನ್ನು ಸಿದ್ದರಾಮಯ್ಯ ದೀನ ದಲಿತರ ಪರ ಎನ್ನುತ್ತಿದ್ದರು. ಆದರೆ, ಈ ಸರ್ಕಾರ ಧೀನ ದಲಿತರ ಪರ ಇಲ್ಲ. ಈ ಸರ್ಕಾರ ವಿದ್ಯಾರ್ಥಿಗಳು, ರೈತರ ಖಾತೆಗೆ ಹಣ ಹಾಕಲ್ಲ. ಯಾರ ಖಾತೆಗೆ ಹಾಕಿದ್ರೆ ತನಗೆ ವಾಪಸ್ ಕೊಡುತ್ತಾರೆ, ಅಂತವರ ಖಾತೆಗೆ ಹಣ ಹಾಕುತ್ತಾರೆ. ರಾಜ್ಯದಲ್ಲಿ ಡೆಂಗ್ಯೂ ಮನೆ ಮನೆಗೆ ಹಬ್ಬಿದೆ. ಕೇಳೊದಕ್ಕೆ ಡಾಕ್ಟರ್ ಇಲ್ಲ. ಚಿಕಿತ್ಸೆ ಪಡೆದುಕೊಂಡರೆ ಔಷದ ಇಲ್ಲ. ವೈದ್ಯಕೀಯ ಸಚಿವರು ನಾಪತ್ತೆ ಆಗಿದ್ದಾರೆ ಎಂದು ಆರೋಪ ಮಾಡಿದರು.

ಹಾಲಿನ ದರ ಹೆಚ್ಚಳವನ್ನು ವಿರೋಧಿಸಿ ಜೂ.29ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗೆ ಹಸು ಕಟ್ಟುತ್ತೇವೆ. ಅಲ್ಲೇ ಹಾಲು ಕರೆದು, ಜಿಲ್ಲಾಧಿಕಾರಿಗೆ ಕೊಡುತ್ತೇವೆ. ಈ ಮೂಲಕ ಹಾಲಿನ ದರ ಕಡಿಮೆ ಮಾಡಿ ಎಂದು ವಿನೂತನ ಹೋರಾಟ ಮಾಡುತ್ತೇವೆ. ರಾಜ್ಯಾದ್ಯಂತ ಈ ಹೋರಾಟ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಹೋರಾಟ ಮಾಡಲಾಗುವುದು. ಜೊತೆಗೆ, ನಾಳೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ವಿರೋಧಿಸಿ ಹೋರಾಟ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾಹಿತಿ ನೀಡಿದರು.

ಕೆಂಪೇಗೌಡರ ಜಯಂತಿ ವಿಚಾರದಲ್ಲಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಒಕ್ಕಲಿಗರ ಸಂಘ

ರಾಜ್ಯ ಸರ್ಕಾರಕ್ಕೆ ಹಸು,ಕರುಗಳಿಗೆ ಮೇವು ಕೊಡಲು ಆಗ್ತಿಲ್ಲ. ಖಸಾಯಿಖಾನೆಗೆ ಕಳುಹಿಸಲು ಉತ್ತೇಜನ ನೀಡುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಭೀಕರ ಬರಗಾಲ ಆವರಿಸಿದ್ದರೂ ಈವರೆಗೂ ಒಂದೇ ಒಂದು ಗೋಶಾಲೆ ತೆರೆದಿಲ್ಲ. ಬೇಕಿದ್ದರೆ ಖಸಾಯಿಕಾನೆ ತೆರೆದಿರಬಹುದು. ಅದರ ಸಂಖ್ಯೆಯೂ ಹೆಚ್ಚಳ ಆಗಿರಬಹುದು. ರೈತರಿಗೆ 5,000 ರೂ. ಕೊಡ್ತೇನೆ ಎಂದಿದ್ದರು ಕೊಟ್ಟಿಲ್ಲ. ಮಂತ್ರಿಗಳು ಬೆಲೆ ಹೆಚ್ಚಳ ಮಾಡುವ ಸ್ಪರ್ಧೆಯಲ್ಲಿ ಇದ್ದಾರೆ ಎಂದು ಕಿಡಿಕಾರಿದರು.

ಹುಚ್ ಮುಂಡೆ ಮದುವೆಲಿ ಉಂಡವನ ಜಾಣ ಎನ್ನುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಒಂದು ವರ್ಷದಲ್ಲೇ ಕೆಟ್ಟ ಹೆಸರು ತೆಗೆದುಕೊಂಡಿದೆ. ನಾಗೇಂದ್ರನ ತಲೆ ದಂಡ ಆಗಿದೆ. ಆದರೆ, ತಲೆ ದಂಡ ಆಗಿಬೇಕಿದದ್ದು ಸಿಎಂ ಸಿದ್ದರಾಮಯ್ಯ ಅವರದ್ದು. ನಿನ್ನೆ ಒಬ್ಬ ಕೋರ್ಟ್ ನ್ಯಾಯಾಧೀಶರ ಮುಂದೆಯೇ ತನಗೆ ಜೀವ ಬೆದರಿಕೆ ಇದೆ ಎಂದಿದ್ದಾರೆ. ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ಎಂದು ಎಂಎಲ್‌ಸಿ ರವಿಕುಮಾರ್ ಮಾಹಿತಿ ನೀಡಿದರು.

click me!