ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ ಬೆಂಕಿ ಚೆಂಡು, ಯಾರಿವರು ಮಾಧವಿ ಲತಾ ಕೊಂಪೆಲ್ಲಾ?

By Santosh NaikFirst Published Mar 2, 2024, 10:24 PM IST
Highlights

kompella madhavi latha Will Fight Loksabha Election ಮಾಧವಿ ಲತಾ ಕೊಂಪೆಲ್ಲಾ ಎನ್ನುವ ಹೆಸರಿನ ಬಗ್ಗೆ ಕರ್ನಾಟಕಕ್ಕೆ ಅಷ್ಟಾಗಿ ತಿಳಿದಿರುವ ಸಾಧ್ಯತೆ ಕಡಿಮೆ. ಹೈದರಾಬಾದ್‌ನಲ್ಲಿ ಅಸಾದುದ್ದೀನ್‌ ಓವೈಸಿಯ ಪ್ರಾಬಲ್ಯವನ್ನು ಕಡಿಮೆ ಮಾಡುವ ಸಲುವಾಗಿ ಬಿಜೆಪಿ ಈ ಬಾರಿ ಮಾಧವಿ ಲತಾ ಕೊಂಪೆಲ್ಲಾಗೆ ಟಿಕೆಟ್‌ ನೀಡಿದೆ.

ಬೆಂಗಳೂರು (ಮಾ.2): ಮಕ್ಕಳನ್ನು ಶಾಲೆಗೆ ಕಳಿಸದೆಯೇ ಅವರನ್ನು ಐಐಟಿಯನ್‌ ಮಾಡಲು ಸಾಧ್ಯವೇ? ಪ್ರಸ್ತುತ ಅಂಥದ್ದೊಂದು ಯೋಚನೆಯೇ ಯಾರಿಗೂ ಬರಲು ಸಾಧ್ಯವಿಲ್ಲ. ಆದರೆ, ಇದನ್ನು ಮಾಡಿ ತೋರಿಸಿದಾಕೆ ಮಾಧವಿ ಲತಾ ಕೊಂಪೆಲ್ಲಾ.  ಹೈದರಾಬಾದ್‌ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಂದರೆ ಎಐಎಂಐಎಂನ ಅಸಾದುದ್ದೀನ್‌ ಓವೈಸಿಯನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಣಿಸುವ ನಿಟ್ಟಿನಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಬೆಂಕಿಚೆಂಡು ಮಾಧವಿ ಲತಾ ಕೊಂಪೆಲ್ಲಾ. ಹಾಗಂತ ಮಾಧವಿ ಲತಾ ಸಂನ್ಯಾಸಿಯಲ್ಲ. ಹೈದರಾಬಾದ್‌ನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ವಿರಿಂಚಿ ಹಾಸ್ಪಿಟಲ್ಸ್‌ನ ಚೇರ್ಮನ್‌ ಈಕೆ. ಇವರ ಜೀವನವನ್ನು ನೋಡುತ್ತಾ ಅಥವಾ ಓದುತ್ತಾ ಹೋದರೆ, ಅದೆಲ್ಲಿಂದಲೋ ಒಂದು ಸ್ಫೂರ್ತಿ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮೂಡದೇ ಇರೋದಿಲ್ಲ. ಮಾಧವಿ ಲತಾ ಅವರಿಗೆ ಮೂರು ಜನ ಮಕ್ಕಳು, ಈ ಮೂರೂ ಮಕ್ಕಳನ್ನು ಅವರು ಶಾಲೆಗೆ ಕಳಿಸಿಲ್ಲ. ಎಲ್ಲರಿಗೂ ಮಾಡಿಸಿದ್ದು ಹೋಮ್‌ ಸ್ಕೂಲಿಂಗ್‌. ಅಂದರೆ ಮನೆಯಲ್ಲಿಯೇ ಕಲಿಕೆ. ಈ ಪೈಕಿ ಇಬ್ಬರು ಮಕ್ಕಳು ಇಂದು ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮೂರನೇ ಮಗು 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದೆ.

ಹಳೇ ಹೈದರಾಬಾದ್‌ನಲ್ಲಿ ಎಲ್ಲಾ ಹಿಂದುಗಳನ್ನು ಹಿಂದುತ್ವದ ಬಂಧದಲ್ಲಿ ಒಟ್ಟುಗೂಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವುದಾಗಿ ಮಾಧವಿ ಲತಾ ಹೇಳಿರುವ ವಿಡಿಯೋ, ಲೋಕಸಭಾ ಟಿಕೆಟ್‌ ದೊರೆತ ಸಂದರ್ಭದಲ್ಲಿ ವೈರಲ್‌ ಆಗುತ್ತಿದೆ. ಹೈದರಾಬಾದ್‌ನಲ್ಲಿ ಎಲ್ಲಾ ಹಿಂದೂಗಳಲ್ಲಿ ಐಕ್ಯತೆಯನ್ನು ಬೆಳೆಸುವುದು ನನ್ನ ಕನಸು ಎಂದಿದ್ದು, ಆ ಮೂಲಕ ಓವೈಸಿ ಅಬ್ಬರವನ್ನು ಕಟ್ಟುಹಾಕುವ ಇರಾದೆ ಹೊಂದಿದ್ದಾರೆ.

ಕೋಟಿ ಮಹಿಳಾ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ ಮಾಡಿರುವ ಮಾಧವಿ ಲತಾ ತಮ್ಮ ಮಕ್ಕಳಿಗೆ 10 ವರ್ಷವಾಗುವವರೆಗೂ ಅವರಿಗೆ ಪುಸ್ತಕಗಳನ್ನೇ ನೀಡಿರಲಿಲ್ಲ. 'ಬಹುಶಃ 9 ಅಥವಾ 10ನೇ ವರ್ಷ ಇರಬಹುದು. ಅಲ್ಲಿಯವರೆಗೂ ನನ್ನ ಮಕ್ಕಳಿಗೆ ನಾನು ಪುಸ್ತಕವನ್ನೇ ನೀಡಿರಲಿಲ್ಲ. ಮೂಲಗಣಿತ, ವರ್ಣಮಾಲೆಯನ್ನೇ ಅವರಿಗೆ ಕಲಿಸಲು ಪ್ರಯತ್ನಿಸಿದೆ. ಒಂದೇ ಒಂದು ದಿನ ನಾನು ಮಕ್ಕಳಿಗೆ ಹೊಡೆದಿಲ್ಲ. ದನಿಏರಿಸಿ ಮಾತನಾಡಿಲ್ಲ. ಅವರಿಗೆ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯ ಸಾರವನ್ನು ತಿಳಿಸುತ್ತಿದ್ದೆ. ಪಂಚತಂತ್ರದ ಕಥೆಗಳನ್ನು ಹೇಳುತ್ತಿದ್ದೆ. ಪ್ರಾಸಬದ್ಧ ಹಾಡುಗಳನ್ನು ಹಾಡಿ, ಮಗ್ಗಿಯನ್ನು ಅಭ್ಯಾಸ ಮಾಡಿಸುತ್ತಿದೆ. ಪ್ರಶ್ನೆ ಮಾಡುವ ಅಭ್ಯಾಸವನ್ನು ಬೆಳೆಸಿದ್ದೆ. ನಾನು ತಪ್ಪಿದ್ದಲ್ಲಿ ತಿಳಿಸುವಂತೆ ಹೇಳುತ್ತಿದ್ದೆ. ಇವೆಲ್ಲದರೊಂದಿಗೆ ಅವರಿಗೆ ದೈಹಿಕ ಚಟುವಟಿಕೆಯನ್ನು ನೀಡುತ್ತಿದ್ದೆ' ಎಂದು ಮಾಧವಿ ಲತಾ ತಮ್ಮ ಹೋಮ್‌ಸ್ಕೂಲಿಂಗ್‌ ಬಗ್ಗೆ ಹೇಳಿಕೊಂಡಿದ್ದಾರೆ.

ಮಕ್ಕಳಿಗೆ ಮನೆಶಿಕ್ಷಣದ ಬಗ್ಗೆ ಯೋಚನೆ ಬಂದಿದ್ದರ ಬಗ್ಗೆಯೂ ಅವರು ಮಾತನಾಡಿದ್ದಾರೆ "ನನ್ನ ಪತಿ ವಿಶ್ವನಾಥ್ (ಸಂಸ್ಥಾಪಕ ಮತ್ತು ಅಧ್ಯಕ್ಷ ಎಮೆರಿಟಸ್, ವಿರಿಂಚಿ) ಮತ್ತು ನಾನು ಮಕ್ಕಳನ್ನು ಹೃದಯದಿಂದ ಪ್ರೀತಿಸುತ್ತೇವೆ ಮತ್ತು ಸಾಕಷ್ಟು ಅನಾಥಾಶ್ರಮಗಳಿಗೆ ದಾನ ಮಾಡುತ್ತೇವೆ. ನನ್ನ ಹಿರಿಯ ಮಗುವಿಗೆ ಸುಮಾರು 3 ವರ್ಷ ವಯಸ್ಸಾಗಿದ್ದಾಗ, ನಾವು ಅವಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಿದೆವು ಆದರೆ ಅವಳು ಎಂದಿಗೂ ಇದನ್ನು ಇಷ್ಟಪಡಲಿಲ್ಲ. ಅವಳು ನನ್ನ ಸುತ್ತಲೂ ಇರುವುದನ್ನು ಇಷ್ಟಪಟ್ಟಳು. ಒಬ್ಬ ಮಾಜಿ ಶಿಕ್ಷಕಿಯಾಗಿ, ಆಕೆಯಲ್ಲಿ ಆಗುತ್ತಿರುವುದೇನು? ಶಾಲೆಗೆ ಹೋದಾಗ ಅಳುತ್ತಾ ವಾಪಾಸ್‌ ಬರುವುದೇಕೆ? ಎಂದು ಅರ್ಥ ಮಾಡಿಕೊಂಡ ಬಳಿಕ ಹೋಮ್‌ಸ್ಕೂಲಿಂಗ್‌ ಆರಂಭಿಸಿದೆ ಎನ್ನುತ್ತಾರೆ.

ಹಾಗಂತ ಹೋಮ್‌ಸ್ಕೂಲಿಂಗ್‌ ವಿಚಾರಕ್ಕಾಗಿ ಕುಟುಂಬ ಹಾಗೂ ಸಮಾಜದಿಂದಲೇ ಮಾಧವಿ ಲತಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಹಿರಿಯ ಪುತ್ರಿ ಬಹಳ ದೀರ್ಘ ಕಾಲದವರೆಗೂ ಇಂಗ್ಲೀಷ್‌ನಲ್ಲಿ ಸಂವಹನ ಮಾಡಲು ಬರುತ್ತಿರಲಿಲ್ಲ. ಆದರೆ, ಇಂದು ಆಕೆ ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದಕ್ಕೆ ಸಂಭ್ರಮ ಪಟ್ಟಿದ್ದಾರೆ. ಪಾಶ್ಚಾತ್ಯ ಕ್ಲಾಸಿಕಲ್‌ ಪಿಯಾನೂ ಕೂಡ ನುಡಿಸುವ ಆಕೆ, ಇಲ್ಲಿಯವರೆಗೂ 20 ಗೀತೆಗಳನ್ನು ಸಂಯೋಜನೆ ಮಾಡಿದ್ದು, ಇಂಗ್ಲೀಷ್‌ನಲ್ಲಿ 750 ಹೆಚ್ಚಿನ ಕವಿತೆ ಬರೆದಿದ್ದಾರೆ.

ಹೆಂಡ್ತಿ ಕೋಪಗೊಂಡಾಗ ಏನು ಮಾಡಬೇಕು? ಪುರುಷರಿಗೆ AIMIM ನಾಯಕ ಅಸಾದುದ್ದೀನ್ ಒವೈಸಿ ಟಿಪ್ಸ್!

ಮಾಧವಿ ಲತಾ ಅವರ ಹಿರಿಯ ಪುತ್ರಿ 19 ವರ್ಷದ ಲೋಪಮುದ್ರಾ ಐಐಟಿ ಮದ್ರಾಸ್‌ನಲ್ಲಿ ಪ್ರಸ್ತುತ ಬಿಟೆಕ್‌ ವಿದ್ಯಾಭ್ಯಾಸ ಮಾಡುತ್ತಿದ್ದರೆ, 16 ವರ್ಷದ ಪುತ್ರ ರಾಮಕೃಷ್ಣ ಪರಮಹಂಸ, ಇದೇ ಐಐಟಿಯಲ್ಲಿ ಮೊದಲ ವರ್ಷದ ಬಿಟೆಕ್‌ ಪದವಿ ಓದುತ್ತಿದ್ದಾರೆ. ಇನ್ನು ಕಿರಿಯ ಪುತ್ರಿ ಮೋಧಿನಿ ಕೂಡ ಹಿರಿಯವರ ದಾರಿಯಲ್ಲಿಯೇ ಇದ್ದು, ಪ್ರಸ್ತುತ 11ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಹೈದರಾಬಾದ್‌ನಲ್ಲಿ ಹಿಂದುಳಿದವರಿಗೆ ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯ ಕಾರ್ಯಕ್ರಮಗಳನ್ನು ಒದಗಿಸುವ ಲಾಭರಹಿತ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇನ್ನು ಮಾಧವಿ ಲತಾ ಎನ್‌ಸಿಸಿ ಕೆಡೆಟ್‌ ಆಗಿದ್ದವವರು. ಭರತನಾಟ್ಯ ಪ್ರವೀಣೆಯಾಗಿರುವ ಈಕೆ 100ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

'ಮುಸ್ಲಿಮರ ಘನತೆಯನ್ನು ಕಸಿಯುವುದು ಮಾತ್ರವೇ ಈಗಿನ ಗುರಿ..' ಮಥುರಾ ಸರ್ವೇಗೆ ಕಿಡಿಕಾರಿದ ಓವೈಸಿ!

Meet the BJP candidate from Hyderabad Madhavi Latha Kompella who will take on Owaisi 🔥

A MA in Political Science she is the Chairperson of Virinchi Hospitals in Hyderabad.

She has home schooled her three children who are now IITians . She taught them everything from Maths,… pic.twitter.com/zbKVj65ojP

— Viक़as (@VlKAS_PR0NAM0)
click me!