
ಪಶ್ಚಿಮ ಬಂಗಾಳದ ಚುನಾವಣೆ ಇದೇ ತಿಂಗಳು 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಇದಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ದೀದಿ ಎಂದೇ ಫೇಮಸ್ ಆಗಿರೋ ಮಮತಾ ಬ್ಯಾನರ್ಜಿ ಅವರು ಸತತ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮೊದಲು ಮೇ 20, 2011 ರಂದು ಅಧಿಕಾರ ವಹಿಸಿಕೊಂಡರು ಮತ್ತು ನಂತರ 2016 ಮತ್ತು 2021 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಮುನ್ನಡೆಸಿದರು. ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ. ಆದರೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ.
ದೀದಿಯ ಕೋಟೆಯನ್ನು ಭೇದಿಸುವಲ್ಲಿ ಮೋದಿ ಸಕ್ಸಸ್ ಆಗ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಏಕೆಂದರೆ, ಪಶ್ಚಿಮ ಬಂಗಾಳ ಕೆಲವು ವರ್ಷಗಳಿಂದ ಇನ್ನಿಲ್ಲದಂತೆ ಹಿಂಸಾಚಾರ ಕಂಡಿದೆ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅಲ್ಲಿದ್ದವರು ಸಹಿಸುತ್ತಿಲ್ಲ. ನುಸುಳುಕೋರರಿಗೆ ಆಶ್ರಯ ನೀಡಿದ್ದ ಮಮತಾ ಬ್ಯಾನರ್ಜಿಗೆ SIR ಶಾಕ್ ಕೊಟ್ಟಿದೆ. ಲಕ್ಷಾಂತರ ಮಂದಿ ನುಸುಳುಕೋರರು ಗಡಿಪಾರಾಗಿದ್ದಾರೆ. ಇವರೆಲ್ಲರೂ ಮಮತಾಗೆ ವೋಟರ್ಸ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಿಸುತ್ತಿದೆ.
ಇದರ ನಡುವೆಯೇ ಮಮತಾ ಬ್ಯಾನರ್ಜಿ ಅವರ ಅಭಿಮಾನಿಯೊಬ್ಬ ರೋಡ್ ಷೋ ವೇಳೆ ಅವರ ಜೀವವನ್ನೇ ಬಾಯಿಗೆ ತಂದುಬಿಟ್ಟಿದ್ದಾನೆ. ಅವನು ಮಾಡಿದ ಕೃತ್ಯಕ್ಕೆ ದೀದಿ ಹೃದಯ ಅರೆಕ್ಷಣ ಸ್ಟಾಪ್ ಆಗಿಹೋಯಿತು. ಇದರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮಮತಾ ಅವರು ಚುನಾವಣೆ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಆಗ ಇದ್ದಕ್ಕಿಂತೆಯೇ ಅವರ ಅಭಿಮಾನಿಯೊಬ್ಬ ಮಿಂಚಿನ ವೇಗದಲ್ಲಿ ಅವರ ಕಾಲಿಗೆ ಬೀಳಲು ಬಂದಿದ್ದಾನೆ. ಮಮತಾ ಬಾಡಿಗಾರ್ಡ್ ಆತನನ್ನು ಆಚೆಗೆ ಅಟ್ಟುವಷ್ಟರಲ್ಲಿಯೇ ಅದೆಲ್ಲಿಂದಲೋ ಜಿಗಿದು ಬಂದಿದ್ದಾನೆ ಆ ಅಭಿಮಾನಿ. ಆತ ಮಾಡಿದ ರೀತಿ ನೋಡಿ ಮಮತಾ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ. ಹೃದಯದ ಮೇಲೆ ಕೈಯಿಟ್ಟು ಶಾಕ್ ಆಗಿ ಹೋಗಿದ್ದಾರೆ.
ಇದಾಗಲೇ ಕೆಲವು ನಾಯಕರನ್ನು ಇದೇ ರೀತಿ ಬಾಂಬ್ ಹಾಕಿ ಸಾಯಿಸಿದ್ದು ಬಹುಶಃ ದೀದಿಗೆ ನೆನಪಾಯಿತೋ ಏನೊ. ರಾಜೀವ್ಗಾಂಧಿ ಅವರಿಗೆ ಹಾರ ಹಾಕುವ ಸಮಯದಲ್ಲಿ, ಇಂದಿರಾಗಾಂಧಿ ಅವರಿಗೆ ಖುದ್ದು ಅವರ ಅಂಗರಕ್ಷಕನೇ, ಗಾಂಧೀಜಿಗೆ ಇದೇ ರೀತಿ ಎದುರಿಗಿನಿಂದ ನಾಥೂರಾಮ್ ಗೋಡ್ಸೆ ಸೇರಿದಂತೆ ಹಲವು ನಾಯಕರಿಗೆ ಇದೇ ರೀತಿ ಅಚಾನಕ್ ಆಗಿ ಸಾಯಿಸಲಾಗಿತ್ತು. ಆದ್ದರಿಂದ ರಾಜಕೀಯ ನಾಯಕರು ಎಷ್ಟು ಮೈಯೆಲ್ಲಾ ಕಣ್ಣಾಗಿ ಇದ್ದರೂ ಕಷ್ಟವೇ. ಮೊನ್ನೆಯಷ್ಟೇ ತಮಿಳುನಾಡಿನಲ್ಲಿ ವಿಜಯ್ ಅವರು ರೋಡ್ಷೋ ಮಾಡುವಾಗ ಅವರ ಬಳಿ ಬಂದಿದ್ದ ಹೂವಿನ ಚಂಡನ್ನು ಬಾಂಬ್ ಎಂದು ತಿಳಿದು ಬೆಚ್ಚಿಬಿದ್ದಿದ್ದರು. ಇದೇ ರೀತಿ ಈಗಲೂ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.