ನಮ್ಮ ಇಡೀ ಗುಂಪಿಗೆ ಕರೆದರೆ ಮಾತ್ರ ದೆಹಲಿಗೆ ಹೋಗುವೆ. ಕೇವಲ ನನ್ನ ಮಾತ್ರ ಕರೆದು ಒಳಗೆ ಕೂಡಿಸಿ, ನನಗೆ ಆಸೆ ಹಚ್ಚಿ ಪ್ರಧಾನಿ ಮಾಡುತ್ತೇನೆಂದು ಹೇಳಿದರೆ ನಾನು ಕೇಳಲ್ಲ ಎಂದು ಮತ್ತೆ ಗುಡುಗಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ(ನ.30): ಹೈಕಮಾಂಡ್‌ನವರು ನಮ್ಮ ಇಡೀ ಗುಂಪಿಗೆ ಕರೆದರೆ ಮಾತ್ರ ದೆಹಲಿಗೆ ಹೋಗುವೆ ಎಂದು ಪುನರುಚ್ಚರಿಸಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯತ್ನಾಳ್ ಒಬ್ಬನನ್ನೇ ಕರೆದು ಪ್ರಧಾನಿ ಮಾಡುತ್ತೇವೆ ಎಂದರೂ ನಾನು ಕೇಳಲ್ಲ. ನನಗೇನೂ ಪಕ್ಷದ ರಾಜ್ಯಾಧ್ಯಕ್ಷ ನಾಗುವ ಅಥವಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಹುಚ್ಚಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ವಿಜಯೇಂದ್ರ, ಎಂ.ಪಿ.ರೇಣುಕಾಚಾರ್ಯ ವಿರುದ್ಧ ಮತ್ತೆ ಕಿಡಿ ಕಾರಿದರು. ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಪಕ್ಷದ ವರಿಷ್ಠರು ನನ್ನ ವಿರುದ್ದ ಕ್ರಮ ತೆಗೆದುಕೊಳ್ಳುತ್ತಾರೆ ಎಂದರೆ ತೆಗೆದುಕೊಳ್ಳಲಿ, ಅವರಿಗೆ ಅಧಿಕಾರ ಇದೆ ಎಂದರು.
undefined
ಯತ್ನಾಳ್ ವಿರುದ್ಧ ವಿಜಯೇಂದ್ರ ಟೀಂನಿಂದ ದೇಗುಲಯಾತ್ರೆ
ನಮ್ಮ ಇಡೀ ಗುಂಪಿಗೆ ಕರೆದರೆ ಮಾತ್ರ ದೆಹಲಿಗೆ ಹೋಗುವೆ. ಕೇವಲ ನನ್ನ ಮಾತ್ರ ಕರೆದು ಒಳಗೆ ಕೂಡಿಸಿ, ನನಗೆ ಆಸೆ ಹಚ್ಚಿ ಪ್ರಧಾನಿ ಮಾಡುತ್ತೇನೆಂದು ಹೇಳಿದರೆ ನಾನು ಕೇಳಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಗುಡುಗಿದ್ದಾರೆ.
ದೆಹಲಿ ನಾಯಕರ ಬುಲಾವ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ತಂಡ ಹಾಗೂ ಯತ್ನಾಳ ತಂಡ ಮಧ್ಯದ ಹೊಂದಾಣಿಕೆಗಾಗಿ ರಾಜ್ಯ ರಾಜಕಾರಣಕ್ಕೆ ಸೋಮಣ್ಣ ಎಂಟ್ರಿ ಮಾಡಿಸುತ್ತಿರುವ ವಿಚಾರದ ಕುರಿತು ಮಾತನಾಡಿ, ಸೋಮಣ್ಣನನ್ನು ರಾಜ್ಯ ರಾಜಕಾರಣಕ್ಕೆ ಕರೆದುಕೊಂಡು ಬಂದರೆ ನಾವು ಬೇಡ ಎನ್ನುತ್ತೇವಾ? ಸೋಮ್ಮಣ್ಣ ಬಂದರೂ ನಮ್ಮ ಉತ್ತರ ಕರ್ನಾಟಕದವರ ಸಹಾಯ ಬೇಕೇ ಅಲ್ಲವೇ? ವಿಜಯೇಂದ್ರನ ಮೇಲಷ್ಟೇ ಸೋಮಣ್ಣನನ್ನು ರಾಜ್ಯಾಧ್ಯಕ್ಷ ಮಾಡಲಾಗುತ್ತಾ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣರನ್ನು ಸೋಲಿಸಲು ಇದೇ ಅಪ್ಪ ಮಕ್ಕಳು ಎಷ್ಟು ಖರ್ಚು ಮಾಡಿದ್ದಾರೆ? ತುಮಕೂರಿನಲ್ಲಿ ತಮ್ಮನ್ನು ಸೋಲಿಸಲು ವಿಜಯೇಂದ್ರ ಯಡಿಯೂರಪ್ಪ ಎಷ್ಟು ದುಡ್ಡನ್ನು ಕಳಿಸಿದ್ದರು ಎಂದು ಸೋಮಣ್ಣನವರೇ ಹೇಳಿದ್ದಾರೆ. ಒಂದು ವೇಳೆ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದರೆ ವಿಜಯೇಂದ್ರ ಯಡಿಯೂರಪ್ಪ ಪ್ರಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಪ್ರಶ್ನಿಸುವೆ ಎಂದು ಹೇಳಿದರು.
ವಿಜಯೇಂದ್ರ ಒಂದು ತಂಡ ಮಾಡಿದ ಸಮಾವೇಶ ಮಾಡುವ ವಿಚಾರದ ಕುರಿತು ಮಾತನಾಡಿ, ಏನು ಬೇಕಾದರೂ ಮಾಡಲಿ ಅವರ ಅಪ್ಪನಂತಹ ರ್ಯಾಲಿ ಮಾಡುತ್ತೇವೆ ಎಂದರು. ನಾವು ಕೊಟ್ಟ ಭಿಕ್ಷೆಯಿಂದಲೇ ವಿಜಯೇಂದ್ರ ಶಾಸಕರಾಗಿದ್ದು ಎಂಬ ಡಿ. ಕೆ.ಶಿವಕುಮಾರ ಹೇಳಿಕೆ ವಿಚಾರದ ಕುರಿತು ಮಾತನಾಡಿ, ನಿಮಗೇನಾದ್ರೂ ಧಮ್, ಗ ಟ್ಸ್, ನೈತಿಕತೆ ಇದ್ದರೆ ನೀವು ಕೊಟ್ಟ ಭಿಕ್ಷೆಯಿಂದ ನಾನು ಶಾಸಕನಾಗಿಲ್ಲ. ನನ್ನ ಬಳಿ ಧಮ್ ಇದೆ, ನಾನು ರಾಜೀನಾಮೆ ಕೊಟ್ಟು ಮತ್ತೆ ಶಾಸಕನಾಗಿ ಆಯ್ಕೆಯಾಗುತ್ತೇನೆ. ಯಾವ ಕ್ಯಾಂಡಿಡೇಟ್ ಬೇಕಾದರೂ ಹಾಕಿಕೊಳ್ಳಿ ಎಂದು ಆಗಲೇ ವಿಜಯೇಂದ್ರ ಹೇಳಿಕೆ ಕೊಡಬೇಕಾಗಿತ್ತು. ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಕೊಡದ ಕಾರಣ ಧಮ್, ತಾಕತ್ತು, ನೈತಿಕತೆ ಯಾವುದೂ ಇಲ್ಲ...ಇಲ್ಲ...ಇಲ್ಲ.. ಎಂದು ಯತ್ನಾಳ ಲೇವಡಿ ಮಾಡಿದರು.
ಯಾರೇ ರಾಜ್ಯಕ್ಕೆ ಭೇಟಿ ನೀಡಿದರು ನಾನು ಯಾರಿಗೂ ಭೇಟಿಯಾಗಲ್ಲ. ಕೇಂದ್ರ ಸರ್ಕಾರದ ಬಳಿ ಇಂಟೆಲಿಜೆನ್ಸ್ ಇದೆ. ಭ್ರಷ್ಟಾಚಾರ ಯಾರಾರು ಮಾಡಿದ್ದಾರೆ ಯಾರು ಮುಖ್ಯಮಂತ್ರಿಯ ನಕಲಿ ಸಹಿ ಮಾಡಿದ್ದು? ಅವರ ತಂದೆಯನ್ನೇ ಯಾರು ಜೈಲಿಗೆ ಕಳುಹಿಸಿದ್ದು? ಎಂಬೆಲ್ಲ ವಿಚಾರ ಹೈಕಮಾಂಡ್‌ಗೆ ಗೊತ್ತಿದೆ. ವಂತವಾದ, ಭ್ರಷ್ಟಾಚಾರ ರಾಜಕಾರಣವಿರುದ್ಧ ಹೋರಾಟ ಎಂದು ಪ್ರಧಾನಿ ಹೇಳಿದ್ದಾರೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ವಂಶವಾದ ಭ್ರಷ್ಟಾಚಾರದ ವ್ಯಕ್ತಿಯನ್ನು ತಕ್ಷಣವೇ ಕಿತ್ತೊಗೆಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಿಎಸ್‌ವೈ ಪರ ಯತ್ನಾಳ ಬ್ಯಾಟಿಂಗ್:
ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪದ ತನಿಖೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಕುರಿತು ಮಾತನಾಡಿ, ಕಾಂಗ್ರೆಸ್ ಒಂದೂವರೆ ವರ್ಷದ ಬಳಿಕ ದ್ವೇಷದ ರಾಜಕಾರಣ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಇವರು ಮಾಡಿದ್ದು ಏನು? ಸಿದ್ದರಾಮಯ್ಯ ಈಗ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ? ಮುಡಾ ಹಗರಣ ಗಂಭೀರತೆ ತೆಗೆದುಕೊಂಡಿದೆ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಹೈಕೋರ್ಟ್ ನಿಗಾದಲ್ಲಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಇಷ್ಟು ದಿನ ಅವರಿವರು ಹೊಂದಾಣಿಕೆ ಇದ್ದರು. ನಮ್ಮದನ್ನ ನೀವು ಮುಚ್ಚಿಡೋದು ನಿಮ್ಮದನ್ನ ನಾವು ಮುಚ್ಚಿಡೋದು ಎಂಬ ಒಪ್ಪಂದವಿತ್ತು. ಆ ಕರಾರು ಮುರಿದು ಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಯತ್ನಾಳ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ವಿಚಾರಕ್ಕೆ ಉತ್ತರಿಸಲು ನಿರಾಕರಿಸಿದ ಅವರು, ಲಫೂಟ್ ನನ್ ಮಕ್ಕಳ ಯಾವುದೇ ಪ್ರತಿಕ್ರಿಯೆ ಕೇಳಬೇಡಿ. ಒಳ್ಳೆಯ ರಾಜಕಾರಣದ ಬಗ್ಗೆ, ಮಾನ ಮರ್ಯಾದೆ ಇರೋರ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು.
ಬಾಂಗ್ಲಾಗೆ ನೆರವು ಬಂದ್ ಮಾಡಬೇಕು
ಬಾಂಗ್ಲಾದೇಶದಲ್ಲಿ ಇಸ್ಕಾನ್ ಅರ್ಚಕರ ಬಂಧನ ಕುರಿತು ಪ್ರತಿಕ್ರಿಯಿಸಿ, ಬಾಂಗ್ಲಾದಲ್ಲಿ ಬಹಳ ಗಂಭೀರವಾಗುತ್ತಿದೆ. ದೇಶದಲ್ಲಿ ಮಾನವ ಹಕ್ಕು ಆಯೋಗ ಎಂದಿದೆ. ಈಗ ಅವರು ಕತ್ತಿ ಕಾಯುತ್ತಿದ್ದಾರಾ? ವಿಶ್ವದ ಮಾನವ ಹಕ್ಕು, ವಿಶ್ವ ಸಂಸ್ಥೆ ಇದೆ. ಇಂದು ಹಿಂದೂಗಳು, ಅಲ್ಪಸಂಖ್ಯಾತರು.ಕ್ರಿಶ್ಚಿಯನ್ನರ ಮೇಲೆ ಬಾಂಗ್ಲಾದಲ್ಲಿ ದಾಳಿ ಆಗುತ್ತಿದೆ. ಹೀಗಾಗಿ ಬಾಂಗ್ಲಾಕ್ಕೆ ನೀಡುತ್ತಿರುವ ಎಲ್ಲಾ ನೆರವು. ಸಹಾಯವನ್ನು ಭಾರತವು ಬಂದ್ ಮಾಡಬೇಕೆಂದು ಒತ್ತಾಯಿಸಿದರು.
ಮುಸ್ಲಿಮರ ಬಗ್ಗೆ ಮಾತನಾಡಿದ ಒಕ್ಕಲಿಗ ಸಮಾಜದ ಚಂದ್ರನಾಥ ಸ್ವಾಮೀಜಿ ಹೇಳಿಕೆಗೆ ಪ್ರಕರಣ ದಾಖಲು ವಿಚಾರದ ಕುರಿತು ಪ್ರತಿಕ್ರಿಯಿಸಿ, ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದರು. ಇದು ತಪ್ಪು ಎಂದರು. ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನದಲ್ಲಿ ಹಿಂದುಗಳಿಗೆ, ಕ್ರಿಶ್ಚಿಯನ ರಿಗೆ ಮತದಾನ ಮಾಡುವ ಹಕ್ಕಿಲ್ಲ. ನಮ್ಮಲ್ಲಿ ಯಾಕೆ ಎಂದು ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಸ್ವಾಮೀಜಿ ಪರವಾಗಿ ಮಾತನಾಡಿದ್ದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಸ್ ಪಡೆಯಬೇಕು. ಇಲ್ಲವಾದರೆ ಇದನ್ನ ಒಕ್ಕಲಿಗ ಸಮಾಜ ಸರ್ಕಾರವನ್ನು ಕೇಳಬೇಕು? ಬಹಳ ಸ್ವಾಭಿಮಾನಿ ವ್ಯಕ್ತಿ ಇದ್ದಾನಲ್ಲ ಡಿ.ಕೆ.ಶಿವಕುಮಾರ ಈ ಕುರಿತು ಮಾತನಾಡಲಿ ಎಂದು ಆಗ್ರಹಿಸಿದರು.
ಮತ ಬೇಕಾದಾಗ ಚುನಾವಣೆ ವೇಳೆ ಸ್ವಾಮೀಜಿಗೆ ಶಾಲು, ಹಾರ ಹಾಕಿ ಭೇಟಿಯಾ ಗುತ್ತಾರಲ್ಲ ಡಿಕೆಶಿ.ನಮ್ಮ ಸಮಾಜಕ್ಕೆ ಹೇಳಿ ಎಂದು ಇದೇ ಡಿಕೆಶಿ ಹೋಗುತ್ತಾರೆ ಎಂದರು. ಕೂಡಲಸಂಗಮ ಸ್ವಾಮೀಜಿಗೆ ಸರ್ಕಾರಕ್ಕೆ ಮುಜುಗರ ಮಾಡಬೇಡಿ ಎಂದು ತಾಯಿ ಲಕ್ಷ್ಮಿ ಅಕ್ಕ ಹೇಳುತ್ತಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಇದ್ದಾಗಲೂ ನಾನು ಹೋರಾಟ ಮಾಡಿರುವೆ. ನಿಮ್ಮ ಧಮ್ಮು, ತಾಕತ್ತು ಇದ್ದರೆ ನಾಳೆ ವಿಧಾನಸಭಾದಲ್ಲಿ ನಾನು ಮೀಸಲಾತಿ ವಿಚಾರದ ಪ್ರಶ್ನೆ ಮಾಡುತ್ತೇನೆ. ನನ್ನ ಜೊತೆ ಬಾವಿಗಿಳಿದು ಹೋರಾಟ ಮಾಡಿದರೆ ಮುಂದಿನ ಸಾರಿ ನೀವು ವಿಧಾನಸಭೆಯ ಕಟ್ಟೆ ಹತ್ತುತ್ತೀರಿ. ಇಲ್ಲವಾದರೆಮನೆಗೆಹೋಗುತ್ತೀರಿ ಎಂದು ಕುಟುಕಿದರು.
ಶಾಸಕ ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ: ರೇಣುಕಾಚಾರ್ಯ ವಾಗ್ದಾಳಿ
ನಾವು ವಕ್ಫ್ ಹೋರಾಟ ಕೈ ಬಿಡಲ್ಲ
ಮಂಡ್ಯದಲ್ಲಿ ಯತ್ನಾಳ್ ವಿರುದ್ಧ ರಕ್ತ ಪತ್ರ ಚಳುವಳಿ ವಿಚಾರಕ್ಕೆ ಲೇವಡಿ ಮಾಡಿದ ಅವರು, ಮಾಧ್ಯಮದವರು ಆ ಈ ರಕ್ತ ಎಂದು ಸುದ್ದಿ ಮಾಡಿದರು. ಅದು ಯಾವ ರಕ್ತಾ ಇದೆಯೋ ಯಾರಿಗೆ ಗೊತ್ತು ಅದು ಅವರದೇ ರಕ್ತ ಇವೆಯೋ, ಮತ್ಯಾರದೋ ರಕ್ತ ಇದೆಯೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಪಂ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.
ಬೂಕನಕೆರೆಯಲ್ಲಿಯೇ ಒಬ್ಬ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ. ಅವರು ನನಗೆ ರಕ್ತದಲ್ಲಿ ಪತ್ರ ಬರೆಯುತ್ತಾರಂತೆ ಎಂದು ಕುಟುಕಿದರು. ಯಾರು ಏನು ಬೇಕಾದರೂ ಮಾಡಲಿ ನಾನು ಇಲ್ಲ ತಲೆಕೆಡಿಸಿಕೊಳ್ಳಲ್ಲ, ಶಿಫಾರಸು ಮಾಡಲಿ ಕೋರ್ ಕಮಿಟಿಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲಿ. ನಾವು ವಕ್ಫ್ ಹೋರಾಟ ಕೈ ಬಿಡಲ್ಲ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಇಲ್ಲ, ನಾನು ಹೊಂದಾಣಿಕ ಇದ್ದಿದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಮೇಲೆ 42 ಕೇಸ್‌ಗಳನ್ನು ಸಿಎಂ ಹಾಗೂ ಡಿಸಿಎಂ ಹಾಕುತ್ತಿರಲಿಲ್ಲ. ವಿಜಯೇಂದ್ರ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ ಎಂದು ಹೇಳಿದರು.