* ಬಿಜೆಪಿಗೆ ಇಬ್ಬರು ಕಾಂಗ್ರೆಸ್‌ನ ಪ್ರಭಾವಿ ನಾಯಕರ ಸೇರ್ಪಡೆ
* ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್
* ಕಳ್ಳರು ಬಿಜೆಪಿಗೆ ಬರಬೇಕು ಅಂತಾ ಕಾಯುತ್ತಿದ್ದಾರೆ ಎಂದ ಯತ್ನಾಳ್
ವಿಜಯಪುರ, (ಮೇ.26): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು 9 ತಿಂಗಳು ಬಾಕಿ ಇದೆ. ಆಗಲೇ ರಾಜಕೀಯ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಪರ್ವ ಆರಂಭಿಸಿದ್ದಾರೆ.
ಇದರ ಮಧ್ಯೆ ಕಾಂಗ್ರೆಸ್‌ನ ಪ್ರಭಾವಿ ನಾಯಕರಿಬ್ಬರು ಬಿಜೆಪಿಗೆ ಸೇರಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅದಕ್ಕೆ ಪೂರಕವಾದ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಪ್ರಭಾವಿ ಇಬ್ಬರು ನಾಯಕರು ಬಿಜೆಪಿಗೆ ಬರುವುದಕ್ಕೆ ನಾಟಕ ಮಾಡುತ್ತಿದ್ದಾರೆಂದು ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.
ಬಿಜೆಪಿಗೆ ಬರಲು ಬಹಳ ಮಂದಿ ಕಾಯುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಬ್ಬರು ಬಿಜೆಪಿಗೆ ಬರಲು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಲೂಟಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ಇಂತಹ ಕಳ್ಳರು ಬಿಜೆಪಿಗೆ ಬರಬೇಕು ಅಂತಾ ಕಾಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಮಾಲಿ ಮಾಡೋದಕ್ಕೆ ಇದ್ದಾರಾ ಎಂದು ಪ್ರಶ್ನಿಸಿದರು.
ಮೇಲಿನವರು ಇಂಥವರನ್ನೆಲ್ಲ ತೆಗೆದುಕೊಳ್ಳಬಾರದು. ಮೇಲಿನವರು ತೆಗೆದುಕೊಂಡರೆ ಕಾರ್ಯಕರ್ತರು ಮಾಡುತ್ತೇವಾ? ಕಳ್ಳರಿಗೆ ತೆಗೆದುಕೊಂಡರೆ ಸಿದ್ದಾಂತ ಎಲ್ಲಿ ಉಳಿಯುತ್ತದೆ ಎಂದರು.
ಬೆಳಗಾವಿ ಸಾಹುಕಾರ್ ಹೊಸ ಆಟ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್
ಇಂಡಿಯಲ್ಲಿ ಹತ್ತು ಹನ್ನೆರಡು ಕ್ಯಾಂಡಿಡೇಟ್ ಓಡಾಡುತ್ತವೆ. ಅವರಿಗೆ ದುಡಿಸಿದ್ದೀರಿ ನೀವು, ನೋಡಿ ಅವು ಸಾಲಾಗಿ ಕುಳಿತಿರುತ್ತವೆ. ಇಲ್ಲಿ ಬಬಲೇಶ್ವರದಲ್ಲೂ ಕುಳಿತಿರುತ್ತವೆ. ಕಾರಜೋಳ ಅವರು ಒಂದೆರೆಡು ಕ್ಯಾಂಡಿಡೇಟ್ ಹಿಡಿದುಕೊಂಡು ಬಂದಿದ್ದಾರೆ. ಮೊದಲನೇಯದ್ದು ಎರಡು ಕಾಂಡಿಡೇಟ್ ಬೇರೆ ಇವೆ. ಅಣ್ಣ ಕಾಂಗ್ರೆಸ್-ತಮ್ಮ ಬಿಜೆಪಿ. ಒಬ್ಬ ಸೋನಿಯಾಗಾಂಧಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ, ಮತ್ತೊಬ್ಬ ಮೋದಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾರೆ. ಇಂಥವರನ್ನೆಲ್ಲ ತೆಗೆದುಕೊಂಡರೆ ಕಾರ್ಯಕರ್ತರ ಗತಿ ಏನು ಎಂದು ಹೇಳಿದರು.
ಅಂದಹಾಗೆ ಶಾಸಕ ಯತ್ನಾಳ ಹೇಳಿದ ಆ ಇಬ್ಬರು ನಾಯಕರು ಕಾಂಗ್ರೆಸ್‌ನ ಶಾಸಕ ಶಿವಾನಂದ ಪಾಟೀಲ್ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಇವರಿಬ್ಬರು ಬಿಜೆಪಿ ಸೇರ್ಪಡೆಗೆ ಕಾದು ಕುಳಿತ್ತಿದ್ದಾರೆ. ವಿಶ್ಲೇಷಿಸಲಾಗಿದೆ.