ಬೆಳಗಾವಿ ಸಾಹುಕಾರ್ ಹೊಸ ಆಟ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್

By Suvarna News  |  First Published May 26, 2022, 7:54 PM IST

* ಎಚ್ಚೆತ್ತ ಜಾರಕಿಹೊಳಿ ಬ್ರದರ್ಸ್
* ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್ 
* ಪಾರ್ಟಿಯ ಕೆಂಗಣ್ಣಿಗೆ ಗುರಿಯಾಗಿದ್ದ ಜಾರಕಿಹೊಳಿ ಬ್ರದರ್ಸ್


ವರದಿ - ರವಿ ಶಿವರಾಮ್ ,ಏಷ್ಯಾ ನೆಟ್ ಸುವರ್ಣ ನ್ಯೂಸ್...

ಬೆಂಗಳೂರು, (ಮೇ.26):
ಬೆಳಗಾವಿ ರಾಜಕೀಯದ ದಿಕ್ಕು ಬದಲಿಸುವ ಶಕ್ತಿ ಯಾರಿಗಾದರೂ ಇದ್ರೆ ಸದ್ಯಕ್ಕೆ ಅದು ರಮೇಶ್ ಜಾರಕಿಹೊಳಿ ಬ್ರದರ್ಸ್ ಗೆ ಮಾತ್ರ. ತನಗೆ ಬೇಕಾದವರ ಗೆಲ್ಲಿಸುವ, ತನಗೆ ಆಗದವರ ಸೋಲಿಸುವ, ಕಣ್ಣಿಟ್ಟವರ ಮೇಲೆ ಕಾದು ಖೆಡ್ಡಾಕ್ಕೆ ಬೀಳಿಸುವ ಚತುರರು ಜಾರಕಿಹೊಳಿ ಬ್ರದರ್ಸ್. ‌

ಹಾಗೆ ತನ್ನ ಶಕ್ತಿಯಿಂದ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಠಗಿಮಠರನ್ನು ಸೋಲಿಸಿ ತನ್ನ ಸಹೋದರ ಲಖನ್ ಗೆಲ್ಲಿಸಿದವರು ರಮೇಶ್, ಬಾಲಚಂದ್ರ ಬ್ರದರ್ಸ್. ‌ಅವರ ಆ ನಿರ್ಣಯಕ್ಕೆ ಪಾರ್ಟಿ ಹೈಕಮಾಂಡ್ ಗರಂ ಆಗಿತ್ತು. ರಾಜ್ಯ ಬಿಜೆಪಿ ನಾಯಕರು ಏನು ಮಾಡಲಾಗದೇ ಅಸಹಾಯಕರಾಗಿದ್ರು. ಸಚಿವ ಉಮೇಶ್ ಕತ್ತಿ ನೇತೃತ್ವದ ಬೆಳಗಾವಿ ನಿಯೋಗ ಸಿಎಂ ಬೊಮ್ಮಾಯಿಗೆ, ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ರಮೇಶ್ ವಿರುದ್ಧ ದೂರು ನೀಡಿದ್ರು. 

Tap to resize

Latest Videos

ಸಿಡಿ ಕೇಸ್ ಕ್ಲಿಯರ್ ಆಗಿದೆ, ರಮೇಶ್​​ಗೆ ಮತ್ತೆ ಸಚಿವ ಸ್ಥಾನ ಸಿಗಲಿ: ಬಾಲಚಂದ್ರ ಜಾರಕಿಹೊಳಿ

ಆದ್ರೆ ಯಾವ ಕ್ರಮವೂ ಆಗಿರಲಿಲ್ಲ. ಈಗ ಶಿಕ್ಷಕರ ಕ್ಷೇತ್ರದ, ಪದವಿಧರ ಕ್ಷೇತ್ರದ ಚುನಾವಣೆ ಎದುರಾಗಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಅರುಣ್ ಶಹಾಪುರ್, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಹಣಮಂತ ನಿರಾಣಿ ಬಿಜೆಪಿಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳೆ ಯಾರಿಗೆ ಬೆಂಬಲ ನೀಡ್ತಾರೆ ಎನ್ನುವ ಚರ್ಚೆ ನಡೆದಿತ್ತು. ಈ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಸಂಘಟನಾ ಸಭೆ ನಡೆಸಿದ್ದ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ರವಿಕುಮಾರ್ ನೇತೃತ್ವದ ಸಭೆಯಲ್ಲಿ ಲಖನ್ ಬಿಜೆಪಿಗೆ ಬೆಂಬಲ ನೀಡುವ ಘೋಷಣೆ ಮಾಡಿದ್ದಾರೆ.‌

ಲಖನ್ ಬೆಂಬಲದ ಹಿಂದೆ ರಮೇಶ್ ರಾಜಕೀಯ ದಾಳ
ಹೌದು... ಸ್ಥಳಿತ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದ ರಮೇಶ್ ಬಾಲಚಂದ್ರ ಸಹೋದರರು ಪಾರ್ಟಿಯಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ರು. ಈಗ ಈ ಚುನಾವಣೆಯಲ್ಲೂ ಲಖನ್ ಬೆಂಬಲ ಬಿಜೆಪಿಗೆ ಕೊಡಿಸದೆ ಹೋದ್ರೆ, ಪಾರ್ಟಿಯಲ್ಲಿರುವ ತಮ್ಮ ವಿರೋಧಿಗಳು ಮಾತ್ರವಲ್ಲ, ಪಕ್ಷದ ಹೈಕಮಾಂಡ್ ತಮ್ಮ ಮೇಲೆ ಕ್ರಮ ಕೈಗೊಳ್ಳಬಹುದು. ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ನೀಡದೇ ಹೋಗಬಹುದು ಎಂಬ ಕಾರಣಕ್ಕೆ ಎಚ್ಚೆತ್ತು ಕೊಂಡಿದ್ದಾರೆ. 

ಲಖನ್ ಬೆಂಬಲಕ್ಕೆ ಬಿಜೆಪಿ ಹರಸಾಹಸ
ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಗೆ ಲಖನ್ ಬೆಂಬಲ ಬಿಜೆಪಿಗೆ ಕೊಡಿಸುವಂತೆ  ಹೈಕಮಾಂಡ್ ಮಟ್ಟದ ರಾಜ್ಯ ನಾಯಕರೊಬ್ಬರು ರಮೇಶ್ ಗೆ ಸೂಚನೆ ನೀಡಿದ್ರಂತೆ. ಈ ಬಾರಿಯೂ ನೀವು ಬೆಂಬಲ ನೀಡದೇ ಹೋದ್ರೆ ಹೈಕಮಾಂಡ್ ಸೀರಿಯಸ್ ಆಗಿ ಪರಿಗಣಿಸಲಿದೆ ಎಂದು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ರಮೇಶ್ ತನ್ನ ಸಹೋದರ ಲಖನ್ ಬೆಂಬಲವನ್ನು ಬಿಜೆಪಿಗೆ ಕೊಡಿಸಿದ್ದಾರೆ.

click me!