ಬಿಜೆಪಿ ಟಿಕೆಟ್‌ಗಾಗಿ ಸಿಪಿಐ ಹುದ್ದೆಗೆ ರಿಸೈನ್, ಡಿಜಿ ಕಚೇರಿ ಮೆಟ್ಟಿಲುಗಳಿಗೆ ನಮಸ್ಕರಿಸಿ ಕಟ್ಟೀರಿಟ್ಟ ಮಹೇಂದ್ರ ನಾಯಕ್. ನಾಗಠಾಣ ಮತಕ್ಷೇತ್ರಕ್ಕೆ ಎಂಟ್ರಿ, ಬಿಜೆಪಿ ಟಿಕೆಟ್ ಗೆ ಬೇಡಿಕೆ ಇಟ್ಟ ಸಿಪಿಐ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.3): ರಾಜಕೀಯದಲ್ಲಿ ಏನಾದ್ರು ಮಾಡಬೇಕು ಅನ್ನೋ ಉಮೇದಿನ ಆಸೆಗೆ ಎಷ್ಟೋ ಜನರು ತಮ್ಮ ಸರ್ಕಾರಿ ಹುದ್ದೆಗಳಿಗೆ ರಾಜೀನಾಮೆ ನೀಡಿ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಆದ್ರೆ ವಿಜಯಪುರ ಮೂಲದ ಸಿಪಿಐ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬ ಚುನಾವಣೆ ಸ್ಪರ್ಧಿಸಲು ರಾಜೀನಾಮೆ ನೀಡಿ ಡಿಜಿ ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ನಾಗಠಾಣ ಮೂಲದ ಪೊಲೀಸ್ ಇನ್ಸಪೆಕ್ಟರ್ ಮಹೇಂದ್ರ ನಾಯಕ ರಾಜಕಾರಣಕ್ಕೆ ಎಂಟ್ರಿ ಕೊಡಲು ತಮ್ಮ ಸಿಪಿಐ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಭಾನುವಾರ ಅಂಗೀಕಾರ ಆಗ್ತಿದ್ದಂತೆ ಬೆಂಗಳೂರಿನ ಡಿಜಿ ಕಚೇರಿಗೆ ಮಟ್ಟಿಲುಗಳಿಗೆ ನಮಸ್ಕರಿಸಿ ಕಣ್ಣೀರು ಹಾಕಿದ್ದಾರೆ, ಈ ವೇಳೆ ಇಷ್ಟು ದಿನ ಅನ್ನ ಹಾಕಿದ ಇಲಾಖೆಗೆ ಗೌರವ ಸಲ್ಲಿಸಲು ಡಿಜಿ ಕಚೇರಿಗೆ ನಮಸ್ಕರಿಸಿ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು ಡಿಜಿ ಕಚೇರಿ ಎದುರು ಸಿಪಿಐ ಕಣ್ಣೀರು!
ರಾಜಕಾರಣದಲ್ಲಿ ಏನಾದ್ರೂ ಸಾಧನೆ ಮಾಡಬೇಕು, ಎಮ್ ಎಲ್ ಎ, ಎಂ ಪಿ ಹೀಗೆ ರಾಜಕೀಯ ಅಧಿಕಾರಕ್ಕಾಗಿ ಅದೇಷ್ಟೋ ಸರ್ಕಾರಿ ಹುದ್ದೆಗಳಲ್ಲಿದ್ದ ಅಧಿಕಾರಿಗಳು ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಸಹ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೆ ಮಾದರಿಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣ ಮೂಲದ ಪೊಲೀಸ್ ಇನ್ಸಪೆಕ್ಟರ್ ಮಹೇಂದ್ರ ನಾಯಕ್ ತಮ್ಮ ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗ್ತಿದ್ದಾರೆ. ಕಳೆದ 25 ದಿನಗಳ ಹಿಂದೆ ತಮ್ಮ ಸಿಪಿಐ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ರು, ಆದ್ರೆ ನಿನ್ನೆ ರಾಜೀನಾಮೆ ಅಂಗೀಕಾರವಾಗಿದೆ. ತಮ್ಮ ರಾಜೀನಾಮೆ ಅಂಗೀಕಾರವಾಗ್ತಿದ್ದಂತೆ ಮಹೇಂದ್ರ ನಾಯಕ್ ಡಿಜಿ ಕಚೇರಿಯ ಮೆಟ್ಟಿಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಇಷ್ಟು ವರ್ಷ ಅನ್ನ ನೀಡಿದ ಇಲಾಖೆಯನ್ನ ನೆನೆದು ಕಣ್ಣೀರು ಹಾಕಿದ್ದಾರೆ.
ನಾಗಠಾಣ ಕ್ಷೇತ್ರಕ್ಕೆ ಎಂಟ್ರಿ ಕೊಡಲಿರುವ ಸಿಪಿಐ!
ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಪೊಲೀಸ್ ಇಲಾಖೆಯಿಂದ ಕಾಲು ಹೊರಗೆ ಇಟ್ಟಿರುವ ಮಹೇಂದ್ರ ನಾಯಕ್ ನಾಗಠಾಣ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಾಗಠಾಣ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿಂದಲೇ ಸ್ಪರ್ಧಿಸುವ ಉಮೇದಿ ಹೊಂದಿದ್ದಾರೆ. ಅದ್ರಲ್ಲು ವಿದ್ಯಾರ್ಥಿ ದೆಸೆಯಿಂದಲು ಎಬಿವಿಪಿ, ಸಂಘದಲ್ಲಿ ಓಡಾಡಿದ್ದ ಮಹೇಂದ್ರ ನಾಯಕ್ ಬಿಜೆಪಿ ಸೇರ್ಪಡೆಯಾಗ್ತಾರೆ ಎನ್ನಲಾಗ್ತಿದೆ.
ಬಿಜೆಪಿ ಟಿಕೆಟ್ ಕೇಳಿದ ಸಿಪಿಐ ನಾಯಕ್!
ಪೊಲೀಸ್ ಇನ್ಸಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ಬಂದಿರೋ ಮಹೇಂದ್ರ ನಾಯಕ್ ನಾಗಠಾಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬಿಜೆಪಿ ಹೈಕಮಾಂಡ್ ಗೆ ಟಿಕೆಟ್ ಸಹ ಕೇಳಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಪಕ್ಷದ ಹಿರಿಯ ನಾಯಕರನ್ನ, ದೆಹಲಿ ಮಟ್ಟದ ನಾಯಕರನ್ನ ಮಹೇಂದ್ರ ನಾಯಕ್ ಟಚ್ ಮಾಡಿ ಬಂದಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ಟಿಕೆಟ್ ಸಿಗುವ ಭರವಸೆಯಿಂದಲೇ ಸಿಪಿಐ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ ನೀಡಿ ಬಂದಿದ್ದಾರೆ ಎಂದು ಜನ ಮಾತನಾಡಿಕೊಳ್ತಿದ್ದಾರೆ.
2028ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಜನಾರ್ದನ ರೆಡ್ಡಿಯ ಕೆಆರ್‌ಪಿಪಿ!
ಬಿಜೆಪಿಯಿಂದಲೇ ತಾ.ಪಂಗೆ ಗೆದ್ದಿದ್ದ ನಾಯಕ್!
ಈ ಹಿಂದೆ ಅಂದ್ರೆ 2005 ರಲ್ಲಿ ಇದೆ ಮಹೇಂದ್ರ ನಾಯಕ್ ಬಿಜೆಪಿಯಿಂದ ತಾ.ಪಂ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ಬಳಿಕ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಕೂಡ ಆಗಿದ್ರು. ಆಗ 2010ರಲ್ಲಿ ಪಿಎಸೈ ಹುದ್ದೆಗೆ ನಡೆದಿದ್ದ ಪರೀಕ್ಷೆಯಲ್ಲೆ ತೇರ್ಗಡೆಯಾಗಿ ತಾ.ಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಿಎಸೈ ನೌಕರಿಗೆ ಹೋಗಿದ್ರು. ಈಗ ಮತ್ತೆ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಮರಳಿದ್ದಾರೆ.
Breaking: ಆಂತರಿಕ ಸಮಸ್ಯೆ, ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆ!
ಟಿಕೆಟ್ ಸಿಗದಿದ್ರೆ ಬಿಜೆಪಿ ಕಾರ್ಯಕರ್ತನಾಗಿ ಕೆಲಸ!
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಹೇಂದ್ರ ನಾಯಕ್ ಬಿಜೆಪಿ ಟಿಕೆಟ್ ಗಾಗಿ ಈಗಾಗಲೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುವೆ. ಟಿಕೆಟ್ ಸಿಗದೆ ಹೋದರೆ ಸಾಮಾನ್ಯ ಕಾರ್ಯಕರ್ತರನಂತೆ ಕೆಲಸ ಮಾಡಿಕೊಂಡು ಹೋಗುವೆ ಎಂದಿದ್ದಾರೆ. ಈ ನಡುವೆ ಮಹೇಂದ್ರ ನಾಯಕ್ ಗೆ ಬಿಜೆಪಿ ಟಿಕೆಟ್ ಸಿಗುತ್ತಾ ಅನ್ನೋದೆ ಈಗೀರುವ ಪ್ರಶ್ನೆಯಾಗಿದೆ..