
ಚಿಕ್ಕಮಗಳೂರು (ಮಾ.24): ದೇಶದ ಇತ್ತೀಚಿನ ವಿದ್ಯಾಮಾನಗಳನ್ನು ನೋಡಿದರೆ ಈ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆಯಾಗಿ ಕಾಣುತ್ತಿಲ್ಲ. ಬದಲಾಗಿ ಭಾರತದ ಭವಿಷ್ಯ ಬರೆಯುವ ಚುನಾವಣೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮೋರ್ಚಾ ನಗರ ಮಂಡಲ ಏರ್ಪಡಿಸಿದ್ದ ನಮೋ ಯುವ ಚೌಪಾಲ್ 400 ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಹಾಗೂ ನಿಮ್ಮೆಲ್ಲರ ಆಶಯದಂತೆ ಏ.3 ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಬಿಜೆಪಿ ಪಕ್ಷದ ಮೇಲೆ ಮತ್ತು ನನ್ನ ಮೇಲೆ ಇರಲಿ ಎಂದು ವಿನಂತಿಸಿದರು. ಸಮೃದ್ಧ, ಶಕ್ತಿಶಾಲಿ, ಸ್ವಾಭಿಮಾನಿ ಭಾರತವನ್ನು ನಿರ್ಮಾಣ ಮಾಡಬೇಕೆಂದು ಗುರಿ ಹೊಂದಿದ್ದ ನಮ್ಮ ನಾಯಕರು ಅಂದಿ ನಿಂದ ಈವರೆಗೆ ಪ್ರತಿಯೊಂದು ಬಿಜೆಪಿ ಕಾರ್ಯ ಚಟುವಟಿಕೆಗಳು ಸೋತಿರಬಹುದು, ಗೆದ್ದಿರಬಹುದು, ಅಧಿಕಾರ ಇರಲಿ ಇಲ್ಲದಿರಲಿ ರಾಷ್ಟ್ರವ್ಯಾಪಿ ವಿಚಾರವನ್ನುರಾಜಿ ಮಾಡಿಕೊಳ್ಳುವ ಇರಾದೆ ಬಿಜೆಪಿ ಮುಂದೆ ಇರಲಿಲ್ಲ ಎಂದು ತಿಳಿಸಿದರು.
3-6ನೇ ಕ್ಲಾಸ್ ಸಿಬಿಎಸ್‌ಇ ಪಠ್ಯಕ್ರಮ ಬದಲಿಕೆಗೆ ಸಮ್ಮತಿ: ಹೊಸತು ಬರುವ ಶೈಕ್ಷಣಿಕ ವರ್ಷವೇ ಜಾರಿಗೆ ಆದೇಶ
ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ಸದಸ್ಯರನ್ನೊಳಗೊಂಡಿರುವ ಒಂದು ರಾಷ್ಟ್ರೀಯ ಪಕ್ಷ ಇದ್ದರೆ ಅದು ಬಿಜೆಪಿ. ಈ ಎಲ್ಲಾ ದಾಖಲೆಗಳ ವಿದ್ಯಾಮಾನಗಳ ನಡುವೆ ಏ.26 ರಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಒಂದು ದೃಷ್ಟಿಯಲ್ಲಿ ರಾಷ್ಟ್ರ ಭಕ್ತಿ, ರಾಷ್ಟ್ರವನ್ನು ಬೆಂಬಲಿಸುವವರು, ವಿರೋಧಿಸುವವರ ಮಧ್ಯೆ ಸಂಘರ್ಷವಾಗಿ ಮಾರ್ಪಾಡಾ ಗುತ್ತಿದೆ ಎಂದು ಎಚ್ಚರಿಸಿದರು. ಭಾರತದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟು ಒಂದು ಕಾಲದಲ್ಲಿ ಸಂಕೋಲೆಯಲ್ಲಿದ್ದ ಭಾರತವನ್ನು ಆರ್ಥಿಕ ಸುಧಾರಣೆ ಮಾಡಿ ಪ್ರಪಂಚದ ಆರ್ಥಿಕ ಸುಸ್ಥಿತಿಯಲ್ಲಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿಡಲಾಗಿದೆ ಎಂದರು.
ಈ ದೇಶದ ಸಂರಕ್ಷಣೆ, ಭದ್ರತೆ, ಸ್ವಾಭಿಮಾನದ ವಿಚಾರವಾಗಿ ಪ್ರತಿಯೊಬ್ಬ ನಾಗರಿಕನು ಈ ಎಲ್ಲಾ ಕಾರಣಗಳನ್ನು ಗಂಭೀರ ಚಿಂತನೆ ಮಾಡಿ ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ಬಿಜೆಪಿ ಯುವ ಮೊರ್ಚಾ ನಗರಾಧ್ಯಕ್ಷ ಜೀವನ್ ರಂಗನಾಥ್ ಮಾತನಾಡಿ, ಲೋಕಸಭೆಗೆ ಸಧ್ಯದಲ್ಲೇ ಚುನಾವಣೆ ನಡೆಯಲಿದೆ. 18 ವರ್ಷ ತುಂಬಿದ ಯುವ ಮತದಾರರನ್ನು ಜೋಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಪ್ರತಿ ಗ್ರಾ.ಪಂ ಪ್ರತಿ ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಯುವಕರು ಇಂದಿನಿಂದಲೇ ಯುವ ಮತದಾರರನ್ನು ಮತಗಟ್ಟೆಗೆ ಕರೆ ತಂದು ಬಿಜೆಪಿಗೆ ಮತದಾನ ಮಾಡಿಸುವ ಸಂಬಂಧ ಕಾರ್ಯ ಚಟುವಟಿಕೆಗಳನ್ನು ಆರಂಭಿಸಬೇಕು ಎಂದರು.
ಬೇಲಿಯೇ ಎದ್ದು ಹೊಲ ಮೇಯ್ದ ಸ್ಥಿತಿ: ಕೇಜ್ರಿವಾಲ್ ಬಗ್ಗೆಅಣ್ಣಾ ಹಜಾರೆ ವ್ಯಂಗ್ಯ
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಮುಖಂಡರಾದ ಎಚ್.ಸಿ. ಕಲ್ಮರುಡಪ್ಪ, ಕೋಟೆ ರಂಗನಾಥ್, ಅಮೃತೇಶ್, ಸುಜಾತ ಶಿವಕುಮಾರ್, ಕೌಶಿಕ್, ಕುಮಾರ್, ಮಧುಕುಮಾರ್‌ರಾಜ್ ಅರಸ್, ವೆಂಕಟೇಶ್, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಇದ್ದರು. ಈ ಚುನಾವಣೆ ನಮ್ಮ ದೇಶ ಉಳಿಸಿಕೊಳ್ಳುವ ಚುನಾವಣೆಯಾಗಿದೆ. ಮೈ ಮರೆತರೆ ರಾಷ್ಟ್ರ ವಿನಾಶಕ್ಕೆ ದಾರಿಯಾಗುತ್ತದೆ ಎಂದರು ಮಾಜಿ ಸಚಿವ ಸಿ,ಟಿ. ರವಿ ಹೇಳಿದರು. ಚುನಾವಣಾ ಪ್ರಚಾರ ಭಾಷಣ ನೀಡಿ ಪ್ರದಾನಿ ನರೇಂದ್ರ ಮೋದಿಯಾಗಿರುವುದರಿಂದ ಬಾಲ ಬಿಚ್ಚುವವರೆಲ್ಲ ಬಾಲ ಮುದುರಿ ಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿದ್ದವರು ಇಂದು ಬಾವುಟ ಹಿಡಿದು ಭಾರತ್ ಮತಾಕಿ ಜೈ ಅನ್ನುವಂತಹ ವಾತಾವರಣ ನಿರ್ಮಾಣ ಮಾಡಿದ್ದು, ಬಿಜೆಪಿ ಸರ್ಕಾರ ನಮೋ ಪ್ರಧಾನಿಯಾದ ಕಾರಣಕ್ಕೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.