ಚೈತ್ರಾ ಕುಂದಾಪುರ‍‍ಳಿಂದ ಕೋಟಿ ರೂ. ಕೇಳಿದ್ರಾ ಬಿಜೆಪಿ ಸಂಸದ?

By Kannadaprabha News  |  First Published Sep 17, 2023, 11:42 AM IST

ಚೈತ್ರಾ ಕುಂದಾಪುರ ಯಾರು, ಆಕೆಯ ಊರು ಯಾವುದೆಂದೇ ಗೊತ್ತಿಲ್ಲ. ಟಿವಿಯಲ್ಲಿ ನೋಡಿದ ಬಳಿಕ ಆಕೆ ಬಗ್ಗೆ ಗೊತ್ತಾಗಿದೆ. ಹೀಗಾಗಿ ನಾನ್ಯಾಕೆ ಆಕೆ ಬಳಿ ಕೋಟಿ ರುಪಾಯಿ ಕೇಳಲಿ? ಆಕೆ ಬರೇ ಸುಳ್ಳು ಹೇಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಚೈತ್ರಾ ಕುಂದಾಪುರ ಬಳಿ ನಾನು ಹಣ ಕೇಳಿದ್ದೇನೆಂಬ ಸುದ್ದಿ ಹರಿದಾಡುತ್ತಿದೆ ಎಂದು ಕಿಡಿಕಾರಿದ ರಮೇಶ್‌ ಜಿಗಜಿಣಗಿ 


ವಿಜಯಪುರ(ಸೆ.17): ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಅವರಿಂದ ತಾವು ಹಣ ಕೇಳಿರುವ ಆರೋಪಗಳ ಕುರಿತು ಸಂಸದ ರಮೇಶ್ ಜಿಗಜಿಣಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆ ಯಾಕೆಂಬುದೇ ನನಗೆ ಗೊತ್ತಿಲ್ಲ ಎಂದು ಜಿಗಜಿಣಗಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚೈತ್ರಾ ಕುಂದಾಪುರ ಯಾರು, ಆಕೆಯ ಊರು ಯಾವುದೆಂದೇ ಗೊತ್ತಿಲ್ಲ. ಟಿವಿಯಲ್ಲಿ ನೋಡಿದ ಬಳಿಕ ಆಕೆ ಬಗ್ಗೆ ಗೊತ್ತಾಗಿದೆ. ಹೀಗಾಗಿ ನಾನ್ಯಾಕೆ ಆಕೆ ಬಳಿ ಕೋಟಿ ರುಪಾಯಿ ಕೇಳಲಿ? ಆಕೆ ಬರೇ ಸುಳ್ಳು ಹೇಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಚೈತ್ರಾ ಕುಂದಾಪುರ ಬಳಿ ನಾನು ಹಣ ಕೇಳಿದ್ದೇನೆಂಬ ಸುದ್ದಿ ಹರಿದಾಡುತ್ತಿದೆ ಎಂದು ಕಿಡಿಕಾರಿದರು.

Tap to resize

Latest Videos

undefined

ಚೈತ್ರಾ ಕುಂದಾಪುರ ಡೀಲ್‌ ಕೇಸ್‌: ಟಿಕೆಟ್‌ ವಂಚನೆ ಬಹಿರಂಗಕ್ಕೂ ಮೊದಲೇ ದೂರು ನೀಡಿದ್ದ ಹಾಲಶ್ರೀ

ಚೈತ್ರಾ ಕುಂದಾಪುರ ಅವರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೋವೊಂದರಲ್ಲಿ ರಮೇಶ್‌ ಜಿಗಜಿಣಗಿ ಹೆಸರು ಪ್ರಸ್ತಾಪಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಮೇಲೆ ಆರೋಪ ಕೇಳಿಬಂದಿದೆ.

click me!