ಪಿಎಸ್‌ಐ ಅಕ್ರಮ ನೇಮಕಾತಿ: ಬಿಜೆಪಿ ಮುಖಂಡನಿಂದಲೇ ಪ್ರಧಾನಿ ಕಚೇರಿಗೆ ದೂರು

*   ಸಿಐಡಿ ಬೇಡ, ಸಿಬಿಐ ಮೂಲಕ ತನಿಖೆಗೆ ದೂರಿನಲ್ಲಿ ಆಗ್ರಹ
*  ದಿವ್ಯಾ ಹಾಗರಗಿ ಬಂಧನ ಬಳಿಕ ಕುತೂಹಲ ಮೂಡಿಸಿದ ಯತ್ನಾಳ್ ಆಪ್ತನ ದೂರು
*  ಪಿಡಬ್ಲೂಡಿ, ನೀರಾವರಿ ಇಲಾಖೆಗಳ ಭ್ರಷ್ಟಾಚಾರದ ತನಿಖೆಗೂ ಆಗ್ರಹ
 

Complaint to Prime Minister's Office from BJP leader Raghav Annigeri For Recruitment Scams grg

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಏ.30):  ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣ(PSI Recruitment Scam) ಸಾಕಷ್ಟು ಸದ್ದು ಮಾಡ್ತಿದೆ. 18 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಪ್ರಕರಣದ ಕಿಂಗ್‌ಪಿನ್‌ ದಿವ್ಯಾ ಹಾಗರಗಿ(Divya Hagaragi) ಕೊನೆಗೂ ಸಿಐಡಿ(CID) ಬಲೆಗೆ ಬಿದ್ದಿದ್ದಾಳೆ. ಬೆನ್ನಲ್ಲೇ ಸರ್ಕಾರ ಪಿಎಸ್‌ಐ ನೇಮಕಾತಿಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶ ಹೊರಡಿಸಿದೆ. ಆದ್ರೀಗ ಬಿಜೆಪಿ ಸರ್ಕಾರದಲ್ಲೇ ನಡೆದ ಈ ಪಿಎಸ್‌ಐ ಹಗರಣದ ಬಗ್ಗೆ ವಿಜಯಪುರದ ಬಿಜೆಪಿ ಮುಖಂಡನೊಬ್ಬ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ.

Complaint to Prime Minister's Office from BJP leader Raghav Annigeri For Recruitment Scams grg

ಪ್ರಧಾನಿ ಕಚೇರಿಗೆ ಬಿಜೆಪಿ ಯುವ ನಾಯಕನ ದೂರು

ರಾಜ್ಯ ಸರ್ಕಾರ(Government of Karnataka) ಪಿಎಸ್‌ಐ ನೇಮಕಾತಿಯನ್ನೇ ರದ್ದುಗೊಳಿಸಿ ಆದೇಶವನ್ನೇನೋ ನೀಡಿದೆ. ಮರು ಪರೀಕ್ಷೆಗೂ ದಿನಾಂಕ ನಿಗದಿ ಪಡೆಸುವ ಮಾತನ್ನಾಡಿದೆ. ಆದ್ರೆ ಇತ್ತ ಬಿಜೆಪಿಯ ಯುವ ಮುಖಂಡನೊಬ್ಬ ಪ್ರಧಾನಿ ಕಚೇರಿಗೆ(Office of the Prime Minister) ದೂರು ನೀಡಿದ್ದಾನೆ. ಪಿಎಸ್‌ಐ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದಿರುವ ಶಾಸಕ ಯತ್ನಾಳ್‌(Basanagouda Patil Yatnal) ಆಪ್ತ, ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಪಿಎಂ ಕಚೇರಿ ದೂರು ನೀಡಿದ್ದಾನೆ. ಇ-ಮೇಲ್‌(E-Mail) ಮೂಲಕ ದೂರು ಸಲ್ಲಿಕೆ ಮಾಡಿದ್ದು, ದೂರು ರಜಿಸ್ಟರ್‌ ಆಗಿರುವ ಬಗ್ಗೆ ಪ್ರಧಾನಿ ಕಚೇರಿಯಿಂದ ರಿಪ್ಲೈ ಕೂಡ ಬಂದಿದೆ.

PSI Recruitment Scam: ಕಲಬುರಗಿ ಆಯ್ತು, ಯಾದಗಿರಿಯಲ್ಲೂ ಅಕ್ರಮ ನೇಮಕ..?

ಸಿಐಡಿ ಬೇಡವೇ ಬೇಡ, ಸಿಬಿಐ ಮೂಲಕ ತನಿಖೆ ನಡೆಯಲಿ

ರಾಘವ ಅನ್ನಿಗೇರಿ ತಮ್ಮದೆ ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಸರ್ಕಾರ ಸಿಐಡಿಗೆ ಪ್ರಕರಣ ಹಸ್ತಾಂತರಿಸಿ, ತನಿಖೆ ಕೂಡ ಚಾಲ್ತಿಯಲ್ಲಿದೆ. ಆದ್ರೆ ಸಿಐಡಿಯಿಂದ ತನಿಖೆ ಬೇಡ, ಸಿಬಿಐ ಮೂಲಕವೇ ತನಿಖೆ ನಡೆಯಬೇಕು ಎಂದು ರಾಘವ ಅನ್ನೀಗೇರಿ ತಮ್ಮ ದೂರಿನಲ್ಲಿ ಆಗ್ರಹಪೂರ್ವಕ ಬೇಡಿಕೆ ಪ್ರಧಾನಿಗಳ ಎದುರು ಇಟ್ಟಿದ್ದಾರೆ.

ದಿವ್ಯಾ ಹಾಗರಗಿ ಬಂಧನ ಬಳಿಕ ಅಚ್ಚರಿ ಮೂಡಿಸಿದ ದೂರು

ಪ್ರಕರಣದ ಕಿಂಗ್‌ ಫಿನ್‌ ದಿವ್ಯಾ ಹಾಗರಗಿ ಬಂಧನವಾಗಿದೆ. ದಿವ್ಯ ಬಂಧನ ಬಳಿಕ ಬಿಜೆಪಿ ಯುವ ಮುಖಂಡ ರಾಘವ ಅನ್ನಿಗೇರಿ ಪ್ರಧಾನಿ ಕಚೇರಿಗೆ ನೀಡಿದ ದೂರು ಸಾಕಷ್ಟು ಕುತೂಹಲ ಮೂಡಿಸಿದೆ. ಕಿಂಗ್‌ ಪಿನ್‌ ಬಂಧನ ಬಳಿಕವು ಸಿಐಡಿ ತನಿಖೆಯನ್ನ(Iinvestigation) ರದ್ದುಗೊಳಿಸಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ತಮ್ಮ ದೂರಿನಲ್ಲಿ ರಾಘವ ಬರೆದಿದ್ದಾರೆ. ಪರೋಕ್ಷವಾಗಿ ಇಡೀ ಪ್ರಕರಣದ ಹಿಂದೆ ಇರುವ ಕಾಣದ ಕೈ ಬೇರೆಯೆ ಇದೆ ಈ ಬಗ್ಗೆ ಸಿಐಡಿ ಬದಲಿಗೆ ಸಿಬಿಐ ತನಿಖೆ ನಡೆಸಬೇಕು ಅನ್ನೋದು ರಾಘವ ಅನ್ನಿಗೇರಿ ದೂರಿನ ಉದ್ದೇಶವಾಗಿದೆ. ದಿವ್ಯಾಳೇ ಪ್ರಕರಣದ ಕಿಂಗ್‌ ಪಿನ್‌ ಅಲ್ಲ, ಆಕೆಯ ಬೆನ್ನ ಹಿಂದೆಯು ಕಾಣದ ಕೈಗಳಿವೆ ಎನ್ತಿದ್ದಾರೆ ಅನ್ನಿಗೇರಿ.

Complaint to Prime Minister's Office from BJP leader Raghav Annigeri For Recruitment Scams grg

PSI Recruitment Scam: ಅಕ್ರಮಕ್ಕೆ ಕಾರಣವಾಗಿದ್ದ ಆ ಪುಟ್ಟ ವಸ್ತು ಯಾವುದು ಗೊತ್ತಾ?

ಪಿಡಬ್ಲೂಡಿ, ನೀರಾವರಿ ಇಲಾಖೆಗಳ ಭ್ರಷ್ಟಾಚಾರದ ತನಿಖೆಗೂ ಆಗ್ರಹ

ರಾಘವ ಅನ್ನಿಗೇರಿ ಪ್ರಧಾನಿ ಕಚೇರಿಗೆ ನೀಡಿದ ದೂರಿನಲ್ಲಿ ಕೇವಲ ಪಿಎಸ್‌ಐ ಅಕ್ರಮ ನೇಮಕಾತಿ ಬಗ್ಗೆ ಸಿಬಿಐ ತನಿಖೆಯ ಬಗ್ಗೆ ಮಾತ್ರ ಉಲ್ಲೇಖವಿಲ್ಲ, ಜೊತೆ ಜೊತೆಗೆ ರಾಜ್ಯದಲ್ಲಿ ನಡೆದ ಲೋಕೋಪಯೋಗಿ ಇಲಾಖೆ(PWD), ನೀರಾವರಿ ಇಲಾಖೆಯ ಭ್ರಷ್ಟಾಚಾರದ(Corruption) ಬಗ್ಗೆಯೂ ತನಿಖೆ ನಡೆಯಬೇಕು. ಹಿಂದೆ ನಡೆದ ಎಸ್‌.ಡಿ.ಎ, ಎಫ್‌ಡಿಎ(FDA) ನೇಮಕಾತಿಯಲ್ಲು ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಣ ಪಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹಿಂದಿನ ನೇಮಕಾತಿಯ ಎಲ್ಲ ದಾಖಲಾತಿಗಳನ್ನ ಪ್ರಧಾನಿಗಳು ಸಂಗ್ರಹಿಸಿಕೊಂಡು ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
 

Latest Videos
Follow Us:
Download App:
  • android
  • ios