ಇಸ್ರೇಲ್ ಮೇಲೆ ಹಮಾಸ್ ಉಗ್ರರು ಯುದ್ಧ ಸಾರಿದ್ದು, ಆ ದೇಶದ ಜನತೆ ಉಗ್ರರ ಅಟ್ಟಹಾಸದಿಂದ ನಲುಗಿ ಹೋಗಿದ್ದಾರೆ. ಈ ಹಿಂದೆ ಭಾರತವೂ ಸಹ ಉಗ್ರವಾದದಿಂದ ಸಾವಿರಾರು ಸಾವು ನೋವು ಕಂಡಿದೆ. ಹೀಗಾಗಿ ಉಗ್ರವಾದವನ್ನು ಭಾರತ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ: ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ)
ತಾಳಿಕೋಟೆ(ಅ.20): ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರವಾದದ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿದ್ದು, ಉಗ್ರರ ದಾಳಿಯ ವಿಚಾರವಾಗಿ ಇಸ್ರೇಲ್ ಪರ ನಿಲ್ಲುವುದಾಗಿ ಹೇಳಿಕೆ ನೀಡಿದರೆ ದೇಶವನ್ನು 60 ವರ್ಷಗಳ ಕಾಲ ಆಳ್ವಿಕೆ ಮಾಡಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಬರದಲ್ಲಿ ಪ್ಯಾಲಿಸ್ತೇನ್ ಪರ ನಿಲ್ಲುವುದಾಗಿ ಹೇಳುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಪ್ರಶ್ನಿಸಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್ ಮೇಲೆ ಹಮಾಸ್ ಉಗ್ರರು ಯುದ್ಧ ಸಾರಿದ್ದು, ಆ ದೇಶದ ಜನತೆ ಉಗ್ರರ ಅಟ್ಟಹಾಸದಿಂದ ನಲುಗಿ ಹೋಗಿದ್ದಾರೆ. ಈ ಹಿಂದೆ ಭಾರತವೂ ಸಹ ಉಗ್ರವಾದದಿಂದ ಸಾವಿರಾರು ಸಾವು ನೋವು ಕಂಡಿದೆ. ಹೀಗಾಗಿ ಉಗ್ರವಾದವನ್ನು ಭಾರತ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಆರೇಳು ದಶಕಗಳಿಂದ ದೇಶ ಆಳಿದ ಕಾಂಗ್ರೆಸ್ ಉಗ್ರವಾದ ಖಂಡಿಸುತ್ತೇವೆ ಎಂದ ಬಾಯಿಮಾತಿಗೆ ಹೇಳಿಕೊಂಡು ಬಂದಿದೆ ಹೊರತು ಕಠಿಣ ಕ್ರಮ ಕೈಗೊಳ್ಳದ ಪರಿಣಾಮ ದೇಶ ಅನೇಕ ಉಗ್ರರ ಕೃತ್ಯಗಳಿಗೆ ಬಲಿಯಾಗಬೇಕಾಯಿತು. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿಜಿ ಅವರು ಭಾರತ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ನಿಲುವು ತಳೆದು ತಕ್ಕ ಪಾಠ ಕಲಿಸುವ ಕೆಲಸ ಮಾಡಿದ್ದರ ಪರಿಣಾಮ ಭಾರತರೀಗ ಸುಭದ್ರವಾಗಿದೆ. ಭಯೋತ್ಪಾದನೆ ಶೇ.90ರಷ್ಟು ನಿಯಂತ್ರಣಕ್ಕೆ ಬಂದಿದೆ. ಯಾರೂ ಭಾರತದ ವಿರುದ್ಧ ಸೊಲ್ಲೆತ್ತದಂತೆ ಮೋದಿಜಿ ನೇತೃತ್ವದ ಸರ್ಕಾರ ಆಡಳಿತ ಮಾಡುತ್ತಿದೆ ಎಂದರು.
ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಹಗೆತನ: ಸಚಿವ ಎಂ.ಬಿ.ಪಾಟೀಲ
ಇಸ್ರೇಲ್ ದೇಶ ಹಮಾಸ್ ಉಗ್ರರ ದಾಳಿಯಿಂದ ನಲುಗಿದೆ. ಉಗ್ರರು ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಉಗ್ರರು ಸಾವಿರಾರು ಮಕ್ಕಳ ಶಿರಚ್ಛೇದನ ಮಾಡುತ್ತಿದ್ದಾರೆ. ಇಂತಹ ಕ್ರೂರಿ ಹಮಾಸ್ ಉಗ್ರರ ದಾಳಿಯನ್ನು ಇಂಡಿಯಾ ಮೈತ್ರಿಕೂಟ ಖಂಡಿಸದೆ ಪ್ಯಾಲಿಸ್ತೇನ್ ಪರ ನಿಲ್ಲುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಗಳಲ್ಲಿ ಹಮಾಸ್ ಉಗ್ರರ ಭಾರತ ಮೇಲೆ ದಾಳಿಗೆ ಸಂಚು ರೂಪಿಸಿದರೆ ಇಂಡಿಯಾ ಮೈತ್ರಿಕೂಟದ ನಿಲುವು ಭಾರತದ ಪರ ಇರುವುದೋ ಅಥವಾ ಪ್ಯಾಲಿಸ್ತೇನ್ ಪರವೋ ಎಂಬುದನ್ನು ದೇಶದ ಜನರಿಗೆ ಮೈತ್ರಿಕೂಟದ ನಾಯಕರು ಸ್ಪಷ್ಟಪಡಿಸಬೇಕಿದೆ ಎಂದರು.
ವಿಜಯಪುರ: ಕರೆಂಟ್ ಕಾಟಕ್ಕೆ ಬೇಸತ್ತು ಹೆಸ್ಕಾಂ ಕಚೇರಿಗೆ ಮೊಸಳೆ ತಂದು ಬಿಟ್ಟ ರೈತ..!
ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೇ ಆಗಿದ್ದು, ದೇಶದ ಆಂತರಿಕ ವಿಷಯಗಳಲ್ಲಿ ದೇಶದ ಹಿತಕಾಯುವ ಕೆಲಸ ಮಾಡಬೇಕು. ದೂರದೃಷ್ಟಿ ಇಟ್ಟುಕೊಂಡು ಆಲೋಚನೆ ಮಾಡಿ ಹೇಳಿಕೆಗಳನ್ನು ನೀಡಬೇಕು. ಕಾಂಗ್ರೆಸ್ ಸಿದ್ಧಾಂತ ಭ್ರಷ್ಟಾಚಾರ, ದುರಾಡಳಿತ, ದೇಶದ ಆಂತರಿಕ ವಿಷಯಗಳಲ್ಲಿ ರಾಜಿ ಮಾಡಿಕೊಂಡು ಬಂದ ಪರಿಣಾಮ ದೇಶವನ್ನು ದುಸ್ಥಿತಿಗೆ ತಂದು ನಿಲ್ಲಿಸಿದ್ದರು. ಇದರ ಪರಿಣಾಮ ಕರ್ನಾಟಕದಲ್ಲಿ ನೋಡುತ್ತಿದ್ದೇವೆ. ಜನರಿಗೆ ವಿವಿಧ ಗ್ಯಾರೆಂಟಿಗಳ ಆಸೆ, ಅಮಿಷ ನೀಡಿ ಗೆದ್ದ ಬಳಿಕ ವರಸೆ ಬಲಿಸುತ್ತಿದೆ. 200 ಯುನಿಟ್ ವಿದ್ಯುತ್ ಫ್ರೀ ಎಂದು ಹೇಳಿ ಈಗ ರೈತರಿಗೆ ಸರಿಯಾಗಿ ವಿದ್ಯುತ್ ಒದಗಿಸಲು ಆಗುತ್ತಿಲ್ಲ. ರಾಜ್ಯಾದ್ಯಂತ ಬರ ಆವರಿಸಿದ್ದು, ಎದುರಿಸುವ ಮುಂದಾಲೋಚನೆ ಮಾಡದೆ, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕಮಿಷನ್ ದಂದೆಯಿಂದ ಬೆಂಗಳೂರಿನ ಕಾಂಗ್ರೆಸ್ ಮುಖಂಡರ ಮನೆಗಳಲ್ಲಿ ನೂರಾರು ಕೋಟಿ ರೂ. ಸಿಗುತ್ತಿದೆ ಎಂದ ಟೀಕಿಸಿದರು.
ಡಿಕೆಸಿಗೆ ಹಣವ ಕಾಗದವಾಗಿ ಕಾಣುತ್ತಿದೆ:
ಹೈದ್ರಾಬಾದ್‌ನಲ್ಲಿ ಸಚಿವ ಶಿವಾನಂದ ಪಾಟೀಲರು ಪಾಲ್ಗೊಂಡ ಖಾಸಗಿ ಕಾರ್ಯಕ್ರಮದಲ್ಲಿ ಹಣ ತೂರಾಡಲಾಗಿದೆ. ಆದರೆ ಡಿಸಿಎಂ ಡಿಕೆ ಶಿವಕುಮಾರ ಅವರು ಸಚಿವರ ಎದುರು ತೂರಾಡಿರುವುದು ಹಣವಲ್ಲ ಖಾಗದ ಎಂದು ಹೇಳುತ್ತಿದ್ದಾರೆ. ಡಿಕೆಸಿ ಅವರಿಗೆ ಕೋಟಿಗಟ್ಟಲೇ ಹಣ ತೂರುವುದು, ಬೆಂಗಳೂರಿನಲ್ಲಿ ಸಿಕ್ಕಿರುವ ಹಣ ಕಾಗದವೆಂದು ಹೇಳಿರುವುದು ಏಷ್ಟು ಸರಿ. ಅಕ್ರಮವಾಗಿ ಹಣ ಸಂಗ್ರಹಸಿದ ಪರಿಣಾಮ ಹಿಂದೊಮ್ಮೆ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಈಗ ತನಿಖೆ ಚುರುಕುಗೊಳಿಸಿ 3 ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ. ಇದನ್ನು ನೋಡಿದರೆ ಭ್ರಷ್ಟಾಚಾರ ಕಾಂಗ್ರೆಸ್ ನಾಯರಿಗೆ ಉರುಳಾಗಿ ಪರಿಣಮಿಸಿದೆ ಎಂದು ದೂರಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಸಿದ್ದು ಬುಳ್ಳಾ, ಉಪಾಧ್ಯಕ್ಷ ಎಂ.ಡಿ.ಕುಂಬಾರ, ಉಪಸ್ಥಿತರಿದ್ದರು.