ಮೈಸೂರಿನಲ್ಲಿ ನಮ್ಮ ಇಬ್ಬರು ಸ್ನೇಹಿತರಿದ್ದಾರೆ. ಅವರು ಹಿಂದಿನ ವರ್ಷವೂ ಔತಣಕೂಟ ಏರ್ಪಡಿಸಿ ನಮ್ಮನ್ನು ಕರೆದಿದ್ದರು, ಆಗಲೂ ಹೋಗಿದ್ದೇವು. ಇನ್ನು ಬಸ್‌ನಲ್ಲಿ ನಾವು ಹೋಗಿರಲಿಲ್ಲ. ಸುಮ್ಮನೆ ಮಾಧ್ಯಮಗಳು ಏನೇನೋ ಸೃಷ್ಟಿಸುತ್ತಿವೆ ಎಂದ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ
ಬೆಳಗಾವಿ(ಅ.20): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬೆಳಗಾವಿಯಲ್ಲಿ ಏನೂ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೇನೂ ಆ ಅನುಭವ ಆಗಿಲ್ಲ. ಇನ್ನು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ರೀತಿಯ ವೈಮನಸ್ಸಿಲ್ಲ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ನಗರದ ಪ್ರವಾಸ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಆಗಮಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ ಅವರ ಬೆಳಗಾವಿ ಪ್ರವಾಸ ಪೂರ್ವ ನಿಯೋಜಿತವಾಗಿರಲಿಲ್ಲ. ನಾನು ನನ್ನ ಕ್ಷೇತ್ರದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದೆ. ಅವರು ಬೆಳಗಾವಿಗೆ ಬರುವ ಮೊದಲೇ ನಾನು ಬೆಂಗಳೂರಿನಲ್ಲಿದ್ದೆ ಎಂದು ಸ್ಪಷ್ಟಪಡಿಸಿದರು.
ನನ್ನ, ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಇನ್ನು ಡಿಕೆಶಿ ಅವರ ಸ್ವಾಗತಕ್ಕೆ ಗೈರಾಗಿದ್ದರಿಂದ ಪಕ್ಷಕ್ಕೆ ಮುಜುಗರ ಆಯಿತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಬೆಂಗಳೂರಿನಿಂದ ಬಂದ ತಕ್ಷಣವೇ ಡಿಕೆಶಿ ಅವರ ಭೇಟಿಗೆ ಬಂದಿರುವೆ. ಆ ರೀತಿ ಏನೂ ಇಲ್ಲ. ಇದರಲ್ಲಿ ಯಾವುದೇ ಪೊಲಿಟಿಕಲ್ ಗಿಮಿಕ್ ಇಲ್ಲ ಎಂದರು.
ಕುಸ್ತಿ ನೋಡಲು ಮೈಸೂರಿಗೆ ಜಿಲ್ಲೆಯ ಶಾಸಕರು ಹೋಗಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಮೈಸೂರಿನಲ್ಲಿ ನಮ್ಮ ಇಬ್ಬರು ಸ್ನೇಹಿತರಿದ್ದಾರೆ. ಅವರು ಹಿಂದಿನ ವರ್ಷವೂ ಔತಣಕೂಟ ಏರ್ಪಡಿಸಿ ನಮ್ಮನ್ನು ಕರೆದಿದ್ದರು, ಆಗಲೂ ಹೋಗಿದ್ದೇವು. ಇನ್ನು ಬಸ್‌ನಲ್ಲಿ ನಾವು ಹೋಗಿರಲಿಲ್ಲ. ಸುಮ್ಮನೆ ಮಾಧ್ಯಮಗಳು ಏನೇನೋ ಸೃಷ್ಟಿಸುತ್ತಿವೆ ಎಂದರು.