
ಕಲಬುರಗಿ (ಫೆ.18): ಕೈಲಾಗದವರು ಮೈ ಪರಚಿಕೊಂಡರು ಎಂಬ ಗಾದೆ ಮಾತೇ ಇದೆ. ಅದರಂತೆ ಚುನಾವಣೆ ಬಂದಾಗ ಸಿಬಿಐ ದಾಳಿ, ಇಡಿ ದಾಳಿ ಮಾಡಿಸೋದು ಬಿಜೆಪಿಯವರ ಹುಟ್ಟುಗುಣ. ನರೇಂದ್ರ ಮೋದಿ, ಅಮಿತ್ ಶಾಗೆ ಇದೊಂದು ಕಸುಬು ಆಗಿದೆ ಎಂದು ಕೇಂದ್ರದ ವಿರುದ್ಧ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನ ಅಕೌಂಟ್ ಗಳ ಸೀಜ್ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಳು ಬರುತ್ತಿದ್ದಂಗೆ ಇಂಥ ದಾಳಿಗಳು ಪ್ರಾರಂಭ ಆಗುತ್ತವೆ. ಇದು ಬಿಜೆಪಿಯವ್ರ ಬ್ಲಾಕ್ ಮೇಲ್ ತಂತ್ರ. ಪ್ರಾಮಾಣಿಕವಾಗಿ ,ಸ್ವಂತ ಶಕ್ತಿ, ಅಭಿವೃದ್ಧಿ ಮೇಲೆ ದೇಶದಲ್ಲಿ ಗೆಲ್ಲುತ್ತೇವೆ ಅಂತ ಅವರಿಗೆ ಗ್ಯಾರಂಟಿ ಇಲ್ಲ. ರಾಮ ಮಂದಿರ ಉದ್ಘಾಟನೆ ಮಾಡಿದಾಕ್ಷಣ ಗೆಲ್ಲೋಕಾಗುತ್ತಾ ? ರಾಮಮಂದಿರಕ್ಕೆ ನಾವು ಯಾರೂ ವಿರೋಧಿಸಿಲ್ಲ. ನಾವೂ ಜೈಶ್ರೀರಾಮ್ ಅಂತೇವಿ. ನಾವೂ ರಾಮನ ಭಕ್ತರೇ. ಆದರೆ ರಾಜಕೀಯಕ್ಕೋಸ್ಕರ ಬಿಜೆಪಿಯವರು ರಾಮಮಂದಿರ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಸೋಲುವ ಭಯದಿಂದ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡಿಸೋದು ಬೆದರಿಕೆ ಹಾಕೋದು ಅಕೌಂಟ್ ಸೀಜ್ ಮಾಡೋದು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಗತಿ ಬಗ್ಗೆ ಮಾತಾಡಿ ಅಂದ್ರೆ ಉಡಾಫೆ ಮಾತಾಡ್ತಾರೆ: ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಸಂತೋಷ್ ಲಾಡ್ ಗರಂ
ಈ ಬಿಜೆಪಿಯವ್ರಿಗೆ ಸ್ಸಂತ ತಾಕತ್ತಿಲ್ಲ ಅನ್ನೋದು ಇಂಥ ದಾಳಿಗಳಿಂದ ಗೊತ್ತಾಗುತ್ತಿದೆ. ಇದು ಹೇಡಿ ರಾಜಕೀಯ ಅಂತ ಭಾವಿಸುತ್ತೆನೆ. ಆದರೆ ಅವರಂತೆ ಕಾಂಗ್ರೆಸ್ ನವರು ಹೇಡಿ ರಾಜಕೀಯ ಮಾಡಲ್ಲ. ಎಷ್ಟೇ ಗೊಡ್ಡು ಬೆದರಿಕೆ ಹಾಕಿದ್ರೂ ಕಾಂಗ್ರೆಸ್ ನಾಯಕರು ಹೆದರಲ್ಲ. ಕಾಂಗ್ರೆಸ್‌ಗೆ ಅದರದೇ ಆದ ಸಿದ್ಧಾಂತ ಇದೆ. ಅದರ ಮೇಲೆ ನಡೆಯುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.