
ಚೆನ್ನೈ: ತಮಿಳು ಚಿತ್ರ ಜಗತ್ತಿನ ಸ್ಟಾರ್ ಐಕಾನ್ ದಳಪತಿ ವಿಜಯ್ ಈಗ ತಮಿಳುನಾಡು ರಾಜಕಾರಣದ ಸ್ಟಾರ್ ಐಕಾನ್ ಕೂಡ ಆಗಿದ್ದಾರೆ. ವಿಜಯ್ ರಾಜಕೀಯ ಎಂಟ್ರಿಯಿಂದ ಇಡೀ ತಮಿಳು ನಾಡು ಈ ಎಲೆಕ್ಷನ್ ಈ ಭಾರಿ ರಂಗೇರಿದೆ. ತನ್ನ ಪಕ್ಷವನ್ನ ಅಧಿಕಾರಕ್ಕೆ ತಂದರೆ ಬರಪೂರ ಕೊಡುಗೆಗಳನ್ನ ಕೊಡೋದಾಗಿ ವಿಜಯ್ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಮತದಾರರಿಗೆ ವಿಜಯ್ ಕೊಟ್ಟ ಅಭಯ ಏನು? ನೋಡೋಣ ಬನ್ನಿ.
ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ತಮಿಳುನಾಡಿನಲ್ಲಿ 2026 ರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಇಡೀ ರಾಜ್ಯ ಸುತ್ತಿರೋ ದಳಪತಿ ಇನ್ನೇನು ದಾಳ ಉರುಳಿಸಿ ಗದ್ದುಗೆ ಏರೋದೊಂದೇ ಭಾಕಿ ಇದೆ. ತಮ್ಮ ಟಿವಿಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಕೊಟ್ಟಿರೋ ವಿಜಯ್ ತಾನು ಮಾತ್ರ ಚೆನ್ನೈನ ತಿರುಚ್ಚಿ ಪೂರ್ವ ಮತ್ತು ಪೆರಂಬೂರುನಿಂದ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಅಷ್ಟೆ ಅಲ್ಲ ತನ್ನ ಮೊದಲ ಹೆಜ್ಜೆಯಲ್ಲೇ ದೊಡ್ಡ ಗೆಲುವು ಪಡೆಯಲು ವಿಜಯ್ ರಣತಂತ್ರ ರೂಪಿಸಿದ್ದಾರೆ.
ಯೆಸ್, ದಳಪತಿ ವಿಜಯ್ ಈ ಭಾರಿ ತನ್ನ ಮೊದಲ ಹೆಜ್ಜೆಯಲ್ಲೇ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ವೈಲೆಂಟ್ ಎಲೆಕ್ಷನ್ಗೆ ಸಜ್ಜಾಗಿದ್ದಾರೆ. ಅಬ್ಬರದ ಪ್ರಚಾರ ಮಾಡಿರೋ ವಿಜಯ್ ತಮ್ಮ ಪಕ್ಷದ ಅಭ್ಯರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ತಮಿಳು ಮಕ್ಕಳಿಗೆ ಭರಪೂರ ಭರವಸೆಗಳನ್ನ ಕೊಟ್ಟಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿ ಎಂದಿದ್ದಾರೆ.
ನಾವು ಇಲ್ಲಿ ಜನರಿಗಾಗಿ ಮಾತ್ರ ಇದ್ದೇವೆ ಎಂದಿರೋ ವಿಜಯ್, ತಮಿಳು ನಾಡಿನಾದ್ಯಂತ ಮಾಧಕ ವಸ್ತು ಮುಕ್ತ ನಾಡು ಕಟ್ಟೇ ಕಟ್ಟುತ್ತೇನೆ ಎಂದು ಅಬ್ಬರಿಸಿದ್ದಾರೆ. ಅಷ್ಟೆ ಅಲ್ಲ ಸಾರ್ವಜನಿಕ ಹಣವನ್ನ ಎಂದೂ ದುರುಪಯೋಗ ಮಾಡಲ್ಲ. ಮಹಿಳೆಯರ ರಕ್ಷಣೆ ನಮ್ಮ ಹೊಣೆ. ಈ ಬಾರಿ ನಮ್ಮನ್ನೇ ಅಧಿಕಾರಕ್ಕೆ ತನ್ನಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.
ದಳಪತಿ ವಿಜಯ್ ಕಟ್ಟಿರೋ ಟಿವಿಕೆ ಪಕ್ಷಕದ ಗುರುತು ‘ಶಿಳ್ಳೆ’.. ವಿಭಿನ್ನ ಆಲೋಚನೆಯೊಂದಿಗೆ ರಾಜಕಾರಣದ ಕಹಳೆ ಊದಿರೋ ವಿಜಯ್ ಭವಿಷ್ಯ ಏಪ್ರಿಲ್ 23ಕ್ಕೆ ಮತ ಪೆಟ್ಟಿಗೆಯಲ್ಲಿ ಭದ್ರವಾಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.