ಲೋಕಸಭಾ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ವಿಧಾನ ಪರಿಷತ್‌ಗೆ ಚುನಾವಣೆ

By Kannadaprabha News  |  First Published May 10, 2024, 8:29 AM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಮುಂದಿನ ತಿಂಗಳು ಹೊರಬರುತ್ತಿದ್ದಂತೆ ರಾಜ್ಯ ವಿಧಾನ ಪರಿಷತ್ತಿನ ಸದಸ್ಯತ್ವ ಅವಧಿ ಮುಗಿಯಲಿರುವ 11 ಸ್ಥಾನಗಳಿಗೆ ಬರುವ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.


ಬೆಂಗಳೂರು(ಮೇ.10):  ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಮುಂದಿನ ತಿಂಗಳು ಹೊರಬರುತ್ತಿದ್ದಂತೆ ರಾಜ್ಯ ವಿಧಾನ ಪರಿಷತ್ತಿನ ಸದಸ್ಯತ್ವ ಅವಧಿ ಮುಗಿಯಲಿರುವ 11 ಸ್ಥಾನಗಳಿಗೆ ಬರುವ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಬಿಜೆಪಿಯ ತೇಜಸ್ವಿನಿ ಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಕ್ಷೇತ್ರ ಸೇರಿದಂತೆ ಬಿಜೆಪಿಯ ರಘುನಾಥ್ ರಾವ್ ಮಲ್ಯಾಪುರೆ, ಎನ್. ರವಿಕುಮಾರ್, ಪಿ.ಎಂ.ಮುನಿರಾಜು ಗೌಡ, ಎಸ್. ರುದ್ರೇಗೌಡ, ಕಾಂಗ್ರೆಸಿನ ಡಾ.ಕೆ. ಗೋವಿಂದರಾಜ್, ಕೆ.ಹರೀಶ್ ಕುಮಾರ್, ಎನ್.ಎಸ್. ಬೋಸರಾಜು, ಅರವಿಂದಕುಮಾ‌ರ್ ಅರಳಿ, ಜೆಡಿಎಸ್‌ ಬಿ.ಎಂ.ಫಾರೂಕ್ ಅವರ ಸದಸ್ಯತ್ವ ಅವಧಿ ಜೂ.11ರಂದು ಪೂರ್ಣಗೊಳ್ಳಲಿದೆ. ಉಪಚುನಾವಣೆ ನಡೆದಿರುವ ಸುರಪುರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಬಂದ ನಂತರವೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. 

Tap to resize

Latest Videos

ಸಿ.ಟಿ.ರವಿಗೆ ಅನ್ಯಾಯವಾಗಿದೆ, ಸರಿಪಡಿಸುತ್ತೇವೆ: ಯಡಿಯೂರಪ್ಪ

ಮೇಲ್ಮನೆ 6 ಸ್ಥಾನಗಳಿಗೆ ಚುನಾವಣೆ: 2 ನಾಮಪತ್ರ

ಬೆಂಗಳೂರು: ವಿಧಾನಪರಿಷತ್‌ನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದು, ಮೊದಲ ದಿನ ಎರಡು ನಾಮಪತ್ರಗಳು ಸಲ್ಲಿಕೆ ಯಾಗಿವೆ. ಈಶಾನ್ಯ ಪದವೀಧರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ತಲಾಒಂದು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇದೇ ತಿಂಗಳು16ರಂದು ನಾಮಪತ್ರಗಳನ್ನು ಸಲ್ಲಿ ಸಲು ಕೊನೆಯ ದಿನವಾಗಿದೆ. 17ರಂದು ನಾಮ ಪತ್ರಗಳ ಪರಿಶೀಲನೆ ನಡೆಯಲಿದೆ. 20ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನ ವಾಗಿದೆ. ಜೂ.3ರಂದು ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆಯಲಿದೆ.

ಸದ್ಯ ಕಾಂಗ್ರೆಸ್ 134 (ಸುರಪುರ ಹೊರತುಪಡಿಸಿ), ಬಿಜೆಪಿ 66, ಜೆಡಿಎಸ್ 19, ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ 1, ಸವೋದಯ ಕರ್ನಾಟಕ ಪಕ್ಷ 1 ಹಾಗೂ ಪಕ್ಷೇತರರು ಇಬ್ಬರು ಇದ್ದಾರೆ.

ಕಾಂಗ್ರೆಸ್‌ ಬಗ್ಗೆ ಮುನಿಸಿಕೊಂಡಿದ್ದ ಎಚ್.ವಿಶ್ವನಾಥ್‌ರನ್ನು ಬಿಜೆಪಿಗೆ ಸೆಳೆದ ವಿಜಯೇಂದ್ರ

ವಿಧಾನಸಭೆಯ ಶಾಸಕರೇ ಮತದಾರರಾಗಿರುವುದರಿಂದ ಆಯಾ ಪಕ್ಷದ ಸಂಖ್ಯಾಬಲದ ಆಧಾರದ ಮೇಲೆ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಪ್ರತಿ ಅಭ್ಯರ್ಥಿ ಗೆಲುವಿಗೆ 19 ಮತಗಳು ಬೇಕಾಗುತ್ತದೆ. ಇದರ ಆಧಾರದ ಮೇಲೆ ಕಾಂಗ್ರೆಸ್ 1, ಬಿಜೆಪಿ 3 ಹಾಗೂ ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಗೆಲ್ಲಲಿದ್ದಾರೆ. ಬಿಜೆಪಿ 66 ಸದಸ್ಯರನ್ನು ಹೊಂದಿದ್ದು, ಮೂವರು ಅಭ್ಯರ್ಥಿಗಳ ಗೆಲುವಿಗೆ 57 ಸದಸ್ಯರ ಮತ ಸಾಕಾಗಿದ್ದರೂ ಪ್ರತಿ ಅಭ್ಯರ್ಥಿಗೆ 20 ಅಥವಾ 21 ಮತ ನೀಡಬಹುದಾಗಿ, ಒಂದೆರಡು ಮತಗಳನ್ನು ಜೆಡಿಎಸ್‌ಗೆ ಹಂಚಿಕೆ ಮಾಡಬಹುದಾಗಿದೆ.

ಕುತೂಹಲದ ಚುನಾವಣೆ: 

ಅವಧಿ ಪೂರ್ಣಗೊಳ್ಳಲಿರುವ ಬೋಸರಾಜು ಅವರು ಸದ್ಯ ಪರಿಷತ್ತಿನ ಸಭಾನಾಯಕರಾಗಿದ್ದರೆ, ಬಿಜೆಪಿಯ ರವಿಕುಮಾರ್ ಪ್ರತಿ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ಹೀಗಾಗಿ ಈ ಇಬ್ಬರನ್ನು ಪುನರಾಯ್ಕೆ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 

click me!