ವಿಧಾನಪರಿಷತ್ ಸ್ಥಾನ: ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದತ್ತಾತ್ರೇಯ ದರ್ಶನ ಪಡೆದ ಸಿ.ಟಿ.ರವಿ

By Govindaraj S  |  First Published Jun 2, 2024, 7:18 PM IST

ಮಾಜಿ ಸಚಿವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ  ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.02): ಮಾಜಿ ಸಚಿವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ  ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಇಂದು ಬೆಳಗ್ಗೆ ದೆಹಲಿಯ ಬಿಜೆಪಿ ಮುಖ್ಯಾಲಯದ ಪ್ರಭಾರಿ ಅರುಣ್ ಸಿಂಹ ಅವರು ಬಿಡುಗಡೆ ಮಾಡಿದ ಮೂವರು ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿ.ಟಿ.ರವಿ ಸ್ಥಾನ ಗಿಟ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಕಾರ್ಯಕರ್ತರು ಸಂಭ್ರಮಿಸಲಾರಂಭಿಸಿದರು.

Tap to resize

Latest Videos

undefined

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿ ಸೇರಿದಂತೆ ಎಲ್ಲಾ ಐದು ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದ ಪರಿಣಾಮ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದರು. ಅದರಲ್ಲೂ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಸಂಘಟನಾ ಚತುರ ಎಂದೇ ಎನಿಸಿಕೊಂಡಿದ್ದ ಸಿ.ಟಿ.ರವಿ ಅವರ ಸೋಲು ಪಕ್ಷ ಸಂಘಟನೆ ದೃಷ್ಠಿಯಿಂದ ಭಾರೀ ಹಿನ್ನಡೆ ಎಂದು ಭಾವಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಸೋತ ಮರುಘಳಿಗೆಯಿಂದಲೇ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸಲಾರಂಭಿಸಿದ ರವಿ, ಮೊನ್ನೆ ನಡೆದ ಲೋಕಸಭೆ ಚುನಾವಣೆ ವೇಳೆ ವಿವಿಧ ರಾಜ್ಯಗಳನ್ನು ಪ್ರವಾಸ ಮಾಡಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್

ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಸಿ.ಟಿ.ರವಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತಾದರೂ ಹೈಕಮಾಂಡ್ ಬೇರೆಯದ್ದೇ ತೀರ್ಮಾನ ತೆಗೆದುಕೊಂಡಿತ್ತು. ಆಗಲೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡು ರಾಜ್ಯದ ಕಾಂಗ್ರೆಸ್ ಸಕಾರದ ವೈಫಲ್ಯಗಳನ್ನು ಯಶಸ್ವಿಯಾಗಿ ಜನರ ಮುಂದಿಡುತ್ತಾ, ಪಕ್ಷ ಸಂಘಟನೆ ಕಾರ್ಯದಲ್ಲೂ ನಿರಂತರವಾಗಿ ತೊಡಗಿಸಿಕೊಂಡ ಪರಿಣಾಮ ವಿಧಾನ ಪರಿಷತ್ ಸದಸ್ಯರ ಸ್ಥಾನ ಈಗ ಅವರನ್ನು ಹುಡುಕಿಕೊಂಡು ಬಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಾಳೆ ನಾಮಮತ್ರ ಸಲ್ಲಿಕೆ: ತಮಗೆ ಅತ್ಯಂತ ಆಪ್ತರಲ್ಲೊಬ್ಬರಾಗಿದ್ದ ಕೆ.ಎಸ್.ಈಶ್ವರಪ್ಪ ಅಂತಹವರು ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ನಾಯಕರುಗಳ ವಿರುದ್ಧವೇ ಬಂಡೆದ್ದರೂ ತಾವು ಮಾತ್ರ ಪಕ್ಷಕ್ಕೆ ಸಿದ್ಧಾಂತಕ್ಕೆ ಅಂಟಿಕೊಂಡ ರವಿ ಹೈಕಮಾಂಡ್ ಗಮನ ಸೆಳೆದಿದ್ದರು.ಈ ಎಲ್ಲಾ ಕಾರಣಗಳಿಂದಾಗಿ ಇದೀಗ ವಿಧಾನ ಪರಿಷತ್ ಪ್ರವೇಶಿಸುವ ಸುಯೋಗ ಅವರಿಗೆ ಒಲಿದು ಬಂದಿದೆ. ಜೂನ್ 13ರಂದು ನಡೆಯಲಿರುವ ದೈವಾರ್ಷಿಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರೇ ಮತದಾನ ಮಾಡಿ ಆಯ್ಕೆ ಮಾಡುವ ಚುನಾವಣೆಯಲ್ಲಿ ಅವರು ಎಂಎಲ್.ಸಿ ಆರುವುದು ಖಚಿತವಾಗಿದೆ. ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಹತ್ತೊಂಬತ್ತು ವರ್ಷಗಳ ಸುಧೀರ್ಘ ಕಾಲ ವಿಧಾನಸಭೆಯನ್ನು ಪ್ರತಿನಿಧಿಸಿದ್ದ ಸಿ.ಟಿ.ರವಿ ಅವರು ಇದೀಗ ಮೇಲ್ಮನೆಯನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ.2023ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ಪಕ್ಷ ವರೋಧಿ ಕೆಲಸ ಮಾಡಿದವರಿಗೆ ಮತ್ತೆ ವಿಧಾನಪರಿಷತ್ ಸದಸ್ಯರಾಗಿ  ಬರುವುದಾಗಿ ಹಾಕಿದ್ದ ಸವಾಲನ್ನು ಈಗ ಗೆದ್ದಂತಾಗಿದೆ.

ಯಡಿಯ್ಯೂರಪ್ಪ ನೀಡಿದ್ದ ಭರವಸೆ: ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಜಿಲ್ಲೆಗಾಗಮಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಿ.ಟಿ.ರವಿ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನ ಮಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೀಡಿದ್ದ ಭರವಸೆಯೂ ಈಗ ಈಡೇರಿದಂತಾಗಿದೆ. 

ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀ. ಹಾಲು ಉತ್ಪಾದನೆ, ಸಾರ್ವಕಾಲಿಕ ದಾಖಲೆ: ಶಾಸಕ ಕೆ.ವೈ.ನಂಜೇಗೌಡ

ಕಾರ್ಯಕರ್ತರ ಸಂಭ್ರಮ: ಸಿ.ಟಿ.ರವಿ ಅವರಿಗೆ ಎಂಎಲ್ಸಿ ಟಿಕೆಟ್ ಘೋಷಣೆ ಆದ ವಿಚಾರ ಗೊತ್ತಾಗುತ್ತಿದ್ದಂತೆ ಪಕ್ಷದ ಮುಖಂಡರುಗಳಾದ ಟಿ.ರಾಜಶೇಖರ್, ಸಂತೋಷ್ ಕೋಟ್ಯಾನ್, ಮುತ್ತಯ್ಯ, ಹಿರೇಮಗಳೂರು ಕೇಶವ ಇನ್ನಿತರರು ಹಿರೇಮಗಳೂರು ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಹಿಂದೂ ಹುಲಿ ಎಂದು ಘೋಷಣೆ ಕೂಗಿದರು. ಕೇಸರಿ ಶಾಲು, ಹೂವಿನ ಹಾರ ಹಾಕಿ ಅಭಿನಂದಿಸಿದರು. ಈ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ರವಿ, ನಾಳೆ ನಾಮಪತ್ರ ಸಲ್ಲಿಸಲಿದ್ದೇನೆ. ಜೂನ್13 ರಂದು ಚುನಾವಣೆ ನಡೆಯಲಿದೆ ಇದೆಲ್ಲ ನಂತರ ಇರಲಿ ಎಂದರು.

click me!