MLC Election: ಸಚಿವ ಕೆ.ಸಿ.ನಾರಾಯಣಗೌಡರಿಗೆ ಪ್ರತಿಷ್ಠೆ..!

Kannadaprabha News   | Asianet News
Published : Nov 27, 2021, 02:34 PM ISTUpdated : Nov 27, 2021, 02:38 PM IST
MLC Election: ಸಚಿವ ಕೆ.ಸಿ.ನಾರಾಯಣಗೌಡರಿಗೆ ಪ್ರತಿಷ್ಠೆ..!

ಸಾರಾಂಶ

*  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಮತಗಳಿಕೆ ಸವಾಲು *  ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಕೃಪೆ ಯಾರ ಮೇಲೆ? *  ಕಾಂಗ್ರೆಸ್‌, ಜೆಡಿಎಸ್‌ನ ರಾಜಕೀಯ ಕರ್ಮಭೂಮಿ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆ   

ಮಂಡ್ಯ ಮಂಜುನಾಥ

ಮಂಡ್ಯ(ನ.27): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ(Vidhan Parishat Election) ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರೂ ಆಡಳಿತಾರೂಢ ಬಿಜೆಪಿಗೆ(BJP) ಕಠಿಣ ಸವಾಲಾಗಿ ಎದುರಾಗಿದೆ.

ಕಾಂಗ್ರೆಸ್‌(Congress), ಜೆಡಿಎಸ್‌ನ(JDS) ರಾಜಕೀಯ(Politics) ಕರ್ಮಭೂಮಿ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಕೆ.ಆರ್‌.ಪೇಟೆ ಕ್ಷೇತ್ರದಿಂದ ಗೆಲುವು ಆರಂಭಿಸಿದ ಬಿಜೆಪಿ, ಪ್ರಸ್ತುವ ವಿಧಾನ ಪರಿಷತ್‌ ಚುನಾವಣೆಯನ್ನು ಹೊಸ ಭರವಸೆಯನ್ನು ಎದುರಿಸುತ್ತಿದ್ದು, ಸಚಿವ ಕೆ.ಸಿ.ನಾರಾಯಣಗೌಡ(KC Narayana Gowda) ನಾಯಕತ್ವದಲ್ಲಿ ಬಿರುಸಿನ ಪ್ರಚಾರ(Campaign) ಆರಂಭಿಸಿದೆ.

ಹೆಚ್ಚು ಮತಗಳಿಕೆ ಅನಿವಾರ್ಯ:

ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಕೆ.ಆರ್‌.ಪೇಟೆ(KR Pete) ಫಲಿತಾಂಶದ ಬಳಿಕ ಬಿಜೆಪಿಯನ್ನು ಅಷ್ಟುಹಗುರವಾಗಿ ಪರಿಗಣಿಸಲಾಗದು. ಜಿಲ್ಲಾ ಉಸ್ತುವಾರಿಯನ್ನೇ ಬಿಜೆಪಿಯ ನಾರಾಯಣಗೌಡರು ವಹಿಸಿರುವುದರಿಂದ ಕಾಂಗ್ರೆಸ್‌, ಜೆಡಿಎಸ್‌ಗೆ ಸರಿಸಮನಾಗಿಯೇ ಮತಗಳಿಸಲೇಬೇಕಾದ ಅನಿವಾರ್ಯತೆ ಇದೆ.

Vidhan Parishat Election: ಕಾಂಗ್ರೆಸ್‌ ಮುಳುಗಿದ ಹಡಗು: ಆನಂದ್‌ ಸಿಂಗ್‌

ಕಳೆದ ಕೆಲವು ತಿಂಗಳ ಹಿಂದೆ ನಡೆದ ಗ್ರಾಪಂ ಚುನಾವಣೆಯಲ್ಲೂ ಕೂಡ ಕೆ.ಆರ್‌.ಪೇಟೆ, ಮದ್ದೂರು ಸೇರಿದಂತೆ ಕೆಲವೆಡೆ ಬಿಜೆಪಿ ಕನಿಷ್ಠ ನೆಲೆಯನ್ನು ಕಂಡುಕೊಂಡಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಬಿಜೆಪಿ ಅಧಿಕಾರಬಲದ ಮೂಲಕವೇ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತ ಮತದಾರರನ್ನು ಸೆಳೆಯುವ ಸಾಹಸಕ್ಕೆ ಮುಂದಾಗಿದೆ.

ಸ್ವಕ್ಷೇತ್ರದವರಿಗೆ ಟಿಕೆಟ್‌:

ವಿಧಾನ ಪರಿಷತ್‌ ಚುನಾವಣೆಯ ಟಿಕೆಟ್‌ ಪೈಪೋಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆಪ್ತ ಎಲೆಚಾಕನಹಳ್ಳಿ ಬಸವರಾಜು ಹೆಸರು ಚಲಾವಣೆಗೆ ಬಂದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ(BS Yediyurappa) ಸಂಬಂಧಿ ಹಾಗೂ ಸಚಿವ ಕೆ.ಸಿ.ನಾರಾಯಣಗೌಡ ಸ್ವಕ್ಷೇತ್ರದ ಬಿಜೆಪಿ ಮುಖಂಡ ಬೂಕಹಳ್ಳಿ ಮಂಜು ಅವರಿಗೆ ಟಿಕೆಟ್‌ ನೀಡಲಾಯಿತು. ಸಚಿವ ಕೆ.ಸಿ.ನಾರಾಯಣಗೌಡ ವಿಧಾನ ಪರಿಷತ್‌ ಟಿಕೆಟ್‌ನ್ನು ಸ್ವಕ್ಷೇತ್ರದವರಿಗೇ ಕೊಡಿಸಲು ಯಶಸ್ವಿಯಾಗಿರುವುದು ಒಂದೆಡೆಯಾದರೆ ಈ ಚುನಾವಣೆಯಲ್ಲಿ ಬೂಕಹಳ್ಳಿ ಮಂಜು ಅವರಿಗೆ ಎಷ್ಟುಮತಗಳನ್ನು ಕೊಡಿಸುತ್ತಾರೆ ಎನ್ನುವುದೂ ಕೂಡ ಅಷ್ಟೇ ಮುಖ್ಯವಾಗಿದೆ.

ಈ ಹಿಂದಿನ ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಅನಾರೋಗ್ಯದ ನಿಮಿತ್ತ ಸಕ್ರಿಯವಾಗಿ ಕಾಣಿಸಿಕೊಳ್ಳಲಾಗದ ಸಚಿವ ಕೆ.ಸಿ.ನಾರಾಯಣಗೌಡರು, ಇಂದಿನ ಮೇಲ್ಮನೆ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಪ್ರಚಾರ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಮುಂಬರುವ ಜಿಲ್ಲಾ, ತಾಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದೆ ಎನ್ನುವ ಮಾತುಗಳನ್ನಾಡುವ ಸಚಿವರು, ತಮ್ಮ ಪಕ್ಷದ ಅಭ್ಯರ್ಥಿಯ ಪರ ಎಷ್ಟುಮತವನ್ನು ತಂದುಕೊಡುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ನಾರಾಯಣಗೌಡರ ಎಂಟ್ರಿಯಿಂದ ಬಲ

ಈಗಾಗಲೇ ಕಳೆದ ಆರು ತಿಂಗಳಿಂದಲೂ ಚುನಾವಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಬೂಕಹಳ್ಳಿ ಮಂಜು ಜಿಲ್ಲೆಯ ಬಹುತೇಕ ಗ್ರಾಪಂ ಸದಸ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು ನಿರೀಕ್ಷೆಯಂತೆ ಪಕ್ಷದ ಟಿಕೆಟ್‌ ಖಾತರಿಯಾದ ನಂತರವೂ ಪ್ರಚಾರ ಕಾರ್ಯವನ್ನು ಮುಂದುವರೆಸಿದ್ದು, ಇದುವರೆಗೆ ಅಭ್ಯರ್ಥಿ ಬೂಕಹಳ್ಳಿ ಮಂಜು ನಡೆಸಿರುವ ಪ್ರಾಥಮಿಕ ಸಿದ್ಧತೆಗೆ ಸಚಿವ ಕೆ.ಸಿ.ನಾರಾಯಣಗೌಡರ ಎಂಟ್ರಿಯಿಂದಾಗಿ ಬಲ ಬಂದಂತಾಗಿದೆ. ಬೂಕಹಳ್ಳಿ ಮಂಜು ಅವರ ಆರಂಭಿಕ ಪ್ರಯತ್ನಕ್ಕೆ ಎಷ್ಟುಫಲ ಸಿಗುತ್ತದೆ ಎನ್ನುವುದು ಪ್ರಶ್ನೆಯಾಗಿದೆ.

Jaladhare Pooja: ಜೆಡಿ​ಎಸ್‌ನಿಂದ 'ಜಲ​ಧಾರೆ ಕಾರ್ಯ​ಕ್ರಮ', ಕುಮಾರಸ್ವಾಮಿ ಘೋಷಣೆ

ಈಗಾಗಲೇ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್‌ನ ಬೆಂಬಲವಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಮಂಡ್ಯದಲ್ಲೂ ಕೂಡ ಕಾಂಗ್ರೆಸ್‌ ನಾಯಕರು ಬಿಜೆಪಿಯನ್ನು ಅನುಮಾನದಿಂದಲೇ ನೋಡುತ್ತಿದ್ದು, ಇದು ಬಿಜೆಪಿಯ ಚುನಾವಣಾ(Election) ಕಾರ್ಯತಂತ್ರಕ್ಕೆ ಹಿನ್ನಡೆ ಉಂಟುಮಾಡಿದೆ.

ಕಾಂಗ್ರೆಸ್‌-ಜೆಡಿಎಸ್‌ ಹಿಂದಿಕ್ಕುವರೇ?

ಆಡಳಿತಾರೂಢ ಬಿಜೆಪಿಗೆ ಸರಿಸಮನಾಗಿ ಮತ್ತು ಪರಿಣಾಮಕಾರಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣೆಯ ಅಂತಿಮ ದಿನಗಳು ಸನ್ನಿಹಿತವಾಗುತ್ತಿದ್ದಂತೆ ಗೆಲುವಿನ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಬಿಜೆಪಿಗಿಂತಲೂ ಚುನಾವಣೆಯಲ್ಲಿ ಹೆಚ್ಚು ಪಳಗಿರುವ ಎರಡೂ ಪಕ್ಷಗಳು ಅಷ್ಟೂದಿನದಿಂದ ಬಿಜೆಪಿ ನಡೆಸಿರುವ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುವ ತಂತ್ರಗಾರಿಕೆ ನಡೆಸುತ್ತಿದ್ದು, ಇದನ್ನು ಸಚಿವ ಕೆ.ಸಿ.ನಾರಾಯಣಗೌಡರು ತಮ್ಮ ಅಭ್ಯರ್ಥಿ ಬೂಕಹಳ್ಳಿ ಮಂಜು ಜೊತೆ ಸೇರಿ ಹೇಗೆ ಬೇಧಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!