Karnataka politics: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಕುಮಾರಸ್ವಾಮಿ

By Suvarna News  |  First Published Nov 27, 2021, 1:21 AM IST

* ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿ ಘೋಷಣೆ
* ಮಾಜಿ ಸಿಎಂ ಕುಮಾರಸ್ವಾಮಿಯಿಂದ ಪ್ರಕಟ
* ಚಿಕ್ಕಬಳ್ಳಾಪುರದಲ್ಲಿ ಬಹಿರಂಗವಾಗಿ ಘೋಷಣೆ


ಚಿಕ್ಕಬಳ್ಳಾಪುರ, (ನ.27)):  ಪ್ರಸ್ತುತ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ (Karnataka MLC Elections) ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು  ಮುಂಬರುವ ವಿಧಾನಸಭಾ ಚುನಾವಣೆಗೆ ಚಿಕ್ಕಬಳ್ಳಾಪು(chikkaballapur)ರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.

ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಕೆ.ಪಿ. ಬಚ್ಚೇಗೌಡರೇ ಮುಂದಿನ ಜೆಡಿಎಸ್ ಅಭ್ಯರ್ಥಿ(chikkaballapur JDS Candidate) ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಘೋಷಣೆ ಮಾಡಿದರು.

Latest Videos

undefined

MLC Election: ಚುನಾವಣೆ ಕಣದಿಂದ ಹಿಂದೆ ಸರಿದ ಜೆಡಿಎಸ್, ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್

ಡಿಸೆಂಬರ್ 10 ರಂದು ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಜೆಡಿಎಸ್​ ಅಭ್ಯರ್ಥಿಗಳನ್ನು ನಿಲ್ಲಿಸಿದರೂ ಕಷ್ಟ ಬಿಟ್ಟರೂ ಕಷ್ಟ. ಏನೇ ಮಾಡಿದ್ರೂ ಬಿಜೆಪಿ ಜತೆ ಶಾಮೀಲಾಗಿದ್ದಾರೆ ಅಂತಾರೆ. ನಮ್ಮಿಂದಲೇ ಬೆಳೆದು ಹೋದ ಕೆಲವರು ಟೀಕೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

 ಕೆಲವು ಜಿಲ್ಲೆಗಳಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 2 ಸದಸ್ಯ ಸ್ಥಾನಗಳಲ್ಲಿ ಒಂದು ಅಭ್ಯರ್ಥಿ ಏಕೆ ಹಾಕಿದ್ದಾರೆ? ಒಂದೊಂದೇ ಅಭ್ಯರ್ಥಿ ಹಾಕುವುದರ ಹಿಂದೆ ಒಳಒಪ್ಪಂದ ಇದೆಯಾ? ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಇದೆಯಾ? ಎಂದು ಕಾಂಗ್ರೆಸ್​​, ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಪ್ರಶ್ನಿಸಿದರು.

ಯಡಿಯೂರಪ್ಪನವರು ನಮ್ಮ ಬೆಂಬಲವನ್ನ ಕೋರಿದ್ರು. ಕೆಲವು ಚುನಾವಣೆಯಲ್ಲಿ ನೇರವಾಗಿ ಬೆಂಬಲ ಕೋರಿದ್ದರು. ಇವತ್ತು ಬಿಎಸ್​​ವೈರನ್ನ ಅಧಿಕಾರದಿಂದ ಇಳಿಸಲಾಗಿದೆ. ಬಿಜೆಪಿ ಜೊತೆಗೆ ಕಾಂಗ್ರೆಸ್​ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​​ನ ಮಹಾನ್ ನಾಯಕರಿಂದ ಒಳ ಒಪ್ಪಂದ ಆಗಿದೆ. ಆದರೆ ಕಾಂಗ್ರೆಸ್​ ನಮ್ಮ ವಿರುದ್ಧ ಆರೋಪ ಮಾಡುತ್ತಿದೆ ಎಂದು ಹೇಳಿದರು.

ಇನ್ನು ಇದೇ ವೇಳೆ ಮಳೆಹಾನಿ ಪರಿಹಾರ ಬಗ್ಗೆ ಮಾತನಾಡಿದ್ದು, ಮಳೆ ಹಾನಿ ಪರಿಹಾರ ನೀಡಲು ಇನ್ನೂ ಎಷ್ಟುದಿನ ಬೇಕು. ಪರಿಹಾರ ನೀಡಲು ಸರ್ಕಾರಕ್ಕೆ ಎಷ್ಟು ದಿನಗಳು ಬೇಕು? ಮಳೆ ಹಾನಿ ವಿಚಾರದಲ್ಲಿ ಹೇಳಿಕೆಗಳು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವರ ಹೇಳಿಕೆ ಗೊಂದಲಮಯವಾಗಿದೆ. ಸಿಎಂ, ಸಚಿವರದ್ದು ಒಂದೊಂದು ಅಂಕಿ ಸಂಖ್ಯೆ ಇದೆ ಎಂದರು.

ವೀರಪ್ಪ ಮೊಯ್ಲಿ ವಿರುದ್ಧ ಕಿಡಿ 
ಎಂ. ವೀರಪ್ಪ ಮೊಯ್ಲಿಯನ್ನ ಮಹಾನ್​ ಸುಳ್ಳುಗಾರ ಅಂತಾರೆ. ಕಾಂಗ್ರೆಸ್​ ನಾಯಕರೇ ಮೊಯ್ಲಿ ಸುಳ್ಳುಗಾರ ಅಂತಾರೆ. ದೇಶದ ಸುಳ್ಳುಗಾರ ಪ್ರಶಸ್ತಿ ವೀರಪ್ಪ ಮೊಯ್ಲಿಗೆ ನೀಡಬೇಕು. ನನ್ನ ಬದ್ಧತೆ ಪ್ರಶ್ನಿಸುವ ಮೊಯ್ಲಿಗೆ ಯಾವ ಬದ್ಧತೆಯಿದೆ. ಎತ್ತಿನಹೊಳೆ ಯೋಜನೆಗೆ ಸ್ಪಷ್ಟ ಡಿಪಿಆರ್​ ಸಿದ್ಧಪಡಿಸಿಲ್ಲ. ಗುತ್ತಿಗೆದಾರರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

click me!