Vidhan Parishat Election: ಕಾಂಗ್ರೆಸ್‌ ಮುಳುಗಿದ ಹಡಗು: ಆನಂದ್‌ ಸಿಂಗ್‌

By Kannadaprabha NewsFirst Published Nov 27, 2021, 12:33 PM IST
Highlights

*   ಸುಳ್ಳು ಹೇಳುವುದೇ ಕಾಂಗ್ರೆಸ್ಸಿಗರ ಬಂಡವಾಳ
*  ಸತೀಶ ಪರ ಮತಯಾಚನಾ ಕಾರ್ಯಕ್ರಮದಲ್ಲಿ ಸಚಿವ ಆನಂದ್‌ ಸಿಂಗ್‌ ವಾಗ್ದಾಳಿ
*  ಮುಂದಿನ ಸಲ ಹೂವಿನಹಡಗಲಿಯಲ್ಲಿ ಕಮಲ ಅರಳಿಸುತ್ತೇವೆ 
 

ಹೂವಿನಹಡಗಲಿ(ನ.27):  ಕೇಂದ್ರದ ನರೇಂದ್ರ ಮೋದಿ(Narendra Modi) ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರಿಗೆ ಟೀಕೆ ಮಾಡಲು ಯಾವ ವಿಷಯವೂ ಇಲ್ಲ. ಕಾಂಗ್ರೆಸ್‌(Congress) ನಾಯಕರ ಸಾವನ್ನು ಅವರು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಆರೋಪಿಸಿದ್ದಾರೆ.

ಶುಕ್ರವಾರ ಇಲ್ಲಿ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಬಿಜೆಪಿ(BJP) ಅಭ್ಯರ್ಥಿ ಸತೀಶ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಈಗಾಗಲೇ ಮುಳುಗಿ ಹೋಗಿರುವ ಹಡಗು. ಅವಸಾನದ ಅಂಚಿಗೆ ಬಂದಿರುವ ಕಾಂಗ್ರೆಸ್‌ ಬಗ್ಗೆ ಕರುಣೆ ಹೆಚ್ಚಿಸಲು ಇಂದಿರಾಗಾಂಧಿ(Indira Gandhi), ರಾಜೀವ್‌ ಗಾಂಧಿ(Rajiv Gandhi) ಸೇರಿದಂತೆ ಆ ಕುಟುಂಬ ಈ ದೇಶಕ್ಕೆ ಪ್ರಾಣ ಕೊಟ್ಟಿದ್ದಾರೆಂದು ಜನರ ಬಳಿ ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

ದೇಶದಲ್ಲಿ ಕಾಂಗ್ರೆಸ್‌ 70 ವರ್ಷ ಆಳ್ವಿಕೆ ಮಾಡಿದೆ. ಅವರು ದೇಶದ(India) ಅಭಿವೃದ್ಧಿ ಚಿಂತನೆ ಮಾಡುವ ಬದಲು ತನ್ನ ಕುಟುಂಬದ ಚಿಂತೆ ಮಾಡಿದ್ದೇ ಹೆಚ್ಚು. ದೇಶದ ಗಡಿಯನ್ನು ಸೈನಿಕರು ಕಾಯುವ ಹಾಗೆ ಮೋದಿ ಇಡೀ ದೇಶದ ಜನರ ಅಭಿವೃದ್ಧಿ ಕನಸು ನನಸು ಮಾಡುವ ಕಾಯಕದಲ್ಲಿದ್ದಾರೆಂದು ಹೇಳಿದರು.

Karnataka politics: ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಕುಮಾರಸ್ವಾಮಿ

ಬಳ್ಳಾರಿ(Ballari), ವಿಜಯನಗರ(Vijayanagara) ಜಿಲ್ಲೆಯಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನ ಬಿಜೆಪಿ ಸೇರಬಾರದೆಂದು ಸಾಮಾಜಿಕ ಜಾಲತಾಣದಲ್ಲಿ(Social Media) ಹೆದರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ದೂರಿದರು.

ಸಾರಿಗೆ ಸಚಿವ ಶ್ರೀರಾಮುಲು(B Sriramulu) ಮಾತನಾಡಿ, ಡಾ. ಬಿ.ಆರ್‌. ಅಂಬೇಡ್ಕರ್‌(Dr BR Ambedkar) ಅವರನ್ನು ಕಾಂಗ್ರೆಸ್‌ನವರು ಕೇವಲ ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಜೀವಂತ ಇದ್ದಾಗ ಅವರನ್ನು ಗೌರವಿಸದೇ ಅವಮಾನಿಸಿದ್ದೇ ಹೆಚ್ಚು. ಆದರೆ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರವರ ಸಮಾಧಿ, ಮನೆಯನ್ನು ಅಭಿವೃದ್ಧಿ ಮಾಡಿದ್ದಾರೆ ಎಂದರು.

ಮಾಜಿ ಶಾಸಕ ಬಿ. ಚಂದ್ರನಾಯ್ಕ, ಮುಖಂಡ ಓದೋ ಗಂಗಪ್ಪ, ಅಯ್ಯಾಳಿ ತಿಮ್ಮಪ್ಪ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ, ರಾಮಲಿಂಗಪ್ಪ, ವಿಜಯಕುಮಾರ, ಮಧುನಾಯ್ಕ, ಎಚ್‌. ಪೂಜೆಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಎಸ್‌. ಸಂಜೀವರೆಡ್ಡಿ, ಎಂ.ಬಿ. ಬಸವರಾಜ, ಈಟಿ ಮಾಲತೇಶ, ಮಹೇಂದ್ರ, ಈಟಿ ಲಿಂಗರಾಜ, ಪರಶುರಾಮ, ಪ್ರದೀಪ್‌ ಜ್ಯೋತಿ ಸೇರಿದಂತೆ ಇತರರಿದ್ದರು.

Council Election: ಕಾಂಗ್ರೆಸ್‌ನಲ್ಲಿ ದೇಶ ಮುನ್ನಡೆಸುವ ನಾಯಕರಿಲ್ಲ: ಆನಂದ್‌ ಸಿಂಗ್‌

ಮುಂದಿನ ಸಲ ಹೂವಿನಹಡಗಲಿಯಲ್ಲಿ ಕಮಲ ಅರಳಿಸುತ್ತೇವೆ...

ಕಳೆದ ಬಾರಿ ಹೂವಿನಹಡಗಲಿಯಲ್ಲಿ ಸಣ್ಣ ತಪ್ಪಿನಿಂದ ಬಿಜೆಪಿ ಸೋಲು ಕಂಡಿದೆ. ಆದರೆ ಮುಂದಿನ ಬಾರಿ ಮತ್ತೆ ಈ ನೆಲದಲ್ಲಿ ಕಮಲ ಹೂವನ್ನು ಆರಳಿಸುತ್ತೇವೆ. ಆ ನಿಟ್ಟಿನಲ್ಲಿ ಈಗ ಎಲ್ಲ ಪ್ರಯತ್ನ ನಡೆಯುತ್ತಿವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ದಲಿತರು(Dalit) ಬಿಜೆಪಿಗೆ ಹೊಟ್ಟೆ ಪಾಡಿಗೆ ಹೋಗುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡರಿಗೆ ಮತಿಭ್ರಮಣೆಯಾಗಿದೆ. ದೇಶದಲ್ಲಿ ಕಾಂಗ್ರೆಸ್‌ ಹೆಸರು ಹೇಳಿಕೊಳ್ಳದಷ್ಟು ಹೀನಾಯ ಪಕ್ಷವಾಗಿದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್‌ ಚುನಾವಣೆ 2023ರ ಸಾರ್ವತ್ರಿಕ ಚುನಾವಣೆಯ(General Election) ದಿಕ್ಸೂಚಿಯಾಗಲಿದೆ. ಅದು ಬಳ್ಳಾರಿ, ವಿಜಯನಗರದಿಂದಲೇ ಆರಂಭವಾಗಲಿದೆ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ತಾವು ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದೆ. ಆಗ ವಿಜಯನಗರ ಜಿಲ್ಲೆ ಮಾಡಿ ಎಂದು ಬೇಡಿಕೊಂಡರೂ ಮಾಡುವಂತಹ ಮೀಟರ್‌ ಆ ಸರ್ಕಾರದಲ್ಲಿ ಯಾರಿಗೂ ಇರಲಿಲ್ಲ. ದಿಟ್ಟನಿಲುವು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೆ ಇದೆ. ಅದಕ್ಕೆ ವಿಜಯನಗರ ಜಿಲ್ಲೆ ಉದಯವಾಗಿದೆ. ಆ ಜಿಲ್ಲೆ ನಿರ್ಮಾಣಕ್ಕಾದರೂ ಬಿಜೆಪಿಗೆ ಮತ ಹಾಕಬೇಕೆಂದು ಆನಂದ್‌ ಸಿಂಗ್‌ ಮನವಿ ಮಾಡಿದರು.
 

click me!