ಪರಿಷತ್‌ ಚುನಾವಣೆ: ನಾಸೀರ್‌ ಅಹ್ಮದ್‌ ಆಸ್ತಿ 36 ಕೋಟಿ

By Kannadaprabha NewsFirst Published Jun 19, 2020, 1:32 PM IST
Highlights

ತಮ್ಮ ಮತ್ತು ಪತ್ನಿ ಹೆಸರಲ್ಲಿ 17.75 ಕೋಟಿ ರು. ಸ್ಥಿರಾಸ್ತಿ ಮತ್ತು 17.75 ಲಕ್ಷ ರು. ಚರಾಸ್ತಿ ಹೊಂದಿದ ನಾಸೀರ್‌ ಅಹ್ಮದ್‌|  ತಮ್ಮ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎರಡು ಪ್ರಕರಣಗಳ ವಿಚಾರಣೆ ಬಾಕಿ ಇದೆ. ಯಾವುದೇ ಪ್ರಕರಣದಲ್ಲಿ ಆರೋಪ ಸಾಬೀತಾಗಿಲ್ಲ ಎಂದು ಹೇಳಿದ ನಾಸೀರ್‌ ಅಹ್ಮದ್‌|

ಬೆಂಗಳೂರು(ಜೂ.19): ವಿಧಾನ ಪರಿಷತ್‌ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ನ ಮತ್ತೊಬ್ಬ ಅಭ್ಯರ್ಥಿ ನಾಸೀರ್‌ ಅಹ್ಮದ್‌ ತಮ್ಮ ಮತ್ತು ತಮ್ಮ ಪತ್ನಿ ಹೆಸರಲ್ಲಿ 17.75 ಕೋಟಿ ರು. ಸ್ಥಿರಾಸ್ತಿ ಮತ್ತು 17.75 ಲಕ್ಷ ರು. ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ತಮ್ಮ ಕೈಯಲ್ಲಿ 85 ಸಾವಿರ ರು. ನಗದು, ವಿವಿಧ ಬ್ಯಾಂಕುಗಳಲ್ಲಿ 5.31 ಲಕ್ಷ ರು. ಠೇವಣಿ, ಶೇರು, ಬಾಂಡ್‌ಗಳಲ್ಲಿ 6.55 ಲಕ್ಷ ರು. ಹೂಡಿಕೆ, 15.51 ಲಕ್ಷ ರು. ಉಳಿತಾಯ, 7.06 ಕೋಟಿ ರು. ಸಾಲ ನೀಡಿಕೆ, 4.51 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 7.39 ಕೋಟಿ ರು. ಚರಾಸ್ತಿ, ತಮ್ಮ ಪತ್ನಿ ಕೈಯಲ್ಲಿ 42 ಸಾವಿರ ರು. ನಗದು, 66 ಸಾವಿರ ರು. ಬ್ಯಾಂಕ್‌ ಠೇವಣಿ, 1.26 ಲಕ್ಷ ರು. ಹೂಡಿಕೆ, 2.80 ಲಕ್ಷ ರು. ಉಳಿತಾಯ, 25.35 ಲಕ್ಷ ರು. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 30.50 ಲಕ್ಷ ರು. ಮೌಲ್ಯದ ಚರಾಸ್ತಿ ಹಾಗೂ ಮೂವರು ಮಕ್ಕಳ ಹೆಸರಲ್ಲಿ ತಲಾ 3.35 ಕೋಟಿ ರು.ನಂತೆ ಒಟ್ಟು ಸುಮಾರು 10.05 ಕೋಟಿ ರು. ಮೌಲ್ಯದ ಶೇರು, ಡಿಬೆಂಚರ್‌ ಮತ್ತಿತರ ಹೂಡಿಕೆ ಹೊಂದಿರುವುದಾಗಿ ಘೋಷಿಸಿದ್ದಾರೆ. ಉಳಿದಂತೆ ತಮ್ಮ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎರಡು ಪ್ರಕರಣಗಳ ವಿಚಾರಣೆ ಬಾಕಿ ಇದೆ. ಯಾವುದೇ ಪ್ರಕರಣದಲ್ಲಿ ಆರೋಪ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ಪರಿಷತ್‌ ಚುನಾವಣೆ: 1224 ಕೋಟಿ ರು. ಆಸ್ತಿ ಒಡೆಯ MTB ನಾಗರಾಜ್‌!

ಅಲ್ಲದೆ, ತಮ್ಮ ಹೆಸರಲ್ಲಿ 10 ಕೋಟಿ ರು. ಮೌಲ್ಯದ 2.8 ಎಕರೆ ಕೃಷಿಯೇತರ ಭೂಮಿ, ಬೆಂಗಳೂರಿನ ಆರ್‌ಎಂಸಿ ಎಕ್ಸ್‌ಟೆನ್ಷನ್‌ನಲ್ಲಿ 5 ಕೋಟಿ ರು. ಮೌಲ್ಯದ 3399 ಚ.ಅಡಿ ವಿಸ್ತೀರ್ಣದ ನಿವಾಸಿ ಕಟ್ಟಡ ಸೇರಿ ಒಟ್ಟು 15 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ ಹೆಸರಲ್ಲಿ ಫ್ರೇಜರ್‌ ಟೌನ್‌ನಲ್ಲಿ 2.75 ಕೋಟಿ ರು. ಮೌಲ್ಯದ ಮನೆ ಇರುವುದಾಗಿ ಘೋಷಿಸಿದ್ದಾರೆ. ಇನ್ನು, ತಾವು ವಿವಿಧ ಬ್ಯಾಂಕುಗಳಲ್ಲಿ 13 ಕೋಟಿ ರು. ಸಾಲ, ತಮ್ಮ ಪತ್ನಿ 51 ಲಕ್ಷ ರು. ಸಾಲ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

click me!