* ಪರಂಪರೆ ಮುಂದುವರಿಕೆ
* ರತ್ನವರ್ಮ ಹೆಗ್ಗಡೆ ಬೆಳ್ತಂಗಡಿಯ ಮೊದಲ ಶಾಸಕ
* ಮಂಜಯ್ಯ ಹೆಗ್ಗಡೆ 15 ವರ್ಷ ಮದ್ರಾಸ್ ಶಾಸಕ
ಆತ್ಮಭೂಷಣ್
ಮಂಗಳೂರು (ಜು.7): ಸುಮಾರು ಆರು ದಶಕಗಳ ಬಳಿಕ ಭಾರತದ ಶಾಸನ ಸಭೆಯಲ್ಲಿ ಧರ್ಮಾಧಿಕಾರಿ ಪರಂಪರೆ ಮುಂದುವರಿದಿದೆ. ರಾಜ್ಯಸಭಾ ಸದಸ್ಯರಾಗಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಅವರು ನೇಮಕಗೊಳ್ಳುವುದರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಂಪರೆಗೆ ಬಹಳ ವರ್ಷಗಳ ಬಳಿಕ ಮತ್ತೆ ಶಾಸನ ಸಭೆಯಲ್ಲಿ
ಮುಂದುವರಿಯುವ ಭಾಗ್ಯ ಲಭಿಸಿದಂತಾಗಿದೆ.
ಡಾ. ಹೆಗ್ಗಡೆ ಕುಟುಂಬಕ್ಕೆ ಶಾಸನ ಸಭೆಯ ಅಧಿಕಾರ ಹೊಸದಲ್ಲ. ಹಿಂದಿನ ಪರಂಪರೆ ಈಗ ಮತ್ತೆ ಮುಂದುವರಿದಿದೆ, ಡಾ. ವೀರೇಂದ್ರ ಹೆಗ್ಗಡೆ ಅವರ ತಾತ ಹಾಗೂ ತಂದೆ ಕೂಡ ಈ ಹಿಂದೆ ಶಾಸನ ಸಭೆಯಲ್ಲಿ ಸದಸ್ಯರಾಗಿದ್ದರು ಎಂಬುದು ಉಲ್ಲೇಖನೀಯ. ಮಂಜಯ್ಯ ಹೆಗ್ಗಡೆ ಶಾಸನ ಸಭೆಗೆ: ಡಾ.ವೀರೇಂದ್ರ ಹೆಗ್ಗಡೆ ಅವರ ತಾತ
ಮಂಜಯ್ಯ ಹೆಗ್ಗಡೆ ಅವರು 1927ರಿಂದ 15 ವರ್ಷ ಕಾಲ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದರು. ಡಾ.ಹೆಗ್ಗಡೆ ಅವರ ತಂದೆ ರತ್ನವರ್ಮ ಹೆಗ್ಗಡೆ ಅವರು 1957ರಲ್ಲಿ ಬೆಳ್ತಂಗಡಿ ಅಸೆಂಬ್ಲಿ ಕ್ಷೇತ್ರದ ಪ್ರಥಮ ಕಾಂಗ್ರೆಸ್ ಶಾಸಕರಾಗಿದ್ದರು. 1967ರಲ್ಲಿ ಕಾಪುವಿನಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೂ ಗೆದ್ದಿರಲಿಲ್ಲ. ನಂತರ
ಆರು ದಶಕ ಕಳೆದಿದೆ. ಈಗ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯಸಭಾ ಸ್ಥಾನ ಬಯಸದೆ ಬಂದಿದೆ. ಹೀಗಾಗಿ ತಂದೆ, ತಾತ ಹಾಕಿಕೊಟ್ಟ ರಾಜನೀತಿಯಲ್ಲಿ ಡಾ.ಹೆಗ್ಗಡೆ ಅವರೂ ಸಾಗುವುದು ಸುಲಭವಾಗಲಿದೆ.
ವೀರೇಂದ್ರ ಹೆಗ್ಗಡೆ ಸಮಾಜ ಸೇವೆಗೆ ಪ್ರಧಾನಿ ಮೋದಿ ಗಿಫ್ಟ್, ರಾಜ್ಯಸಭೆಗೆ ನಾಮನಿರ್ದೇಶನ!
ರಾಜಕೀಯೇತರ ಸಾಧಕ: ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜಕೀಯೇತರ ಸಾಧಕ. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳದೆ ಸಾಧನೆ ಮಾತ್ರದಿಂದಲೇ ಇವರು ದೇಶ ಹಾಗೂ ಜಗತ್ತಿನ ಗಮನ ಸೆಳೆದಿದ್ದಾರೆ. ಸಾಧನೆ ಮಾತ್ರದಿಂದಲೇ ರಾಜ್ಯಸಭೆಗೆ ನೇಮಕಗೊಂಡ ಮೊದಲ ಶಾಸನ ಸಭಾ ಪ್ರತಿನಿಧಿ ಎಂಬ ಹೆಗ್ಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಪಾತ್ರರಾಗಿದ್ದಾರೆ. ಶಿಕ್ಷಣ, ದಾಸೋಹ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿರುವ ಡಾ.ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಾಭಿವೃದ್ಧಿ (Rural Development) ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರೆನಿಸಿದ್ದಾರೆ. ಇವರ ಈ ಸಾಧನೆ ಮನ್ನಿಸಿ ಪ್ರಧಾನಿ ನರೇಂದ್ರ ಮೋದಿ (Indian PM Nerndra Modi) 2015ರಲ್ಲಿ ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿದ ವೇಳೆ ಉಜಿರೆಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಡಾ.ಹೆಗ್ಗಡೆ ಕಾರ್ಯವನ್ನು ಕೊಂಡಾಡಿದ್ದರು.
2ನೇ ಜೈನ ಪ್ರತಿನಿಧಿ ಡಾ.ಹೆಗ್ಗಡೆ:
ಇದುವರೇ ಈಗ ಡಾ.ಹೆಗ್ಗಡೆ ಅವರಿಗೆ ರಾಜ್ಯಸಭಾ (Rajyasabha) ಸ್ಥಾನ ನೀಡುವ ಮೂಲಕ ಕೇಂದ್ರ ಸರ್ಕಾರ ದೇಶವ್ಯಾಪಿ ಕಾರ್ಯವಿಸ್ತಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ. ಕರಾವಳಿಯಲ್ಲಿ ಶಾಸನ ಸಭೆಯಲ್ಲಿ ಮೊದಲು ಪ್ರತಿನಿಧಿಸಿದ ಜೈನ ಸಮುದಾಯದ ಪ್ರತಿನಿಧಿ ವಿ. ಧನಂಜಯ ಕುಮಾರ್ ಸಂಸದರಾಗಿದ್ದರು. ಇದನ್ನು ಹೊರತುಪಡಿಸಿದರೆ ಇಲ್ಲಿಂದ ರಾಜ್ಯಸಭೆ ಪ್ರವೇಶಿಸುತ್ತಿರುವ ಮೊದಲ ಜೈನ ಸಮುದಾಯದ ಪ್ರತಿನಿಧಿ ಡಾ.ವೀರೇಂದ್ರ ಹೆಗ್ಗಡೆ ಎನ್ನುವುದು ಗಮನಾರ್ಹ.
ದಕ್ಷಿಣ ಭಾರತೀಯ ಎಲ್ಲ ರಾಜ್ಯಗಳಿಗೂ ಮೋದಿ ಗಿಫ್ಟ್
ಕರಾವಳಿಯಿಂದ ರಾಜ್ಯಸಭೆ ಪ್ರವೇಶಿಸಿದವರು...
ಕರಾವಳಿಯಿಂದ 1957ರಲ್ಲಿ ಪ್ರಥಮವಾಗಿ ಬೆನಗಲ್ ಶಿವರಾವ್ ರಾಜ್ಯಸಭೆಗೆ
ನೇಮಕಗೊಂಡಿದ್ದರು. 1970ರಲ್ಲಿ ಮೈಸೂರು ಪ್ರಾಂತ್ಯದಿಂದ ಬಂಟ್ವಾಳದ
ಡಾ.ನಾಗಪ್ಪ ಆಳ್ವ, ಬಳಿಕ ಮಂಗಳೂರಿನ ಬಿ.ವಿ.ಕಕ್ಕಿಲ್ಲಾಯ, 1972ರಿಂದ ಉಡುಪಿಯ
ಟಿ.ಎ.ಪೈ, 1974ರಲ್ಲಿ ಉತ್ತರ ಕನ್ನಡದಿಂದ ಮಾರ್ಗರೆಟ್ ಆಳ್ವ , 1980ರಲ್ಲಿ
ಮಂಗಳೂರಿನ ವಕೀಲ ಬಿ.ಇಬ್ರಾಹಿಂ, 1998ರಿಂದ 4 ಅವಧಿ ಉಡುಪಿಯ (Udupi) ಆಸ್ಕರ್ ಫರ್ನಾಂಡಿಸ್,
1994ರಿಂದ 2 ಬಾರಿ ಮಂಗಳೂರಿನ ಬಿ. ಜನಾರ್ದನ ಪೂಜಾರಿ (Janarrdhan Poojary) ರಾಜ್ಯಸಭೆಯನ್ನು ಪ್ರತಿನಿಧಿಸಿದ್ದರು.