ವೀರಶೈವ ಲಿಂಗಾಯತ ಮಹಾಧಿವೇಶನದಲ್ಲಿ ಹೊಸ ಆಲೋಚನೆಗಳು, ಸಮಾಜದ ಜ್ವಲಂತ ಸಮಸ್ಯೆಗೆ ಪರಿಹಾರೋಪಾಯಗಳಜೊತೆಗೆ ಸಮಾಜದ ಇಂದಿನ ಹಾಗೂ ಭವಿಷ್ಯದ ಪೀಳಿಗೆಗೆ ಹೊರಹೊಮ್ಮುವ ಪರಿಹಾರಗಳು ದಾರಿ ದೀಪವಾಗುವ ವಿಶ್ವಾಸವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ದಾವಣಗೆರೆ (ಡಿ.24): ವೀರಶೈವ ಲಿಂಗಾಯತ ಮಹಾಧಿವೇಶನದಲ್ಲಿ ಹೊಸ ಆಲೋಚನೆಗಳು, ಸಮಾಜದ ಜ್ವಲಂತ ಸಮಸ್ಯೆಗೆ ಪರಿಹಾರೋಪಾಯಗಳಜೊತೆಗೆ ಸಮಾಜದ ಇಂದಿನ ಹಾಗೂ ಭವಿಷ್ಯದ ಪೀಳಿಗೆಗೆ ಹೊರಹೊಮ್ಮುವ ಪರಿಹಾರಗಳು ದಾರಿ ದೀಪವಾಗುವ ವಿಶ್ವಾಸವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶನಿವಾರ ವೀರಶೈವ ಲಿಂಗಾಯತರ 24ನೇ ಮಹಾಧಿವೇಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾವಣಗೆರೆಯಲ್ಲಿ 2ನೇ ಬಾರಿಗೆ ನಡೆಯುತ್ತಿರುವ ಮಹಾ ಅಧಿವೇಶನ ಇಡೀ ಸಮಾಜಕ್ಕೆ ಹೊಸ ಸಂದೇಶ ನೀಡುವ, ಸಮಾಜದ ಒಗ್ಗಟ್ಟನ್ನು ಸಾರುವ ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದರು.
ಆಧುನಿಕ ಯುಗದಲ್ಲಿ ನಮ್ಮ ಯುಪ ಪೀಳಿಗೆ ಧರ್ಮ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಯಲು ಅಧಿವೇಶನದಲ್ಲಿ ಹರ-ಗುರು-ಚರಮೂರ್ತಿಗಳು, ಮುತ್ಸದ್ದಿ ನಾಯಕರು, ಯುವ ನಾಯಕರು, ಸಮಾಜದ ಹಿರಿಯರು ಮಾರ್ಗದರ್ಶನ ನೀಡುವರು. ದಶಗಳಿಂದಲೂ ನಮ್ಮ ಸಮುದಾಯವನ್ನು ವಿಘಟಿಸುವ ಅನೇಕ ಪ್ರಯತ್ನ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅಖಿಲ ಭಾರತ ವೀರಶೈವ ಮಹಾಸಭಾ ಗಟ್ಟಿ ನಿಲುವು ತಾಳಿ, ಸಮಾಜ ವಿಘಟನೆಗೆ ಯಾವತ್ತಿಗೂ ಅವಕಾಶ ನೀಡುವುದಿಲ್ಲ. ಹಿಂದೆಯೂ ನೀಡಿಲ್ಲ. ಮುಂದೆಯೂ ಮಹಾಸಭಾ ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ : ಚಕ್ರವರ್ತಿ ಸೂಲಿಬೆಲೆ
ವೀರಶೈವ ಲಿಂಗಾಯತ ಸಮಾಜ ಇಬ್ಭಾಗ ಮಾಡುವ ಯತ್ನ ಹಿಂದಿನಿಂದಲೂ ನಡೆಯುತ್ತಲೇ ಇದೆ. ಆಗೆಲ್ಲ ಗಟ್ಟಿಯಾಗಿ ನಿಂತವರು ಸಮಾಜದ ನಾಯಕರು. ಅದರಲ್ಲೂ ಹಿರಿಯರಾದ ಶತಾಯುಷಿ ಭೀಮಣ್ಣ ಖಂಡ್ರೆ ಹಾಗೂ ಹಾಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ. ತೀರಾ ಈಚೆಗೆ ಸಮಾಜ ಒಡೆಯುವ ಕೆಲಸ ನಡೆದಾಗ ಸಮಾಜದ ಪರ ಕಲ್ಲುಬಂಡೆಯಂತೆ ಗಟ್ಟಿಯಾಗಿ ನಿಂತವರು ಶಾಮನೂರು. ಬೇರೆ ಯಾರಾದರೂ ಆಗಿದ್ದರೆ ಸಮಾಜ ಇಬ್ಭಾಗವಾಗಿರುತ್ತಿತ್ತು.
- ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ಶ್ರೀಶೈಲ ಪೀಠ