ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಪಕ್ಷ ಸಂಘಟನೆಯ ಸಲುವಾಗಿ ನವ ಸಂಕಲ್ಪ ಶಿಬಿರವನ್ನು ಉಡುಪಿಯಲ್ಲಿ ಏರ್ಪಡಿಸಿದ್ದು, ಇದರ ಉದ್ಘಾಟನಾ ಭಾಷಣ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ ಕುಂದಾಪುರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಉಡುಪಿ (ಜೂ.25): ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಪಕ್ಷ ಸಂಘಟನೆಯ ಸಲುವಾಗಿ ನವ ಸಂಕಲ್ಪ ಶಿಬಿರವನ್ನು ಉಡುಪಿಯಲ್ಲಿ ಏರ್ಪಡಿಸಿದ್ದು, ಇದರ ಉದ್ಘಾಟನಾ ಭಾಷಣ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ ಕುಂದಾಪುರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವೇದಿಕೆಯಲ್ಲಿ ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ, ಭಾಷಣ ಮಾಡುತ್ತಿದ್ದ ವೀರಪ್ಪ ಮೊಯ್ಲಿಯವರ ಮಾತಿಗೆ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸಿ 'ಹಳೇ ಕಥೆ ಸಾಕು ಮುಂದೇನು..? ಪಕ್ಷ ಸಂಘಟಿಸಲು ಹೊಸತೇನಾದರೂ ಹೇಳಿ' ಎಂದು ಬಹಿರಂಗವಾಗಿ ಮೊಯ್ಲಿಯವರಿಗೆ ಕೇಳಿದ್ದಾರೆ. ಇದರಿಂದ ಮೊಯ್ಲಿಯವರು ಕಸಿವಿಸಿಗೊಂಡರು. ಈ ವೇಳೆ ತಕ್ಷಣ ಮದ್ಯ ಪ್ರವೇಶಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವೇದಿಕೆಯಿಂದ ಕೆಳಗಿಳಿದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ.
undefined
ಉಡುಪಿ: ಮೊಳೆಗಳನ್ನು ಬಳಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಶಶಾಂಕ್..!
ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದ ವೀರಪ್ಪ ಮೊಯ್ಲಿಯವರಿಗೆ ಕಾರ್ಯಕರ್ತರು ಈ ಪ್ರಶ್ನೆ ಕೇಳಿದ ನಂತರ ಕಾರ್ಯಕರ್ತರಿಗೆ ಬುದ್ದಿವಾದ ಹೇಳಿದ ಮೊಯ್ಲಿಯವರು ನಿಮ್ಮ ಬಳಿ ಏನಾದರೂ ಹೊಸ ವಿಷಯ ಇದ್ದರೆ ನೀವೇ ಹೇಳಿ, ನಿಮ್ಮ ಸಮಸ್ಯೆ ಏನು ಹೇಳಿ? ನಿಮಗೆ ನನ್ನ ಮಾತು ಬೇಡವಾದರೆ ನಿಲ್ಲಿಸುತ್ತೇನೆ. ನನಗೆ ಭಾಷಣ ಮಾಡುವ ಚಟ ಇಲ್ಲ ಎಂದು ಖಾರವಾದರು. ಕಾರ್ಯಾಗಾರದಲ್ಲಿ ಈ ವಿಚಾರಗಳನ್ನೆಲ್ಲ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಲು ಮಾನಸಿಕ ಸಿದ್ಧತೆ ಬೇಕು, ಕೆಲವು ವರ್ಗದವರಿಗೆ ನಾನು ಹೇಳುವ ಮಾತು ಕೇಳಲು ಕಷ್ಟವಾಗುತ್ತೆ, ಕಷ್ಟವಾದರೂ ಕೂಡ ನಾವು ಪಕ್ಷ ಕಟ್ಟಬೇಕು, ಕೇವಲ ಸ್ಲೋಗನ್ ಕೂಗಿದರೆ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಕಣ್ಣು-ಕಿವಿ ಇಲ್ಲದ ಭಂಡ ಸರಕಾರ: ರಾಜ್ಯದಲ್ಲಿ ಕಣ್ಣು-ಕಿವಿ ಇಲ್ಲದ ಭಂಡ ಸರ್ಕಾರ ಇದೆ. ದೇಶದ ಪುಣ್ಯಪುರುಷರ ಸಾಧನೆಗಳನ್ನು ಪಠ್ಯಯಲ್ಲಿ ತಿರುಚಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹೇಳಿದರು. ಶಾಲಾ ಪಠ್ಯದಲ್ಲಿ ಅಂಬೇಡ್ಕರ್ ಬಸವಣ್ಣ ಕುವೆಂಪುಗೆ ಅವಮಾನ ಆಗಿದೆ.ನಾರಾಯಣಗುರು ಭಗತ್ ಸಿಂಗ್ ಕನಕದಾಸರಿಗೆ ಅವಮಾನವಾಗಿದೆ.ಬಿಜೆಪಿ ಪಕ್ಷ ಸಾಮಾಜಿಕ ನ್ಯಾಯದ ಬದಲು ಶ್ರೇಣೀಕೃತ ಸಮಾಜ ಕಟ್ಟಲು ಮುಂದಾಗಿದೆ.ಬಿಜೆಪಿ ಕಚೇರಿಯಲ್ಲಿ ಸಮಾಜ ಸುಧಾರಕರ ಫೋಟೋಗಳೇ ಇರುವುದಿಲ್ಲ ಎಂದರು.
ಸಾವಿರಾರು ಕಿಮೀ ಕ್ರಮಿಸಿ ಕಳ್ಳರ ಹೆಡೆಮುರಿ ಕಟ್ಟಿದ ಉಡುಪಿ ಪೊಲೀಸ್..!
ಕಾಂಗ್ರೆಸ್ ಕಾಲದ ಪಠ್ಯದಲ್ಲಿ ತಪ್ಪಿದ್ದರೆ ಬಿಜೆಪಿ ಏಕೆ ಕಣ್ಮುಚ್ಚಿ ಕುಳಿತಿತ್ತು. ಬಿಜೆಪಿಗೆ ಪ್ರಶ್ನೆ ಎತ್ತುವ ಶಕ್ತಿ ಇರಲಿಲ್ಲವೇ? ಎಂದು ಧ್ರುವನಾರಾಯಣ ಪ್ರಶ್ನಿಸಿದರು. ಕಾಂಗ್ರೇಸ್ ಅವಧಿಯಲ್ಲಿ ಪಠ್ಯದಲ್ಲಿ 150 ತಪ್ಪು ಇತ್ತು ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಮಕ್ಕಳಿಗೆ ಆಗಿರುವ ತೊಂದರೆಗೆ ಸರಕಾರವೇ ನೇರ ಹೊಣೆ. ಟ್ಯುಟೋರಿಯಲ್ ಅಧ್ಯಾಪಕನನ್ನು ಪಠ್ಯ ಸಮಿತಿಗೆ ಹಾಕಿದ್ದು ಸರಿಯಾ? ಎಂದು ಪ್ರಶ್ನಿಸಿದರು.