ವರುಣಾದ ಜನರು ಸೋಮಣ್ಣಂಗೆ ಓಟು, ಸಿದ್ದರಾಮಯ್ಯಗೆ ಏಟು ಎಂದು ಘೋಷವಾಕ್ಯ ಹೇಳುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ 1): ಸಿದ್ದರಾಮಯ್ಯನವರೇ ದೊಡ್ಡ ಜಾತಿವಾದಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಗೊತ್ತು. ಹೀಗಾಗಿಯೇ ಮೈಸೂರಿಗೆ ಬಂದರೂ ಸಿದ್ದರಾಮಯ್ಯ ಪರವಾಗಿ ಪ್ರಚಾರಕ್ಕೆ ವರುಣಕ್ಕೆ ಯಾವ ಕಾಂಗ್ರೆಸ್ ನಾಯಕರು ಬರುತ್ತಿಲ್ಲ.ವರುಣಾದ ಜನರು ಸೋಮಣ್ಣಂಗೆ ಓಟು, ಸಿದ್ದರಾಮಯ್ಯಗೆ ಏಟು ಎಂದು ಘೋಷವಾಕ್ಯ ಹೇಳುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
undefined
ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಪರವಾಗಿ ಸೋಮವಾರಪೇಟೆಯಲ್ಲಿ ನಡೆದ ಬಹಿರಂಗ ಸಭೆ ಮತ್ತು ಪ್ರಚಾರ ಕಾರ್ಯದ ವೇಳೆ ಹೇಳಿದ್ದಾರೆ. ಸಿದ್ದರಾಮಯ್ಯ ಪರವಾಗಿ ರಮ್ಯ, ಶಿವರಾಜಕುಮಾರ್ ಮತ್ತು ದುನಿಯಾ ವಿಜಯ್ ಅವರನ್ನು ಸ್ಟಾರ್ ಕ್ಯಾಂಪೇನರ್ಗಳನ್ನಾಗಿ ಕರೆತರುತ್ತಿರುವ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು ಅವರನ್ನೆಲ್ಲಾ ಕರೆದುಕೊಂಡು ಬರಲಿ ಬಿಡಿ. ಆದರೆ ಪ್ರತಾಪ್ ಸಿಂಹನಿಗಿಂತ ಸ್ಟಾರ್ ಕ್ಯಾಂಪೇನರ್ ಯಾರು ಇಲ್ಲವೇ ಇಲ್ಲ ಎಂದು ಹೇಳಿದರು.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಘೋಷವಾಕ್ಯ: ವರುಣ ವಿಧಾನಸಭಾ ಕ್ಷೇತ್ರ ನನ್ನ ಕ್ಷೇತ್ರವಲ್ಲ, ಆದರೂ ಜನ ಯಾರಿಗೆ ಜೈಕಾರ ಹಾಕ್ತಾರೆ ಎನ್ನುವುದನ್ನು ಒಮ್ಮೆ ನೀವೆ ನೋಡಿ. ಬೇಕಾದರೆ ಸಿದ್ದರಾಮಯ್ಯ ಅವರು ಕೂಡ ಬರಲಿ, ಅಲ್ಲಿ ಸಿದ್ದರಾಮಯ್ಯ ಅವರಿಗೆ ಹೆಚ್ಚು ಜೈಕಾರ ಹಾಕ್ತಾರೋ ಇಲ್ಲ ಸೋಮಣ್ಣನಿಗೆ ಜೈಕಾರ ಹಾಕ್ತಾರೋ ನಿಮಗೆ ಗೊತ್ತಾಗುತ್ತದೆ. ಸೋಮಣ್ಣಂಗೆ ಓಟು ಸಿದ್ದರಾಮಯ್ಯಂಗೆ ಏಟು ಅಂತ ವರುಣದಲ್ಲಿ ಈಗಾಗಲೇ ಒಂದು ಘೋಷವಾಕ್ಯ ಶುರುವಾಗಿದೆ. ಮೈಸೂರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಬರ್ತಾರೆ, ಆದರೆ ವರುಣಕ್ಕೆ ಬರಲ್ಲ.
ಮೋದಿಗೆ ವಿಷ ಸರ್ಪ, ನಾಲಾಯಕ್ ಎಂದಿದ್ದಾಯ್ತು! ಈಗ ಮನುಷ್ಯತ್ವ ಇಲ್ಲದ ಪ್ರಧಾನಿಯಂತೆ!
ವರುಣಾ ಕ್ಷೇತ್ರಕ್ಕೆ ಬಾರದ ಕಾಂಗ್ರೆಸ್ ನಾಯಕರು: ಡಿಕೆ. ಶಿವಕುಮಾರ್, ಕೆ.ಹೆಚ್. ಮುನಿಯಪ್ಪ, ಜಿ.ಪರಮೇಶ್ವರ್ ಎಲ್ಲರೂ ಮೈಸೂರಿಗೆ ಬರುತ್ತಾರೆ. ಆದರೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಮಾತ್ರ ಬರುವುದಿಲ್ಲ ಯಾಕೆ? ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಒಬ್ಬ ಜಾತಿವಾದಿ ಅಂತ ಗೊತ್ತಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಜೀವನವನ್ನು ಮುಗಿಸಿದವರು ಸಿದ್ದರಾಮಯ್ಯ. ಕೊರಟಗೆರೆಯಲ್ಲಿ 2013 ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು, ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಗೆ ಮಾರಕ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಯಾವೊಬ್ಬ ನಾಯಕರೂ ಕೂಡ ವರುಣಾದಲ್ಲಿ ಪ್ರಚಾರಕ್ಕೆ ಬರುತ್ತಿಲ್ಲ ಎಂದರು.
ಸೋಲಿನ ಭಯದಿಂದ ಬಿಜೆಪಿಗರ ಮೇಲೆ ಹಲ್ಲೆ: ತಮ್ಮ ಪರವಾಗಿ ಯಾರೊಬ್ಬರೂ ಪ್ರಚಾರಕ್ಕೆ ಬರುವುದಿಲ್ಲ ಎಂಬುದನ್ನರಿತ ಸಿದ್ದರಾಮಯ್ಯ ಅವರು ತಮ್ಮ ಪರವಾಗಿ ಪ್ರಚಾರಕ್ಕಾಗಿ ಸ್ಟಾರ್ ಕ್ಯಾಂಪೈನರ್‌ಗಳನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ವರುಣಾದಲ್ಲಿ ಸೋಲಿನ ಭಯ ಕಾಡುತ್ತಿದೆ. ಆ ಹತಾಶೆಯಿಂದ ಅವರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮತ್ತು ಅವರ ಸ್ವಜಾತಿಯವರಿಂದ ಸಿದ್ದರಾಮಯ್ಯ ಆಕ್ರಮಣ ಮಾಡಿಸುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮನ ಹುಂಡಿಯಲ್ಲೂ ರಾಮಭಕ್ತರಿಗೆ ಬೆಲೆಯಿದೆ: ಇವತ್ತು ಕೂಡ ನಮ್ಮ ಬೂತ್ ಅಧ್ಯಕ್ಷನ ಮೇಲೆ ದಾಳಿ ಆಗಿದೆ. ಆತನ ತಲೆಗೆ ಹೊಡೆದು ಗಂಭೀರ ಗಾಯವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರ ವಿರುದ್ಧ ಈಗ ಕೇಸು ಆಗುತ್ತಿದೆ. ನಾನು ಸೋಮಣ್ಣನವರು ಇರುವಾಗಲೂ ಕಲ್ಲುತೂರಿದ್ದರು. ನಮ್ಮ ಕಾರ್ಯಕರ್ತ ನಾಗೇಶ್ ನ ಕೈ ಮುರಿದಿದೆ. ವರುಣ ಕ್ಷೇತ್ರದ ಒಂದು ಊರಿಗೆ ಹೋದರೆ ಗಲಾಟೆ ಆಗುತ್ತೆ. ಅಲ್ಲಿ ನೊಗವಿಟ್ಟು ಇಲ್ಲಿ ಬರಬೇಡಿ ಎಂದು ಗಲಾಟೆ ಮಾಡ್ತಾರೆ. ಸಿದ್ದರಾಮನ ಹುಂಡಿಯಲ್ಲೂ ರಾಮಭಕ್ತರಿಗೆ ಬೆಲೆ ಇದೆ. ರಾಮನ ಬಂಟನಾದ ಆಂಜನೇಯನ ಜನ್ಮದಿನವನ್ನು ಕೂಡ ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ.
ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ!
ಸಿದ್ದರಾಮಯ್ಯ ಜಾತಿ ರಾಜಕಾರಣ ಅಂತ್ಯ: ಇವತ್ತೇ ಆಂಜನೇಯ ಹುಟ್ಟಿದ್ದು ಅಂತ ನಿನಗೇನು ಗೊತ್ತಾ ಎಂದು ಕಳೆದ ವರ್ಷವೂ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಖಂಡಿತ ಮೈಸೂರಿನ ಜನ ಅವರಿಗೆ ಆಶಿರ್ವಾದ ಮಾಡದೆ, ತಕ್ಕ ಪಾಠ ಕಲಿಸುತ್ತಾರೆ ಎಂದರು. 13 ನೇ ತಾರೀಕು ಬಿಜೆಪಿ ಪರವಾಗಿ ಫಲಿತಾಂಶ ಬರುತ್ತದೆ. ವಿ ಸೋಮಣ್ಣ ಅವರು ಗೆಲ್ಲುತ್ತಾರೆ. ಜಾತಿ ಜಾತಿಗಳನ್ನು ಹೊಡೆಯುವ ಸಿದ್ದರಾಮಯ್ಯನವರ ರಾಜಕಾರಣ ಅಂದು ಅಂತ್ಯವಾಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.