ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅಪರಾಧಿ ಅಲ್ಲ, ಅವರೇಕೆ ಹುದ್ದೆ ಬಿಡಬೇಕು: ತಂಗಡಗಿ

Kannadaprabha News   | Kannada Prabha
Published : Aug 12, 2026, 06:52 AM IST
Valmiki corporation Scam Minister Tangadagi Bats for B Nagendra

ಸಾರಾಂಶ

ಸಚಿವ ನಾಗೇಂದ್ರ ಅವರು ಕೇವಲ ಆರೋಪಿಯಾಗಿದ್ದು, ಅಪರಾಧಿಯಲ್ಲ, ಹಾಗಾಗಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಬಿಜೆಪಿಯ ಅನೇಕ ನಾಯಕರು ಬೇಲ್ ಮೇಲೆ ಇದ್ದು, ರಾಮಮಂದಿರದ ಹುಂಡಿ ಹಣ ಹೊಡೆದಿದ್ದಾರೆ, ಅವರಿಗೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ ಎಂದು ಅವರು ತಿರುಗೇಟು

ಕೊಪ್ಪಳ (ಆ.12): ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಬೇಕು. ಅವರೇನು ಅಪರಾಧಿಗಳಲ್ಲ, ಬರಿ ಆರೋಪಿ ಅಷ್ಟೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾಕೆ ಹೋರಾಟ ಮಾಡುತ್ತಾರೆ. ಅವರಲ್ಲಿ ಎಷ್ಟು ನಾಯಕರು ಬೇಲ್ ಮೇಲೆ ಇಲ್ಲ ಎಂದು ಕುಟುಕಿದರು.

ಬಿಜೆಪಿ ಮಾಡೋದೆಲ್ಲ ಒಳ್ಳೆಯದು, ಕಾಂಗ್ರೆಸ್‌ನವರು ಮಾಡಿದ್ರೆ ಕೆಟ್ಟದ್ದಾ?

ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರಿಗೆ ಈ ಕುರಿತು ಪ್ರಶ್ನೆ ಮಾಡುವ ಅಧಿಕಾರವೇ ಇಲ್ಲ. ಅವರೇ ಯಾವ ಯಾವ ಕೇಸ್‌ನಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲವೇ, ಅದಿರು ಹಗರಣ ಬಗ್ಗೆ ಜನರಿಗೆ ಗೊತ್ತಿಲ್ಲವೇ ಎಂದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಈಗ ನಾನು ಏಟು ತಿಂದ ಹುಲಿ, ಬಿಜೆಪಿ ಆರೋಪಕ್ಕೆ ಉತ್ತರಿಸುವೆ -ನಾಗೇಂದ್ರ

ಬಿಜೆಪಿಯವರು ತಾವು ಮಾಡಿದ್ದೆಲ್ಲ ಒಳ್ಳೆಯದು, ಕಾಂಗ್ರೆಸ್ ನವರು ಮಾಡಿದರೆ ಕೆಟ್ಟದ್ದಾ? ಬಿಜೆಪಿಯವರು ರಾಮರಾಮ ಎಂದು ರಾಮಮಂದಿರ ನಿರ್ಮಾಣ ಮಾಡಿ ರಾಮನ ಹುಂಡಿ ಹೊಡೆದರಲ್ಲ, ಇದಕ್ಕೆ ಏನು ಹೇಳುತ್ತಾರೆ ಎಂದರು.

ಇದನ್ನೂ ಓದಿ: B Nagendra: ಕೋರ್ಟ್‌ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: ಇಡಿ ತನಿಖೆ, ಸಾಕ್ಷ್ಯ ಸಿಕ್ಕರೆ ಏನಾಗುತ್ತೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಾಲ್ಮೀಕಿ ನಿಗಮ ಹಗರಣ: ಈಗ ನಾನು ಏಟು ತಿಂದ ಹುಲಿ, ಬಿಜೆಪಿ ಆರೋಪಕ್ಕೆ ಉತ್ತರಿಸುವೆ -ನಾಗೇಂದ್ರ
'ನನ್ನ ಮುಂದೆಯೇ ನಿಂತು ಪತ್ರ ಟೈಪ್ ಮಾಡಿಸಿ ಸಹಿ ಹಾಕಿಸಿದ್ರು..' ಸಭಾಪತಿ ಸ್ಥಾನಕ್ಕೆ ರಾಜೀನಾಮೆ, ಹೊರಟ್ಟಿ ಸ್ಫೋಟಕ ಹೇಳಿಕೆ