ವಾಲ್ಮೀಕಿ ನಿಗಮದ ಕೇಸ್‌ನಲ್ಲಿ ಯಾರನ್ನೂ ರಕ್ಷಣೆ ಮಾಡೊಲ್ಲ, ಆದ್ರೆ ಸಾಕ್ಷಿ ಬೇಕಿದೆ; ಡಿ.ಕೆ. ಶಿವಕುಮಾರ್

By Sathish Kumar KH  |  First Published Jun 1, 2024, 1:53 PM IST

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ಯಾರೊಬ್ಬರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ, ಎಲ್ಲದಕ್ಕೂ ಸಾಕ್ಷಿಗಳ ಅಗತ್ಯವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.


ಬೆಂಗಳೂರು (ಜೂ. 1): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆರದ ಹಗರದಣದ ಕುರಿತು ನಾವು ಯಾರನ್ನೂ ರಕ್ಷಣೆ ಮಾಡೋದಿಲ್ಲ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಿ, ಅವರ ರಾಜಕಾರಣ ಅವರು ಮಾಡ್ತಾರೆ. ಬೇಕಾದಷ್ಟು ವಿಚಾರಗಳಿವೆ ನಾನು ಯಾವುದನ್ನು ಪ್ರಶ್ನೆ ಮಾಡೊದಿಲ್ಲ. ಬಿಜೆಪಿ ಸರ್ಕಾರದಲ್ಲೂ ಈ ರೀತಿ ವಿಚಾರಗಳು ನಡೆದಿವೆ. ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲರಿಗೂ ಗೊತ್ತಿದೆ. ಎಲ್ಲಾ ವಿಚಾರಣೆಗಳು ಮಾಡಬೇಕಿದೆ ನಾವು ಮಾಡ್ತೀವಿ. ನಾವು ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬಿಜೆಪಿ ವಿರುದ್ಧದ ಶೇ.40 ಭ್ರಷ್ಟಾಚಾರ ಆರೋಪ ಮಾಡಿದ ಕೇಸ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್‌ನಲ್ಲಿ ಯಾರನ್ನೂ ರಕ್ಷಣೆ ಮಾಡೋದಿಲ್ಲ. ಇಂತಹ ಹಗರಣಗಳು ಬಿಜೆಪಿ ಅವಧಿಯಲ್ಲಿಯೂ ನಡೆದಿವೆ. ಇನ್ನು ಸರ್ಕಾರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರ ಹೆಸರು ನೇರವಾಗಿ ಬಳಕೆ ಮಾಡಿ ಉಲ್ಲೇಖ ಮಾಡಿದ್ದರು. ಆದ್ರೆ, ಈ ಪ್ರಕರಣದಲ್ಲಿ ಹೇಳಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ ಅಂತ ಹೇಳಿದ್ದಾರೆ ಎಂದರು.

Latest Videos

undefined

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಜಾಮೀನು ಮಂಜೂರು

ವಾಲ್ಮೀಕಿ ನಿಮಗದ ಕೇಸ್‌ನಲ್ಲಿ ನಮಗೇನಾದ್ರು ದಾಖಲೆ ಫ್ರೋಫ್ ಇನ್ವಾಲ್ಮೆಂಟ್ ಏನಾದರೂ ಇದ್ದರೆ, ನಮ್ಮ‌ ಸರ್ಕಾರ ಏನ್ ಮಾಡಬೇಕೋ ಪಾರದರ್ಶಕವಾಗಿ ತೆನಿಖೆ ಮಾಡಿಸುತ್ತದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲಿ ಬರೋದಿಲ್ಲ..ಕ್ರಮ ಕೈಗೊಳ್ಳುತ್ತೇವೆ. ದುಡ್ಡು ನಮಗೆ ಮುಖ್ಯವಲ್ಲ, ಅಧಿಕಾರಿಗಳು ಎಲ್ಲಿಲ್ಲಿ ಹೋಗಿ ಏನ್ ಮಾಡಿದ್ದಾರೆ ಅನ್ನೋದನ್ನ ಟ್ರೇಸ್ ಮಾಡ್ತಿದ್ದಾರೆ. ನಮಗೆ ಒಂದರೆಡು ದಿನ ಟೈಂ ಬೇಕು. ಕೆಲವೊಂದು ಅರೆಸ್ಟ್ ಆಗಿದೆ, ಏನ್ ಅಕ್ಷನ್ ತಗೋಬೇಕು ಅಂತ ಕೂಡ ಆಗಿದೆ. ಹಿಂದೆಯಲ್ಲ ನಾವು ಮಾದರಿಯಾಗಿದ್ದೇವೆ, ಮಿನಿಸ್ಟರ್ ಸಹ ಸಿಎಂ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌಖಿಕ ಆದೇಶ ಮೇರಿಗೆ ಹಣ ವರ್ಗಾವಣೆ ಆಗಿದೆ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿ, ಹಿಂದೆ ಒಬ್ಬ ರವಿ ಅಂತ ನನ್ನ ಮೇಲೆ ಆರೋಪ ಮಾಡಿದ್ದನು. ನಾನು ಅವನು ಇಬ್ಬರು ಪಾರ್ಟ್ನರ್ಸ್ ಇಬ್ಬರು ಹಂಚಿಕೊಂಡಿದ್ದೀವಿ. ಯೂನಿಯನ್ ಬ್ಯಾಂಕ್ ನಿಂದ ಸಿಬಿಐ ತೆನಿಖೆ ಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ, ಇರ್ಲಿ ಇರಲಿ ತಪ್ಪಿಲ್ಲ. ಒಂದು ಪ್ರೋಸಿಜರ್ ಇದೆ. ಇಷ್ಟು ಕೋಟಿ ಇದ್ದಾಗ ನಾನು ಕೊಡ್ಲಿ ಅಥಾವ ನೀವು ಕೊಡದೆ ಇದ್ರು ಕೂಡ ಅದು ಸಿಬಿಐಗೆ ಹೋಗುತ್ತೆ... ಅದು ಒಂದು ಪ್ರೋಸಿಜರ್. ಇದರ ಬಗ್ಗೆ ನಮಗೆ ಗೊತ್ತಿಲ್ಲ ಅಂತ ತಿಳಿದುಕೊಳ್ಳಬೇಡಿ. ಒಂದಿಷ್ಟು ಅಮೌಂಟ್ ಆದ್ಮೇಲೆ ಯಾವುದಾದರೂ ಬ್ಯಾಂಕ್ ನಲ್ಲಿ ಹೀಗೆ  ಆದ್ರೆ ಯಾವ ಸರ್ಕಾರವೂ ಕೊಡಬೇಕು ಅಂತಿಲ್ಲ..ಅವರು ತಗೋಬೇಕು ಅಂತೇನು ಇಲ್ಲ. ನ್ಯಾಚುರಲ್ ಆಗಿ ಅದು ಸಿಬಿಐ ತೆನಿಖೆಗೆ ಹೋಗುತ್ತದೆ. ಸದ್ಯಕ್ಕೆ ಸಿಬಿಐ ಸಂದರ್ಭ ಇಲ್ಲ ನಾವೇ ತೆನಿಖೆ ಮಾಡ್ತೀವಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೊಪ ಕೇಸ್:
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮಾಡಲಾಗಿದೆ ಎಂದು ರೇಟ್ ಕಾರ್ಡ್‌ ಫಿಕ್ಸ್ ಮಾಡಿದ್ದರಿಂದ ನನಗೆ, ಸಿದ್ದರಾಮಯ್ಯ ನವರಿಗೆ, ರಾಹುಲ್ ಗಾಂಧಿ ಯವರಿಗೆ ಕೋರ್ಟ್ ನೋಟಿಸ್ ಕೊಟ್ಟು ಸಮನ್ಸ್ ಕೂಡ ಕೊಡಲಾಗಿತ್ತು. ರಾಹುಲ್ ಗಾಂಧಿ ಯವರು ಬರಬೇಕು ಅಂದುಕೊಂಡಿದ್ದರು. ಆದರೆ ಇಂಡಿಯಾ ಸಭೆಯಿಂದ ಅವರು ಬರೋಕೆ ಆಗಿಲ್ಲ. ನಾನು ಸಿಎಂ ಬಂದಿದ್ದೇವೆ. ಬಿಜೆಪಿ ಯವರು ಇದ್ದಾರಲ್ಲ ಭ್ರಷ್ಟರು. ಇಡೀ ದೇಶದಲ್ಲಿ ಬಿಜೆಪಿ ಭ್ರಷ್ಟವಾಗಿದೆ. ನಾವು ಏನೋ ಹೋಗಲಿ ಅಂತಾ ಸುಮ್ಮನಿದ್ದೆವು. ಅವರು ನಮ್ಮನ್ನು ಬಯಲು ಮಾಡಲಿ, ಬಯಲು ಮಾಡಲಿ ಅಂತಾ ಕರೀತ್ತಿದ್ದಾರೆ. ನಾವು ಅದಕ್ಕೆ ಏನು ಅಂತಾ ತೋರಿಸ್ತೀವಿ. ನಮ್ಮ ಮೇಲೆ ಏನು ಖಾಸಗಿ ದೂರು ಕೊಟ್ಟವರಲ್ಲ ಎಂದು ಹೇಳಿದರು.

ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಯಾವ್ಯಾವ ಕಂಪನಿಗೆ ಎಷ್ಟೆಷ್ಟು ಹಣ ವರ್ಗಾವಣೆ ಆಗಿದೆ ಗೊತ್ತಾ..?

ಸಿಎಂ ಸ್ಥಾನಕ್ಕೆ 2500 ಕೋಟಿ ಆಫರ್ ಆಗಿದೆ ಎಂದು ಬಿಜೆಪಿಯ ಶಾಸಕ ಯತ್ನಾಳ್ ಅವರೇ ಮಾತನಾಡಿದ್ದರು. ಈ ಬಗ್ಗೆ ನಾವು ಜಾಹೀರಾತು ಕೊಟ್ಟಿದ್ದೆವು ಎಂದು ಪತ್ರಿಕೆಯ ಹೆಡ್‌ಲೈನ್ ನೋಡಿ ಎಂದು ಮಾಧ್ಯಮಗಳಿಗೆ ತೋರಿಸಿದರು. ಅವರು ಹೇಳಿದ್ದನ್ನು ನಾವು ಜನರಿಗೆ ತಿಳಿಸಿದ್ದೇವೆ. ನನ್ನ ಮೇಲೆ ಸಿದ್ದರಾಮಯ್ಯ ನವರ ಮೇಲಿರಲಿ. ಏನೋ ದೊಡ್ಡದಾಗಿ ಬರುತ್ತೆ ಅಂತಾ ರಾಹುಲ್ ಗಾಂಧಿ ಮೇಲೂ ಹಾಕಿಬಿಟ್ಟಿದ್ದಾರೆ. ನಾವು ಏನು ಅಂತಾ ಗೊತ್ತಿದೆ, ನಾವು ಪಾಲಿಟಿಕ್ಸ್ ಮಾಡಬೇಕಾ..? ರಾಹುಲ್ ಗಾಂಧಿ ಯವರು ವಿಚಾರಣೆಗೆ ಬರ್ತಾರೆ. ಅವರು ಕೋರ್ಟ್ ಗೆ ಗೌರವ ಕೊಡ್ತಾರೆ. ಇದನ್ನು ನಾವು ಫೈಟ್ ಮಾಡ್ತೀವಿ, ಇದನ್ನು ನಾವು ಫ್ರೂವ್ ಮಾಡಿ ತೋರಿಸ್ತೀವಿ ಎಂದು ಹೇಳಿದರು.

click me!