ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿ ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ: ಸಚಿವ ಮಂಕಾಳು ವೈದ್ಯ

By Ravi Janekal  |  First Published Jun 19, 2024, 5:10 PM IST

ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಬಡವರಿಗಾಗಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ಲಿ ಎಂಬ ಉದ್ದೇಶಕ್ಕೆ ಯೋಜನೆ ಜಾರಿಗೆ ತಂದಿಲ್ಲ ಎಂದು ಸಚಿವ ಮಂಕಾಳು ವೈದ್ಯ ನುಡಿದರು.


ಕಾರವಾರ, ಉತ್ತರಕನ್ನಡ (ಜೂ.19): ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಬಡವರಿಗಾಗಿ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ಲಿ ಎಂಬ ಉದ್ದೇಶಕ್ಕೆ ಯೋಜನೆ ಜಾರಿಗೆ ತಂದಿಲ್ಲ ಎಂದು ಸಚಿವ ಮಂಕಾಳು ವೈದ್ಯ ನುಡಿದರು.

ಇಂದು ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಜನೆ ಕೊಡಬೇಕಾದ್ರೆ ನಮಗೆ ಮತ ಹಾಕಿ ಅಂತಾ ಎಲ್ಲಿಯೂ ಹೇಳಿಲ್ಲ.  ನಮ್ಮ ಗ್ಯಾರಂಟಿ ಯೋಜನೆಗೂ, ಚುನಾವಣೆ ಹಿನ್ನೆಡೆಗೂ ಸಂಬಂಧ ಇಲ್ಲ. ನಮ್ಮ ಯೋಜನೆಯಿಂದ ರಾಜ್ಯದ ಕೋಟ್ಯಂತರ ಬಡವರಿಗೆ ಅನುಕೂಲ ಆಗಿರುವ ಬಗ್ಗೆ ಸಂತಸವಿದೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆ ಆಗಿರುವುದಕ್ಕೆ ಅಸಮಾಧಾನ ಇದೆ. ಇಷ್ಟು ಸಹಾಯ ಮಾಡಿದ್ರೂ ಜನ ನಮಗೆ ಮತ ಹಾಕದಿರುವುದರ ಬಗ್ಗೆ ನೋವು ಇದೆ. ಆದ್ರೆ ಏನ್ ಮಾಡೊಕೆ ಆಗುತ್ತೆ? ಇನ್ನಷ್ಟು ಕೆಲಸ ಮಾಡಿ ಮತ ಸೆಳೆಯುವ ಕೆಲಸ ಮಾಡುತ್ತೇವೆ ಎಂದರು.

Tap to resize

Latest Videos

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ನಾಲಾಯಕ್: ಶಾಸಕ ಜನಾರ್ದನ ರೆಡ್ಡಿ

ಉತ್ತರಕನ್ನಡ ಕ್ಷೇತ್ರದಲ್ಲಿ ಕಳೆದ ಆರು ಬಾರಿ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಈ ಹಿಂದೆಯೂ ಎರಡು ಲಕ್ಷ, ಮೂರು ಲಕ್ಷ ಅಂತರದಲ್ಲಿ ಕಾಂಗ್ರೆಸ್ ಸೋತಿದೆ. ಈ ಹಿಂದೆ ಇದ್ದ ಯಾವ ಸಚಿವರ ತಲೆದಂಡವೂ ಆಗಿಲ್ಲ. ಹಾಗಾಗಿ ಈ ಬಾರಿ ನನ್ನ ತಲೆ ದಂಡ ಆಗುವ ಪ್ರಶ್ನೆಯೇ ಇಲ್ಲ ಎಂದರು. ಇದೇ ವೇಳೆ ಆರ್.ವಿ. ದೇಶಪಾಂಡೆ ಸಚಿವರಾಗಬೇಕೆಂದು ನಾನೂ ಆಶಿಸುತ್ತೇನೆ. ದೇಶಪಾಂಡೆ ನಮ್ಮ ಪಕ್ಷದ, ಈ ಜಿಲ್ಲೆಯ ಹಿರಿಯ ನಾಯಕರು. ದೇಶಪಾಂಡೆ ಸಂಪುಟಕ್ಕೆ ಸೇರುವುದಕ್ಕೆ ಅರ್ಹ ವ್ಯಕ್ತಿ. ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅವರಿಗೆ ಕೊಡಬೇಕೋ? 

'ನಾನೀಗ ಕೇಂದ್ರ ಸಚಿವ..' ದರ್ಶನ್ ಬಂಧನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್‌ಡಿಕೆ

ನಾನೇ ಮುಂದುವರಿಯಬೇಕೊ..? ಅನ್ನೋದನ್ನ ನಮ್ಮ ಪಕ್ಷದ ಹೈ-ಕಮಾಂಡ್ ಹಾಗೂ ವರಿಷ್ಠರು ನಿರ್ಧರಿಸುತ್ತಾರೆ. ಆದ್ರೆ, ದೇಶಪಾಂಡೆ ಮಂತ್ರಿ ಆಗಲಿ ಎಂದು ಮುಕ್ತ ಮನಸ್ಸಿನಿಂದ ಆಶಿಸುತ್ತೇನೆ ಎಂದರು.

click me!