Uttar Pradesh ಯೋಗಿ ಜೊತೆ ಇಬ್ಬರು ಉಪಮುಖ್ಯಮಂತ್ರಿ, 47 ಸಚಿವರ ಪ್ರಮಾಣವಚನ, 70 ನಾಯಕರಿಗೆ RT PCR ಟೆಸ್ಟ್!

Published : Mar 25, 2022, 12:17 PM IST
Uttar Pradesh ಯೋಗಿ ಜೊತೆ ಇಬ್ಬರು ಉಪಮುಖ್ಯಮಂತ್ರಿ, 47 ಸಚಿವರ ಪ್ರಮಾಣವಚನ, 70 ನಾಯಕರಿಗೆ RT PCR ಟೆಸ್ಟ್!

ಸಾರಾಂಶ

ಸಂಜೆ ನಾಲ್ಕು ಗಂಟೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಯೋಗಿ ಪ್ರಮಾಣವಚನ ಇಬ್ಬರು ಉಪಮುಖ್ಯಮಂತ್ರಿ ಹಾಗೂ 47 ಸಚಿವರ ಪ್ರಮಾಣ ವಚನ ಪ್ರಮಾಣವಚನ ಸಮಾರಂಭಕ್ಕೆ ಬರುವ ಎಲ್ಲರಿಗೂ ಆರ್ ಟಿಪಿಸಿಆರ್ ಟೆಸ್ಟ್

ಲಕ್ನೋ (ಮಾ.25): ಯೋಗಿ ಆದಿತ್ಯನಾಥ್ (Yogi Adityanath) ಶುಕ್ರವಾರ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ (Uttar Pradesh CM) ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದು, ಹೊಸ ಸಂಪುಟದಲ್ಲಿ ಪ್ರಮಾಣ ವಚನ (Oath Ceremony) ಸ್ವೀಕರಿಸುವ ಸಚಿವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಯೋಗಿ 2.0 (Yogi Adityanath 2.0) ಸರ್ಕಾರದಲ್ಲಿ ಮಂತ್ರಿಗಳನ್ನು ನಿರ್ಧರಿಸುವಾಗ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 2024 ರ ಲೋಕಸಭೆ ಚುನಾವಣೆಯ ಮೇಲೆ ಗಮನವಿಟ್ಟು ನಿರ್ಧಾರ ಮಾಡಲಿದೆ ಎಂದು ಹಲವಾರು ವರದಿಗಳು ಸೂಚಿಸಿವೆ. ಯೋಗಿ ಕ್ಯಾಬಿನೆಟ್ 2.0 ಒಬಿಸಿ ಮತ್ತು ದಲಿತರಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಉತ್ತರ ಪ್ರದೇಶದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ(Ekana Stadium) ಸಂಜೆ ನಾಲ್ಕು ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮೂಲಗಳ ಪ್ರಕಾರ ಯೋಗಿ ಆದಿತ್ಯನಾಥ್ ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳು (Deputy CM) ಹಾಗೂ 47 ಸಚಿವರು ಕೂಡ ಪ್ರಮಾಣ ತೆಗೆದುಕೊಳ್ಳಲಿದ್ದಾರೆ. 7 ರಿಂದ 8 ಮಹಿಳಾ ಸಚಿವರು ಕೂಡ ಈ ಬಾರಿ ಇರಲಿದ್ದಾರೆ ಎಂದು ಹೇಳಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳಿಗೆ ಆರ್ ಟಿಪಿಸಿಆರ್ ಟೆಸ್ಟ್ (RTPCR Test) ಕಡ್ಡಾಯ ಮಾಡಲಾಗಿದ್ದು, ಈಗಾಗಲೇ 70 ಜನರಿಗೆ ಟೆಸ್ಟ್ ಕೂಡ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ವಿಪಕ್ಷ ನಾಯಕ ಅಖಿಲೇಶ್ ಯಾದವ್, ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಹಾಗೂ ಮಾಯಾವತಿ ಕೂಡ ಸಮಾರಂಭದಲ್ಲಿ ಇರಲಿದ್ದಾರೆ. ಯಾವುದೇ ಸಚಿವರ ಹೆಸರನ್ನು ಇನ್ನೂ ಬಹಿರಂಗ ಮಾಡಲಾಗಿಲ್ಲ. ಕೆಲವು ಹಳೆಯ ಸಚಿವರು ಮತ್ತು ಯುವ ಮುಖಗಳು ಗಮನ ಸೆಳೆದಿರುವ ವರದಿಗಳಿವೆ. ಏಕನಾ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಭರದ ಸಿದ್ಧತೆ ನಡೆದಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರು, ಶಾಸಕರು, ಎಂಎಲ್‌ಸಿಗಳ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಯಾರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಬಂದಿರುತ್ತದೆಯೋ ಅವರು ಮಾತ್ರ ವೇದಿಕೆಯಲ್ಲಿರುತ್ತಾರೆ ಎಂದು ಹೇಳಲಾಗುತ್ತಿದೆ. ಸುಮಾರು 70 ನಾಯಕರ ಕೊರೊನಾ ಪರೀಕ್ಷೆ ನಡೆಸಲಾಗಿದೆ.

ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಖುಷಿಯಲ್ಲಿ ಇಂದು ಗೋರಖ್ ಪುರದ ಗೋರಖನಾಥ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪ್ರಮಾಣ ವಚನ ಸ್ವೀಕಾರದ ಬಳಿಕ ಪಟಾಕಿ ಸಿಡಿಸಿ ಸಿಹಿ ಹಂಚಲಾಗುತ್ತದೆ.

ಉತ್ತರಪ್ರದೇಶ ಸಿಎಂ ಆಗಿ ಇಂದು ಯೋಗಿ ಆದಿತ್ಯನಾಥ್ ಪ್ರಮಾಣ ಸ್ವೀಕಾರ

ಸಂಘಟನಾ ಸಚಿವ ಸುನಿಲ್ ಬನ್ಸಾಲ್ ಅವರನ್ನು ಭೇಟಿ ಮಾಡಲು ಸಂಭಾವ್ಯ ಸಚಿವರು ಲಕ್ನೋ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಾರೆ. ಬ್ರಜೇಶ್ ಪಾಠಕ್, ಕಪಿಲ್ ದೇವ್ ಅಗರ್ವಾಲ್ ಮತ್ತು ಭೂಪೇಂದ್ರ ಚೌಧರಿ ಆಗಮಿಸಿದ್ದಾರೆ. ಈ ಮೂವರೂ ಹಿಂದಿನ ಸರ್ಕಾರದಲ್ಲಿಯೂ ಸಂಪುಟ ಸಚಿವರಾಗಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ರಾಜಭವನದಿಂದ ಕರೆಗಳು ಬರಲಾರಂಭಿಸಿವೆ ಎಂದು ಮೂಲಗಳಿಂದ ವರದಿಯಾಗಿದೆ.

Uttar Pradesh ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, 12 ರಾಜ್ಯಗಳ ಸಿಎಂಗಳು ಮತ್ತು 5 ಉಪ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭ ಐತಿಹಾಸಿಕವಾಗಿದ್ದು, ಇಡೀ ಲಕ್ನೋ ನಗರಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ. ಪ್ರತಿ ರಸ್ತೆಯಲ್ಲೂ ದೊಡ್ಡ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ