Ballari: ಕಲ್ಯಾಣ ಕರ್ನಾಟಕದ ಮೇಲೆ ಡಿಕೆಶಿ ಕಣ್ಣು: ಅಧಿಕಾರಕ್ಕೆ ಬರಲು ಮಾಸ್ಟರ್‌ ಪ್ಲಾನ್‌..!

By Girish Goudar  |  First Published Mar 25, 2022, 9:36 AM IST

*  ಅಧಿಕಾರಕ್ಕೆ ಬರಲು ಡಿಜಿಟಲ್ ಅಭಿಯಾನ
*  ಮೂವತ್ತು ಸಾವಿರ ಸದಸ್ಯರನ್ನು ಮಾಡಿದ್ರೇ ಟಿಕೆಟ್ ಕೇಳಿ
*  ಪಂಚರಾಜ್ಯ ಚುನಾವಣೆಯಲ್ಲಿ ಸೋತಿದ್ದೇವೆ ಹೋರಾಟ ನಿಲ್ಲಿಸೋಲ್ಲ
 


ನರಸಿಂಹ ಮೂರ್ತಿ ‌ಕುಲಕರ್ಣಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳ್ಳಾರಿ

ಬಳ್ಳಾರಿ(ಮಾ.25):  ಕಲ್ಯಾಣ ಕರ್ನಾಟಕದಲ್ಲಿರೋ(Kalyana Karnataka) 40 ಕ್ಕೂ ಹೆಚ್ಚು ಕ್ಷೇತ್ರದ ಮೇಲೆ ಕಣ್ಣಿಟ್ಟಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಡಿಜಿಟಲ್ ಸದಸ್ಯತ್ವ ಅಭಿಯಾನದ ಹೆಸರಲ್ಲಿ ಭರ್ಜರಿ ಪ್ರವಾಸ ಮಾಡಿ ಮುನಿಸಿಕೊಂಡ ನಾಯಕರ ಮಧ್ಯೆ ಹೊಂದಾಣಿಕೆ ಮಾಡೋ ಪ್ರಯತ್ನ ಮಾಡಿದ್ದಾರೆ. ಕಾರ್ಯಕರ್ತರಿಗೆ ಎಚ್ಚರಿಕೆ ‌ನೀಡಿರೋ ಡಿಕೆಶಿ ಕೆಲಸ ಮಾಡಿ ಇಲ್ಲ ಪಕ್ಷ ಬಿಡಿ ಎಂದಿದ್ದಾರೆ. ಅಷ್ಟಕ್ಕೂ ದಿಢೀರನೇ ಕಲ್ಯಾಣ ಕರ್ನಾಟಕ ಮೇಲೆ ಡಿಕೆಶಿ ಕಣ್ಣು ಯಾಕೆ ಬಿತ್ತು ಅನ್ನೋದ್ರ ವಿವರವಾದ ವರದಿ ಇಲ್ಲಿದೆ.

Tap to resize

Latest Videos

ಕಾಂಗ್ರೆಸ್‌ಗೆ ಕಲ್ಯಾಣ ಕರ್ನಾಟಕ ಫೇವರೆಟ್

ದಶಕಗಳಿಂದ ಚುನಾವಣೆ(Election) ರಾಜಕೀಯ ‌ನೋಡಿಕೊಂಡು ಬರೋದಾದ್ರೇ ಕಲ್ಯಾಣ ಕರ್ನಾಟಕದ 40 ಕ್ಷೇತ್ರದಲ್ಲಿ ಪ್ರತಿ ಬಾರಿಯೂ ಕೂಡ ಕಾಂಗ್ರೆಸ್(Congress) ಮೇಲುಗೈ ಸಾಧಿಸಿದೆ. 2018 ಚುನಾವಣೆಯಲ್ಲಿಯೂ 21 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.. 2008 ರಲ್ಲಿ ಬಿಜೆಪಿ(BJP) ಗಾಳಿ ಇದ್ದಾಗಲೂ ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್ ಕೈ ಬಿಟ್ಟಿರಕಿಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಮತದಾರರಿದ್ದಾರೆ. ಆದ್ರೇ, ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಇದೆ ಎನ್ನುವ ಮಾತಿದೆ. ಆ ಹೊಂದಾಣಿಕೆ ಕೊರತೆ ನಿವಾರಣೆಗೆ ಡಿಕೆಶಿ ಪ್ರವಾಸ ಮಾಡಿದ್ದಾರೆ ಎನ್ನಲಾಗ್ತಿದೆ. ನಾಯಕರುಗಳ ಜೊತೆಗೆ ಒನ್ ಟೂ ಒನ್ ಮಾತನಾಡೋ ಮೂಲಕ ಮೊದಲು ಅಧಿಕಾರಕ್ಕೆ ಬರೋಣ ಭಿನ್ನಾಭಿಪ್ರಾಯಗಳು ಬದಿಗೊತ್ತಿ ಎಂದು ಕಿವಿ ಮಾತು ಹೇಳಿದ್ದಾರೆ.

ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ, 121ಅಡಿ ಉದ್ದದ ಧ್ವಜದೊಂದಿಗೆ ಹೋಗುವುದೇ ಸವಾಲು

ಕ್ಷೇತ್ರವೊಂದರಲ್ಲಿ 30 ಸಾವಿರ ಸದಸ್ಯರನ್ನು ಮಾಡಿ

2023 ಚುನಾವಣೆ ವೇಳೆಗೆ ಕ್ಷೇತ್ರವೊಂದರಲ್ಲಿ‌ ಕನಿಷ್ಟ ಮೂವತ್ತು ಸಾವಿರ ಡಿಜಿಟಲ್ ಸದಸ್ಯರ ನೋಂದಣಿ ಮಾಡಿ ನಂತರ ಟಿಕೆಟ್ ಕೇಳಲು‌ ಬನ್ನಿ ಎಂದು ಕಡಕ್ ಸಂದೇಶ ನೀಡಿದ್ದಾರೆ. ‌ ಸುಖಾಸುಮ್ಮನೆ ಕ್ಷೇತ್ರದಲ್ಲಿ ಇಬ್ಬರೂ ಮೂವರು ಆಕಾಂಕ್ಷಿಗಳೆಂದು ಹೇಳಿಕೊಂಡು ನಾಯಕರ ಮಧ್ಯೆ ಒಡಕು ಮೂಡಿಸಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಪಂಚ ರಾಜ್ಯದಲ್ಲಿನ ಸೋಲಾಗಿದೆ ಹೋರಾಟ ನಿಲ್ಲಿಸೋಲ್ಲ

ಪಂಚರಾಜ್ಯಗಳ ಚುನಾವಣೆಯಲ್ಲಿನ ಸೋಲು ಇಡೀ ದೇಶದಲ್ಲಿರೋ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ನಾಯಕರನ್ನು ಧೃತಿಗೆಡುವಂತೆ ಮಾಡಿದೆ. ಆದ್ರೇ ಐದು ರಾಜ್ಯಗಳ  ಪೈಕಿ ನಾವೂ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಪಂಜಾಬದಲ್ಲಿ ನಮ್ಮ ಪಕ್ಷದ ನಾಯಕರ ಕಚ್ಚಾಟದಿಂದ ನಾವೂ ಸೋಲು ಕಂಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಆ ರೀತಿ ನಡೆಯೋದು ಬೇಡ ಒಗ್ಗಟ್ಟಿನಿಂದ ಹೋರಾಟ ಮಾಡಿ ಮುಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಬರುವಂತೆ ಮಾಡೋಣವೆಂದು ಪಕ್ಷದ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ..

ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಅತಿಹೆಚ್ಚು ನೋಂದಣಿ

ಇನ್ನೂ ದೇಶದ್ಯಾಂತ ನಡೆಯುತ್ತಿರೋ ಡಿಜಿಟಲ್ ಸದಸ್ಯತ್ವದ ಅಭಿಯಾನದಲ್ಲಿ(Congress Digital Membership Campaign) ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಯ ಪೈಕಿ ಕೊಪ್ಪಳ‌(Koppal)ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರ ನೊಂದಣಿ ಮಾಡಲಾಗಿದೆ.  ಇಡೀ ದೇಶದಲ್ಲಿ ತೆಲಂಗಾಣದಲ್ಲಿ 40 ಲಕ್ಷ ಸದಸ್ಯತ್ವ ನೋಂದಣಿ ಮಾಡಿ ದಾಖಲೆ ಬರೆಯಲಾಗಿದೆ  ಜೊತೆಗೆ ನಮ್ಮ ರಾಜ್ಯದಲ್ಲಿ 28 ಲಕ್ಷ ಸದಸ್ಯತ್ವ ಆಗಿದ್ದು ಇದು ಇನ್ನಷ್ಟು ಹೆಚ್ಚಾಗಬೇಕಿದೆ ಎನ್ನೋದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಇನ್ನೂ ರಾಹುಲ್ ಗಾಂಧಿಯವರೇ(Rahul Gandhi) ಸದಸ್ಯತ್ವ ನೊಂದಣಿ ಪರಿಶೀಲನೆ ನಡೆಸಲಿದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರು ಗಂಭೀರವಾಗಿದ್ದಾರಂತೆ.

ಶ್ರೀರಾಮುಲು ತವರಿನಲ್ಲಿ ವರ್ಕೌಟ್ ಆಯ್ತು ಡಿಕೆಶಿ ಒಗ್ಗಟ್ಟಿನ ಮಂತ್ರ, ಬಿಜೆಪಿಗೆ ಮಖಭಂಗ

ಬಿಜೆಪಿ ವಿರುದ್ಧ ಹೋರಾಟ ನಿರಂತರ

ಇನ್ನೂ ಪ್ರವಾಸದ ಉದ್ದಕ್ಕೂ ಡಿಕೆಶಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ದೇಶವನ್ನ ಇಬ್ಬಾಗ ಮಾಡಲು ಹೊರಟಿದ್ದಾರೆ.ಯಾರಿಗೂ ಧರ್ಮ ಬಿಡಿ ಅಂತಾ ಹೇಳ್ತಿಲ್ಲ. ಅವರ ಧರ್ಮ ಅವರು ಪಾಲಿಸಬೇಕು. ವ್ಯಾಪಾರ ವಹಿವಾಟು ಮಾಡುವ ವೇಳೆ ಮಾನವೀಯತೆ ಬಿಟ್ಟು ನಡೆದುಕೊಳ್ಳುತ್ತಿದ್ದಾರೆ. ಇದು ದೇಶಕ್ಕೆ ದೊಡ್ಡ ಅಪಾಯವಾಗಿದೆ ಬಿಜೆಪಿ ವರ್ತನೆ ದೇಶಕ್ಕೆ ಮಾರಕವಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಹರಿದುಬಿದ್ದ ಬೃಹತ್ ಹಾರ

ಹೊಸಪೇಟೆಗೆ ಆಗಮಿಸುತ್ತಿದ್ದ ಕ್ರೇನ್ ಮೂಲಕ ಡಿಕೆಶಿ ಅವರಿಗೆ ಕಾರ್ಯಕರ್ತರು ಬೃಹತ್ ಹಾರ ಹಾಕೋಕೆ ಮುಂದಾದ್ರು ಈ ವೇಳೆ ಭಾರವನ್ನು ತಾಳಲಾರದೇ ಹಾರ ತುಂಡಾಗಿ ಬಿತ್ತು.  
 

click me!