ಆಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಕಿಷ್ಕೆಂದೆ ಜನ ಆಯೋಧ್ಯೆ ರಾಮಮಂದಿರಕ್ಕೆ ಉದ್ಘಾಟನೆ ಬರಬೇಕು. ನಿಮ್ಮ ಬರುವಿಕೆ ಕಾಯಿಯುತ್ತಿದ್ದೇವೆ. ಆಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲು ಕಾಂಗ್ರೆಸ್‌ಗೆ ಆಗಿರಲಿಲ್ಲ. ಸಂತ ಮಹಂತರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಲ: ಯೋಗಿ ಆದಿತ್ಯನಾಥ್
ಕೊಪ್ಪಳ(ಏ.30): ಆಯೋಧ್ಯೆ ಶ್ರೀರಾಮ ಸ್ಥಳದಿಂದ ಹನುಮನ ಜನ್ಮ ಸ್ಥಳ ಯೋಗಿ ಬಂದಿದ್ದಾರೆ. ಗಂಗಾವತಿ ಹಿಂದುತ್ವದ ಪುಣ್ಯ ಕ್ಷೇತ್ರವಾಗಿದೆ. ನಾನು ಎರಡು ಬಾರಿ ಗೆದ್ದಿದ್ದು ಹಿಂದುತ್ವದ ಪ್ರಭಾವ ಹಾಗೂ ಕಾರ್ಯಕರ್ತರಿಂದ. ಹಿಂದುತ್ವ ಭಾವನೆ, ಸಂಸ್ಕೃತಿ ಉಳಿಸಬೇಕಾಗಿದೆ. ಯುವ ಮತದಾರರು ಮೋದಿಯವರಿಗೆ ಮತ ಹಾಕಲು ನಿರ್ಧರಿಸಿದ್ದಾರೆ ಅಂತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಇಂದು(ಭಾನುವಾರ) ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿದ್ದಾರೆ. ಹನುಮನ ನಾಡಿನ, ಅಂಜನಾದ್ರಿಯ ನೆಲೆ ಬೀಡು ಜನತೆಗೆ ಧನ್ಯವಾದಗಳು. ನಾನು ಶ್ರೀರಾಮನ ಪವಿತ್ರ ಭೂಮಿಯಿಂದ ಹನುಮನ ಕಿಷ್ಕಾಂದ ಪವಿತ್ರ ಸ್ಥಳಕ್ಕೆ ಬಂದಿದ್ದೇನೆ. ಉತ್ತರ ಪ್ರದೇಶ ಹಾಗೂ ಕರ್ನಾಟಕ ಬಾಂಧವ್ಯವಿದೆ ಅಂತ ಹೇಳಿದ್ದಾರೆ.
undefined
ಬನ್ನಿ ರನ್ನಿಂಗ್ ಮಾಡೋಣ, ಯಾರ್ ಗೆಲ್ತಾರೆ ನೋಡೋಣ ಮೋದಿಗೆ ಸವಾಲೆಸೆದ ಸಿದ್ದು!
ಕಾಂಗ್ರೆಸ್ ಪಿಎಫ್ಐ ಬೆಳೆಸಿತ್ತು. ಆದರೆ ಉಪದ್ರವ ನೀಡುವ ಪಿಎಫ್ಐ ಬ್ಯಾನ್ ಮಾಡಲಾಗಿದೆ. ರೈತರಿಗೆ ಕಿಸಾನ್ ಸಮ್ಮಾನ್ ಹಣ ನೀಡುತ್ತಿದ್ದಾರೆ. ರೈತರು ತೆಲೆ ಎತ್ತಿ ನಡೆಯುವಂತಾಗಿದೆ. ಕಾಂಗ್ರಸ್ ಹಾಗೂ ಜೆಡಿಎಸ್ ತುಷ್ಠಿಕರಣ ರಾಜಕಾರಣ ಮಾಡಿದ್ದಾರೆ. ಎಲ್ಲಾ ರಂಗದಲ್ಲಿ ಬಲಿಷ್ಠ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. 9 ವರ್ಷದಲ್ಲಿ ಆರ್ಥಿಕ ಪ್ರಗತಿ ಹೊಂದಿದೆ. ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಜನ ವಿಶ್ವಾಸವಿದೆ. ಅಭಿವೃದ್ದಿಯಲ್ಲಿ ಡಬಲ್ ಡೋಸ್ ಸಿಗುತ್ತದೆ. ಮುಂದೆಯೂ ಇದೇ ವೇಗದಲ್ಲಿ ಡಬಲ್ ಅಭಿವೃದ್ಧಿ ಹೊಂದಬೇಕಾಗಿದೆ ಅಂತ ತಿಳಿಸಿದ್ದಾರೆ.
ಉತ್ತರ ಪ್ರದೇಶ ಅಭಿವೃದ್ಧಿ ಹೊಂದಲು ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಯಿತು. 6 ವರ್ಷದಲ್ಲಿ ಯುಪಿ ಶಾಂತಿಯುತ ರಾಜ್ಯವಾಗಿದೆ. ಯುಪಿ ಶಾಂತಿ, ಸುಖ ನೆಮ್ಮದಿ ಇದೆ. ಇಲ್ಲಿ ಈಗ ಗಲಭೆಯಿಲ್ಲ, ಉತ್ಸವವಿದೆ. ಕಾಂಗ್ರೆಸ್ ಪೇಡ್ ಎಂಜಿನ್ ಅಲ್ಲ. ಕಾಂಗ್ರೆಸ್ ಪಂಚವಾರ್ಷಿಕ ಯೋಜನೆ ಮಾಡುತ್ತಿದ್ದರು. ಆದರೆ ಪಂಚವಾರ್ಷಿಕ ಪೂರ್ಣಗೊಳಿಸುತ್ತಿಲ್ಲ. ಡಬಲ್ ಎಂಜಿನ್ ಸರ್ಕಾರ ಪಂಚವಾರ್ಷಿಕ ಯೋಜನೆ ಪೂರ್ಣಗೊಳಿಸುತ್ತಿದೆ. ಸೀತೆ ಹುಡುಕುತ್ತಿರುವಾಗ ಕಿಷ್ಕೆಂದೆಯಲ್ಲಿ ಸುಗ್ರೀವ್ ಸಾಥ್ ನಿಂದ ಉತ್ತರ ಹಾಗೂ ದಕ್ಷಿಣ ಜೋಡಣೆ ಮಾಡಲಾಗಿದೆ. ಕರ್ನಾಟಕದ ಪರಂಪರೆ ಸಂತ ಪರಂಪರೆಯಾಗಿದೆ ಅಂತ ಹೇಳಿದ್ದಾರೆ.
ಯತ್ನಾಳ ವಿಷ ಕಾರುವ ವ್ಯಕ್ತಿ: ಎಂ.ಬಿ.ಪಾಟೀಲ ಕಿಡಿ
ಆಯೋಧ್ಯೆಗೆ ಕನ್ನಡಿಗರ ಬರುವಿಕೆಗೆ ಕಾಯುತ್ತಿದ್ದೇವೆ
ಆಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಕಿಷ್ಕೆಂದೆ ಜನ ಆಯೋಧ್ಯೆ ರಾಮಮಂದಿರಕ್ಕೆ ಉದ್ಘಾಟನೆ ಬರಬೇಕು. ನಿಮ್ಮ ಬರುವಿಕೆ ಕಾಯಿಯುತ್ತಿದ್ದೇವೆ. ಆಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸಲು ಕಾಂಗ್ರೆಸ್‌ಗೆ ಆಗಿರಲಿಲ್ಲ. ಸಂತ ಮಹಂತರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬರಲಿ. ಶಬರಿ ರಾಮನಿಗೆ ಬಾರೆ ಹಣ್ಣು ನೀಡಿದ ಪುಣ್ಯ ಭೂಮಿ ಇದೆ. ಕರ್ನಾಟಕ ಸರ್ಕಾರವು 120 ಕೋಟಿ ರೂಪಾಯಿ ಹನುಮನ ಸೇರಿಸಲಿದೆ. ಆಯೋಧ್ಯೆಯಿಂದ ಅಂಜನಾದ್ರಿ ಜೋಡಣೆಗೆ ರೈಲ್ವೆ ಆರಂಭವಾಗಲಿದೆ ಅಂತ ತಿಳಿಸಿದ್ದಾರೆ.
ಮನ್ ಕೀ ಬಾತ್ 142 ಕೋಟಿ ಜನರ ಭಾವನೆ
ಮನ್ ಕೀ ಬಾತ್ 142 ಜನರ ಭಾವನೆಯಾಗಿದೆ. ಭಾರತ ಈಗ ಬದಲಾಗಿದೆ. 100 ನೇಯ ಮನ್ ಕೀ ಬಾತ್ ನಂತರ ಯುನೆಸ್ಕೋ ಅಭಿನಂದಿಸಿದೆ. ಜೀವನದ ಎಲ್ಲಾ ಕ್ಷೇತ್ರದಲ್ಲಿ ಭಾರತ ತನ್ನ ತಾಕತ್ತು ತೋರಿಸುತ್ತಿದೆ. ಮೋದಿ G20 ರಾಷ್ಟ್ರಗಳ ಅಧ್ಯಕ್ಷರಾಗಿದ್ದಾರೆ. 80 ಕೋಟಿ ಜನರಿಗೆ ಕೊರೋನಾದಲ್ಲಿ ಉಚಿತ ರೇಷನ್ ನೀಡಿದ್ದಾರೆ. ಕರ್ನಾಟಕದ ಯುವಜನ ಐಟಿ ಸ್ಕಿಲ್ ಐಟಿ ಹಬ್ ಮಾಡಲಾಗಿದೆ. ಭಾರತದ ವಿಕಾಸದಲ್ಲಿ ಕರ್ನಾಟಕ ಪಾತ್ರವಿದೆ. ನಾವು ವಿಕಾಸದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಎಲ್ಲಾ ರಂಗದಲ್ಲಿ ಮುಂದೆ ಇದೆ ಅಂತ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.