* ಉಷಾ ಗೆಲುವಿನಿಂದ ಅಧಿಕಾರದ ಗದ್ದುಗೆ ಏರಿದ ಕಮಲ ಪಕ್ಷ
* ಅಧ್ಯಕ್ಷ ಪಟ್ಟ ಎಸ್ಸಿಗೆ ಮೀಸಲು
* 20- 20 ಮ್ಯಾಚ್‌ನಂತೆ ಕುತೂಹಲ ಕೆರಳಿಸಿದ ಮತ ಎಣಿಕಾ ಕಾರ್ಯ
ಗದಗ(ಡಿ.31): ತೀವ್ರ ಕುತೂಹಲ ಕೆರಳಿಸಿದ್ದ ಗದಗ- ಬೆಟಗೇರಿ ನಗರಸಭೆ ಚುನಾವಣೆಯ(Gadag-Betageri City Municipal Council) ಕೊನೆಯ ವಾರ್ಡ್ 35. ಈ ಕೊನೆಯ ವಾರ್ಡ್‌ನ ಫಲಿತಾಂಶ ಕೂಡಾ ಕೊನೆಗೆ ಹೊರಬಿದಿದ್ದು, ಇಲ್ಲಿ ಗೆಲುವು ಸಾಧಿಸಿರುವ ಬಿಜೆಪಿ(BJP) ಅಭ್ಯರ್ಥಿ ಉಷಾ ದಾಸರ(Usha Dasar) ಬಿಜೆಪಿ ಪಾಲಿನ ಅದೃಷ್ಟಲಕ್ಷ್ಮಿಯಾಗಿ ಹೊರಹೊಮ್ಮಿದರು.
ಪ್ರಾರಂಭದಿಂದಲೂ ಕೆಲ ವಾರ್ಡ್‌ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು 10ಕ್ಕೂ ಹೆಚ್ಚಿನ ವಾರ್ಡಗಳಲ್ಲಿ ಗೆಲುವು ಸಾಧಿಸಿತ್ತು. ಇದೇ ರೀತಿಯ ಓಟ ಮುಂದುವರಿಸಿದಲ್ಲಿ ಬಿಜೆಪಿ ಮೂರನೇ ಎರಡಷ್ಟು ಬಹುಮತ ಪಡೆಯುತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದ್ದ ವೇಳೆ 10.30ರ ನಂತರ 11ಕ್ಕೂ ಹೆಚ್ಚಿನ ವಾರ್ಡ್‌ಗಳಲ್ಲಿ ಕಾಂಗ್ರೆಸ್(Congress) ಮುನ್ನಡೆ ಕಾಯ್ದುಕೊಂಡಿದ್ದಲ್ಲದೇ ಗೆಲುವು ಕೂಡಾ ದಾಖಲಿಸುತ್ತಲೇ ಹೋಗಿ 15 ಸ್ಥಾನಗಳನ್ನು ಪಡೆಯಿತು. ಇತ್ತ 17 ಮತ್ತು 21ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದು, ಅವರು ಸಹಜವಾಗಿಯೇ ಕಾಂಗ್ರೆಸ್ ಬೆಂಬಲಿಸುವ ಹಿನ್ನೆಲೆ ಕಾಂಗ್ರೆಸ್ ಗೆಲುವು 17ಕ್ಕೆ ಬಂದು ನಿಂತಿತ್ತು.
ಬಿಜೆಪಿ ಕೂಡಾ 17 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಬಹುಮತಕ್ಕಾಗಿ ಇನ್ನೊಂದೇ ಸ್ಥಾನದ ಅವಶ್ಯಕತೆ ಇತ್ತು. ಕಾಂಗ್ರೆಸ್+ ಪಕ್ಷೇತರ ಸೇರಿ 17 ಸ್ಥಾನ, ಬಿಜೆಪಿ ಕೂಡಾ 17 ಸ್ಥಾನಕ್ಕೆ ಬಂದು ತಲುಪಿದ ವೇಳೆಯಲ್ಲಿಯೇ ಪ್ರಾರಂಭವಾಗಿದ್ದು
undefined
Gadag-Betageri: ಒಗ್ಗಟ್ಟಿನಿಂದ ನಗರಸಭೆ ಗೆದ್ದುಕೊಂಡ ಬಿಜೆಪಿ: ಕಾಂಗ್ರೆಸ್‌ಗೆ ನಿರ್ಲಕ್ಷ್ಯಕ್ಕೆ ಪಾಠ
35ನೇ ವಾರ್ಡ್‌ನ ಮತ ಎಣಿಕಾ ಕಾರ್ಯ.
35ನೇ ವಾರ್ಡ್‌ನಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಆ ಪಕ್ಷ ಸ್ಪಷ್ಟ ಬಹುಮತದೊಂದಿಗೆ ನಗರಸಭೆ ಗದ್ದುಗೆ ಏರುವುದು ಖಚಿತವಾಗಿತ್ತು. ಈ ಹಿನ್ನೆಲೆ ಎಲ್ಲರ ಗಮನ 35 ನೇ ವಾರ್ಡ್‌ನ ಅಭ್ಯರ್ಥಿಗಳ ಮೇಲೆಯೇ ನೆಟ್ಟಿತ್ತು. 4 ಸುತ್ತುಗಳಲ್ಲಿ ನಡೆದ ಮತ ಎಣಿಕಾ ಕಾರ್ಯ 20- 20 ಮ್ಯಾಚ್‌ನಂತೆ ನಡೆಯುತ್ತಿತ್ತು. ಪ್ರತಿ ಸುತ್ತುಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಉಷಾ ದಾಸರ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿ ಅಂತಿಮ ಸುತ್ತು ಪೂರ್ಣಗೊಂಡಾ 216 ಮತಗಳ ಅಂತರದಿಂದ ಬಿಜೆಪಿಯ ಉಷಾ ದಾಸರ ಗೆಲುವು ಸಾಧಿಸಿದರು.
ಅವರ ಈ ಗೆಲುವು ಕೇವಲ ತಮ್ಮ ವೈಯಕ್ತಿಕ ಗೆಲುವು ಮಾತ್ರವಲ್ಲ, ಬಿಜೆಪಿಯನ್ನು ನಗರಸಭೆಯಲ್ಲಿ ಅಧಿಕಾರಕ್ಕೆ ತರುವ ಗೆಲುವಾಗಿದ್ದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಎಲ್ಲ ಬಿಜೆಪಿ ಕಾರ್ಯಕರ್ತರು, ನಾಯಕರು ಉಷಾ ಅವರನ್ನು ಅಭಿನಂದಿಸಿದ್ದಲ್ಲದೇ ಬಿಜೆಪಿಯ ಪಾಲಿನ ಅದೃಷ್ಟಲಕ್ಷ್ಮಿ ಎಂದರೆ ಅದು ಉಷಾ ದಾಸರ ಎಂದು ಕೊಂಡಾಡಿದರು.
Mahadayi Project: ಮಹದಾಯಿ ವಿಚಾರದಲ್ಲಿ ಬಿಜೆಪಿಯಿಂದ ರಾಜಕಾರಣ: ಸಲೀಂ ಅಹ್ಮದ್
ಅಧ್ಯಕ್ಷ ಪಟ್ಟ ಎಸ್ಸಿಗೆ ಮೀಸಲು
ಗದಗ- ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ(Reservation) ಈಗಾಗಲೇ ಘೋಷಣೆಯಾಗಿ ಎಸ್ಸಿಗೆ ಮೀಸಲಾಗಿದ್ದು, ಸ್ಪಷ್ಟಬಹುಮತ ಪಡೆದಿರುವ ಬಿಜೆಪಿ 6ನೇ ವಾರ್ಡ್‌ನಲ್ಲಿ ಸೋಲು ಅನುಭವಿಸಿದ್ದು, ಸದ್ಯ ಗೆಲುವು ಸಾಧಿಸಿರುವ ಉಷಾ ದಾಸರ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವಿಭಾಗದಿಂದಲೇ ಆಯ್ಕೆಯಾಗಿದ್ದು, ಬಿಜೆಪಿಯಲ್ಲಿ ಆ ಅರ್ಹತೆಯನ್ನು ಹೊಂದಿರುವ ಏಕೈಕ ಬಿಜೆಪಿ ಸದಸ್ಯೆಯಾಗಿದ್ದಾರೆ. ಅವರು ವೈಯಕ್ತಿಕವಾಗಿ ಗೆಲುವು ಸಾಧಿಸಿ ಬಿಜೆಪಿಯನ್ನು ನಗರಸಭೆಯಲ್ಲಿ ಅಧಿಕಾರಕ್ಕೆ ತರುವುದಲ್ಲದೇ ಸರ್ಕಾರದಿಂದ ಈಗಾಗಲೇ ಪ್ರಕಟವಾಗಿರುವ ಮೀಸಲಾತಿ ಮುಂದುವರಿದಲ್ಲಿ ಮೊದಲ ಅವಧಿಗೆ ಉಷಾ ದಾಸರ ಅವರಿಗೆ ನಗರಸಭೆಯ ಅಧ್ಯಕ್ಷರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಗೊಂದಲಕ್ಕೆ ತೆರೆ
ಕಾಂಗ್ರೆಸ್ ಅದಾಗಲೇ ಗೆಲುವು ಸಾಧಿಸಿದ್ದ 15, ಬಂಡಾಯ ಕಾಂಗ್ರೆಸ್(ಪಕ್ಷೇತರರು) 2 ಒಟ್ಟು 17, 35ನೇ ವಾರ್ಡ್‌ನಲ್ಲಿ ಬಿಜೆಪಿಗೆ ಹಿನ್ನಡೆಯಾಗಿ, ಕಾಂಗ್ರೆಸ್‌ಗೆನಾದರೂ ಗೆಲುವು ಸಿಕ್ಕಿದ್ದರೆ ಗದಗ ಜಿಲ್ಲೆಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋವೇ ಸೃಷ್ಟಿಯಾಗುತ್ತಿತ್ತು. ಸ್ಥಳೀಯ ಗದಗ(Gadag) ಶಾಸಕರು ಕಾಂಗ್ರೆಸ್‌ನವರೇ ಇರುವ ಹಿನ್ನೆಲೆಯಲ್ಲಿ ಅವರಿಗೂ ಮತದಾನ ಹಕ್ಕಿದ್ದು ಕಾಂಗ್ರೆಸ್‌ಗೆ ಒಟ್ಟು 19 ಸ್ಥಾನವಾಗುತ್ತಿತ್ತು. ಬಿಜೆಪಿ ಕೂಡಾ 17 ಸ್ಥಾನಗಳನ್ನು ಗೆದ್ದು 35 ರಲ್ಲಿ ಸೋಲು ಅನುಭವಿಸಿದ್ದರೆ, ಸಂಸದ ಶಿವಕುಮಾರ ಉದಾಸಿ(Shivakumar Udasi), ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ(SV Sankanur) ಅವರ ಮತ ಸೇರಿ ಬಿಜೆಪಿ ಕೂಡಾ 19 ಸ್ಥಾನಗಳಿಗೆ ಬಂದು ನಿಲ್ಲುವಂತಾಗಿ ಸಾಕಷ್ಟುಗೊಂದಲ, ಅಪರೇಷನ್ ಕಮಲ(Operation BJP), ಆಪರೇಷನ್ ಹಸ್ತ(Operation Congress) ಹೀಗೆ ರಾಜಕೀಯ(Politics) ಮೇಲಾಟಕ್ಕೆ ಕಾರಣವಾಗುತ್ತಿತ್ತು. ಇದಕ್ಕೆಲ್ಲಾ 35ನೇ ಬಿಜೆಪಿ ಅಭ್ಯರ್ಥಿ ಉಷಾ ದಾಸರ ಗೆಲುವು ಸಾಧಿಸುವ ಮೂಲಕ ಮುಂದಾಗಬಹುದಾದ ಎಲ್ಲ ಗೊಂದಲಕ್ಕೂ ಕೊನೆ ಹಾಡಿದರು.