BJP Politics: ಸಂಕ್ರಾಂತಿವರೆಗೂ ವೇಟ್‌ ಮಾಡಿ ರಾಜ್ಯದಲ್ಲಿ ಬದಲಾವಣೆ: ಸ್ಫೋಟಕ ಹೇಳಿಕೆ ಕೊಟ್ಟ ಯತ್ನಾಳ್‌

By Kannadaprabha News  |  First Published Dec 31, 2021, 6:08 AM IST

*  ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬದಲಾವಣೆ
*  ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ 
*  ರಾಜ್ಯದ ಎಲ್ಲ ಬೆಳವಣಿಗೆಗಳ ಮೇಲೆ ಪ್ರಧಾನಿ ಮೋದಿ ನಿಗಾ


ವಿಜಯಪುರ(ಡಿ.31): ಸಂಕ್ರಾಂತಿ(Makar Sankranti) ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌(Basanagouda Patil Yatnal) ಮತ್ತೆ ಭವಿಷ್ಯ ನುಡಿದಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ(Assembly Elections) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ, ಪಕ್ಷ ಹಾಗೂ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದರು.

ರಾಜ್ಯದಲ್ಲಿನ(Karnataka) ಎಲ್ಲ ಚಟುವಟಿಕೆಗಳನ್ನು ಪ್ರಧಾನಿ ಗುಪ್ತಚರ ಇಲಾಖೆ ಗಮನಿಸುತ್ತಿದೆ. ಕಚೇರಿಗೆ ಹೋಗದೆ ಇರುವ ಸಚಿವರು ಯಾರು? ಎಂಬುವುದನ್ನು ನೋಡುತ್ತಿದೆ. ರಾಜ್ಯದ ಎಲ್ಲ ಬೆಳವಣಿಗೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನಿಗಾ ವಹಿಸಿದ್ದಾರೆ. ಸಂಕ್ರಾಂತಿ ಬಳಿಕ ಪ್ರಧಾನಿ ಮೋದಿ ಅವರು ದೊಡ್ಡ ಬದಲಾವಣೆ ಮಾಡಲಿದ್ದಾರೆ. ಕಳೆದ ಸಂಕ್ರಾಂತಿಗೂ ಹೇಳಿದ್ದೆ. ಬಿ.ಎಸ್‌. ಯಡಿಯೂರಪ್ಪ(BS Yediyurappa) ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಈ ಬಾರಿಯೂ ಸಂಕ್ರಾಂತಿವರೆಗೆ ತಡೆಯಬೇಕು. ಮಹತ್ವದ ಬದಲಾವಣೆ ಆಗುತ್ತದೆ ಎಂದು ತಿಳಿಸಿದರು.

Tap to resize

Latest Videos

undefined

BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

ಜನವರಿ 14ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ(Cabinet Expansion). ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸುಳಿವು ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಲಿದೆ. ಇದಲ್ಲದೆ ವಿಜಯಪುರ(Vijayapura) ಜಿಲ್ಲಾ ಉಸ್ತುವಾರಿ ಸಚಿವರೂ ಬದಲಾವಣೆಯಾಗಲಿದ್ದಾರೆ. ಸೂಕ್ತವಾದವರು ಉಸ್ತುವಾರಿ ಸಚಿವರಾಗಲಿದ್ದಾರೆ ಎಂದ ಅವರು, ನನಗೆ ಪಕ್ಷ ಸಿಹಿ ಸುದ್ದಿ ಕೊಡಲಿದೆ ಎಂದರು.
ಮತ್ತೆ ಸಚಿವ ಸ್ಥಾನ ಆಸೆಯನ್ನು ಬಿಚ್ಚಿಟ್ಟ ಶಾಸಕ ಯತ್ನಾಳ್‌, ಗಟ್ಸ್‌ ಇರುವವರು ಗೃಹ ಸಚಿವರಾಗಬೇಕು. ನಮ್ಮಂತವರ ಕೈಯಲ್ಲಿ ಗೃಹ ಇಲಾಖೆ ಕೊಟ್ಟರೆ ಬರೋಬ್ಬರಿ ಮಾಡುತ್ತೇವೆ. ದೇಶ ವಿರೋಧಿ ಚಟುವಟಿಕೆ ಮಾಡುವವರನ್ನು ಹಾಗೂ ಉಪಾದ್ಯಾಪಿಗಳಿಗೆ ಸರಿಯಾಗಿ ಮಾಡುತ್ತೇವೆ. ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಒಳ್ಳೆಯವರು. ಪ್ರಾಮಾಣಿಕರು. ಆರಗ ಜ್ಞಾನೇಂದ್ರ ಅವರಿಗೆ ಅರಣ್ಯ, ಕಂದಾಯ ಇಲ್ಲವೆ ಗ್ರಾಮೀಣಾಭಿವೃದ್ಧಿ ಖಾತೆ ಸೂಕ್ತವಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿದೇಶ ಪ್ರವಾಸ ಬರೀ ವದಂತಿ. ವಿದೇಶಿ ಪ್ರವಾಸದ ಬಗ್ಗೆ ವೀಸಾ ಬಂದಿದ್ದರೆ ನನಗೆ ತೋರಿಸಿ. ಸಿಎಂ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದರೆ ಗೊತ್ತಾಗುತ್ತಿತ್ತು. ಸಿಎಂ ಚಲವಲನ ಸಾರ್ವಜನಿಕವಾಗಿರುತ್ತದೆ ಎಂದ ಅವರು, ನಾನು ಸಿಎಂ ಬಸವರಾಜ ಬೊಮ್ಮಾಯಿ ಬೇಡ, ಬೇಕು ಅನ್ನುವುದಿಲ್ಲ. ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಎಂಇಎಸ್‌ ಮೇಲೆ ನಿಷೇಧ ಹೇರಲು ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ಕರ್ನಾಟಕ ಬಂದ್‌(Karnataka Bandh) ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್‌ ಅವರು, ಈಗಾಗಲೇ ಸಿಎಂ ಬಂದ್‌ ಬೇಡ ಎಂದು ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಬಂದ್‌ ಮಾಡುವುದರಿಂದ ವ್ಯಾಪಾರಸ್ಥರು, ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಕೊರೋನಾದಿಂದ(Coronavirus) ತತ್ತರಿಸಿದ ವ್ಯಾಪಾರಸ್ಥರಿಗೆ ಮತ್ತೆ ಬಂದ್‌ ಆಚರಿಸುವುದು ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. ಕನ್ನಡಪರ ಸಂಘಟನೆಗಳು(Kannada organizations) ಬಂದ್‌ ಮಾಡದೇ ಶಾಂತಿಯುತ ಮೆರವಣಿಗೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಅವರು ಕೇಳಿಕೊಂಡರು.

Belagavi Violence: ನನಗೆ ಗೃಹ ಖಾತೆ ಕೊಡಿ, ಒಬ್ಬರೆ ಮಗಾ ಸದ್ದು ಮಾಡಿದರೆ ನೋಡಿ: ಯತ್ನಾಳ್‌

ಬೆಳಗಾವಿ ಅಧಿವೇಶನ ಅಂತ್ಯ, ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಯತ್ನಾಳ್

ಸುವರ್ಣಸೌಧದಲ್ಲಿ ಚರ್ಚೆ ಮಾಡುವುದಿದ್ದರೆ ಮಾತ್ರ ಅಧಿವೇಶನ ಕರೆಯಿರಿ. ಜಾತ್ರೆ ಮಾಡಲು ಈ ರೀತಿ ಅಧಿವೇಶನ ಕರೆಯಬೇಡಿ. ತುಂಬಾ ನೋವಿನಿಂದ ಅಧಿವೇಶನ ಮುಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 

ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಸುವರ್ಣಸೌಧ ಕೇವಲ 10-15 ದಿನಗಳ ಅಧಿವೇಶನಕ್ಕೆ ಸೀಮಿತವಾಗಿದೆ. ಇಲ್ಲಿ ಇಲಾಖೆಗಳು ಬರಬೇಕು. ಸುವರ್ಣ ಸೌಧದ ಪ್ರಯೋಜನ ಪಡೆಯುವಂತಾಗಬೇಕು. ಸದನ ಜಾತ್ರೆ ಆಗಬಾರದು ಎಂದು ಹೇಳಿದ್ದರು. 
 

click me!