ಸಿಎಂ ಅವರನ್ನು ಯಾರಾದ್ರು ಮುಟ್ಟೋಕೆ ಆಗುತ್ತಾ?: ಕೇಂದ್ರ ‌ಸಚಿವ ಸೋಮಣ್ಣ

By Girish Goudar  |  First Published Nov 14, 2024, 11:36 AM IST

ಬೆಳಗಾವಿ- ಧಾರವಾಡ ನೇರ ರೈಲು ದಿ. ಸುರೇಶ್ ಅಂಗಡಿ ಕನಸಾಗಿದೆ.  ಇಂದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ. ಸುರೇಶ್ ಅಂಗಡಿ ಕನಸು ಈ ಅವಧಿಯಲ್ಲಿ ಮುಗಿಸುವ ಪ್ರಯತ್ನ ಮಾಡುತ್ತೇವೆ. ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದೆ.  ಸಮಸ್ಯೆ ಬಗ್ಗೆ ಇಂದು ಚರ್ಚೆ ಮಾಡಿ ಸರಿ ಮಾಡುತ್ತೇವೆ.  ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಅವಧಿಯಲ್ಲಿ ಮುಗಿಸಲು ನಿರ್ಧರಿಸಿದ್ದಾರೆ: ಕೇಂದ್ರ ‌ಸಚಿವ ವಿ. ಸೋಮಣ್ಣ 


ಬೆಳಗಾವಿ(ನ.14):  ಯಾರಾದ್ರು ಸಿಎಂ ಮುಟ್ಟಿದ್ರೆ ಪೊಲೀಸರು ಕೇಸ್ ಹಾಕ್ತಾರೆ. ಆ ಅರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿರಬಹುದು. ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಅವರು ಏನು ಮಾತಾಡ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ. ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು  ಕೇಂದ್ರ ‌ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. 

ನನ್ನನ್ನು ಮುಟ್ಟಿದ್ರೆ ರಾಜ್ಯದ ಜನ ಸುಮ್ನೆ ಬಿಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ‌ಸಚಿವ ವಿ. ಸೋಮಣ್ಣ, ಸಿಎಂ ಅವರನ್ನು ಯಾರಾದ್ರು ಮುಟ್ಟೋಕೆ  ಆಗುತ್ತಾ ಎಂದು ವ್ಯಂಗ್ಯವಾಡಿದ್ದಾರೆ. 

Tap to resize

Latest Videos

undefined

16.73 ಕೋಟಿ ವೆಚ್ಚದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣ ಅಭಿವೃದ್ಧಿ: ವಿ.ಸೋಮಣ್ಣ

ಬೆಳಗಾವಿ- ಧಾರವಾಡ ನೇರ ರೈಲು ದಿ. ಸುರೇಶ್ ಅಂಗಡಿ ಕನಸಾಗಿದೆ.  ಇಂದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ. ಸುರೇಶ್ ಅಂಗಡಿ ಕನಸು ಈ ಅವಧಿಯಲ್ಲಿ ಮುಗಿಸುವ ಪ್ರಯತ್ನ ಮಾಡುತ್ತೇವೆ. ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿದೆ.  ಸಮಸ್ಯೆ ಬಗ್ಗೆ ಇಂದು ಚರ್ಚೆ ಮಾಡಿ ಸರಿ ಮಾಡುತ್ತೇವೆ.  ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಅವಧಿಯಲ್ಲಿ ಮುಗಿಸಲು ನಿರ್ಧರಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. 

ಲೋಕಾಪುರ- ಧಾರವಾಡ ರೈಲಿನ ಬಗ್ಗೆ ನಾನು ಆಮೇಲೆ ಮಾತನಾಡುತ್ತೇನೆ. ಅದರ ಬಗ್ಗೆ ನಾನು ಗಮನ ಹರಿಸುತ್ತೇನೆ. ಮುಂದಿನ ತಿಂಗಳು ಸ್ಲೀಪರ್‌ ಕೋಚ್ ವಂದೇ ಭಾರತ್ ಬರಲಿದೆ. ಬೆಳಗಾವಿ- ಬೆಂಗಳೂರು ಮಧ್ಯೆ ಮುಂದಿನ ತಿಂಗಳು ರೈಲು ಓಡಲಿದೆ ಎಂದು ತಿಳಿಸಿದ್ದಾರೆ. 

click me!